– ನಿಮ್ಮ ಹೆಸರನ್ನ `ರಾಮ್ ಪಾಲ್’ ಎಂದು ಬದಲಿಸಿಕೊಳ್ಳಿ’ ಎಂದ ಮುಸ್ಲಿಂ ನಾಯಕ
ಗೀತರಚನೆಕಾರ ಹಾಗೂ ಚಿತ್ರಕಥೆಗಾರ ಜಾವೇದ್ ಅಖ್ತರ್ (Javed Akhtar) ಅವರ ಹೇಳಿಕೆಯೊಂದು ಇದೀಗ ರಾಜಕೀಯ ಮತ್ತು ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ. ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮ (Lord Rama) ಇದ್ದಾನೆ. ರಾಮ ಕೇವಲ ವ್ಯಕ್ತಿಯಲ್ಲ, ಅದೊಂದು ಜೀವನ ವಿಧಾನ ಮತ್ತು ನೈತಿಕತೆಯ ಸಂಕೇತ ಎಂದು ಅವರು ಹೇಳಿದ್ದರು. ಈ ಹೇಳಿಕೆಗೆ ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಿಮ್ಮ ಹೆಸರನ್ನು ಜಾವೇದ್ ಅಖ್ತರ್ ಬದಲಿಗೆ `ರಾಮ್ ಪಾಲ್’ ಎಂದು ಬದಲಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
‘ರಾಮಾಯಣ’ ಸಿನಿಮಾ ಹಾಗೂ ಶಾರುಖ್ ಖಾನ್ ಅಭಿನಯದ ‘ಸ್ವದೇಶ್’ ಚಿತ್ರಕ್ಕಾಗಿ ತಾವು ಬರೆದ ಹಾಡಿನ ಕುರಿತು ಮಾತನಾಡುವ ವೇಳೆ ಜಾವೇದ್ ಅಖ್ತರ್ ಈ ಹೇಳಿಕೆ ನೀಡಿದ್ದರು. `ಮನ್ ಸೇ ರಾವಣ್ ಜೋ ನಿಕಾಲೇ, ರಾಮ್ ಉಸ್ಕೇ ಮನ್ ಮೇ ಹೈ’ ಎಂಬ ಹಾಡಿನ ಸಾಲುಗಳನ್ನು ಉಲ್ಲೇಖಿಸಿದ ಅವರು, ರಾಮನ ಪರಿಕಲ್ಪನೆ ಧಾರ್ಮಿಕ ಗುರುತನ್ನು ಮೀರಿದ್ದಾಗಿದೆ ಎಂದು ಹೇಳಿದ್ದರು. ರಾಮ ಕೇವಲ ಒಬ್ಬ ವ್ಯಕ್ತಿಯಲ್ಲ. ರಾಮ ಎಂದರೆ ನೈತಿಕತೆ, ರಾಮ ಒಂದು ಜೀವನ ವಿಧಾನ. ಅದೊಂದು ನಿರ್ದಿಷ್ಟ ಸೌಂದರ್ಯಪ್ರಜ್ಞೆ ಮತ್ತು ಮೌಲ್ಯಗಳ ಸಂಕೇತ. ಯಾವುದೇ ಧರ್ಮವನ್ನು ಅನುಸರಿಸಿದರೂ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮ ಇದ್ದಾನೆ. ರಾಮ ಒಂದು ಜೀವನ ವಿಧಾನ ಎಂದು ಜಾವೇದ್ ಅಖ್ತರ್ ಹೇಳಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕುಲ್ಗಾಮ್ನಲ್ಲಿ ಎನ್ಕೌಂಟರ್ – ಲಷ್ಕರ್ನ ಟಾಪ್ ಕಮಾಂಡರ್ ಲತೀಫ್ ಭಟ್ ಸಿಕ್ಕಿಬಿದ್ದಿರುವ ಶಂಕೆ
ಆದರೆ, ಈ ಹೇಳಿಕೆಗೆ ಮೌಲಾನಾ ಸಾಜಿದ್ ರಶೀದಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಾವೇದ್ ಅಖ್ತರ್ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದರ ಹಿಂದೆ ವಾಣಿಜ್ಯ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ತಮ್ಮನ್ನು ನಾಸ್ತಿಕ ಎಂದು ಗುರುತಿಸಿಕೊಳ್ಳುವ ಜಾವೇದ್ ಅಖ್ತರ್, ಇದೀಗ ರಾಮನ ಬಗ್ಗೆ ಇಷ್ಟೊಂದು ಗೌರವದಿಂದ ಮಾತನಾಡುತ್ತಿರುವುದೇಕೆ? ಜಾವೇದ್ ಅಖ್ತರ್ ಒಬ್ಬ ಉದ್ಯಮಿ. ಬಾಲಿವುಡ್ನಲ್ಲಿ ಹಾಡುಗಳನ್ನು ಮಾರಾಟ ಮಾಡಲಾಗುತ್ತದೆ. ಅವರು ಇಂತಹ ಹೇಳಿಕೆಗಳನ್ನು ನೀಡದಿದ್ದರೆ ಅವರ ಹಾಡುಗಳನ್ನು ಯಾರು ಖರೀದಿಸುತ್ತಾರೆ? ಎಂದು ರಶೀದಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ತಡವಾಗಿ ಹೋಗಿದ್ದೇ ಹಿಂದಿನ ಸಾಲಲ್ಲಿ ಕೂರಲು ಕಾರಣ: ಸಿದ್ದರಾಮಯ್ಯ ಸ್ಪಷ್ಟನೆ
ಜಾವೇದ್ ಅಖ್ತರ್ ಹಲವು ಸಾರ್ವಜನಿಕ ವೇದಿಕೆಗಳಲ್ಲಿ ತಾವು ನಾಸ್ತಿಕರು ಮತ್ತು ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ರಶೀದಿ ಹೇಳಿದ್ದಾರೆ. ನಾಸ್ತಿಕ ಎಂದು ಹೇಳಿಕೊಳ್ಳುವ ಇದೇ ವ್ಯಕ್ತಿ ಈಗ ರಾಮನ ಬಗ್ಗೆ ಇಷ್ಟೊಂದು ಭಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ನನ್ನದೊಂದು ಸಲಹೆ, ಜಾವೇದ್ ಅಖ್ತರ್ ಎಂಬ ನಿಮ್ಮ ಹೆಸರನ್ನು `ರಾಮ್ ಪಾಲ್’ ಎಂದು ಬದಲಿಸಿಕೊಳ್ಳಿ. ಆಗ ದೇಶದ ಶೇ.80ರಷ್ಟು ಹಿಂದೂ ಜನಸಂಖ್ಯೆಯಿಂದ ನಿಮಗೆ ಸಂಪೂರ್ಣ ಗೌರವ ಮತ್ತು ಮನ್ನಣೆ ಸಿಗಬಹುದು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ – ಸರ್ಕಾರಿ ಬಸ್ ಚಾಲಕನ ಮನೆ ಮೇಲೆ ಲೋಕಾಯುಕ್ತ ದಾಳಿ!
ಅಲ್ಲದೇ ಜಾವೇದ್ ಅಖ್ತರ್ ವಿಭಿನ್ನ ಸೈದ್ಧಾಂತಿಕ ಗುಂಪುಗಳ ನಡುವೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನೀವು ಒಂದು ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಬೇಕು. ಆಗ ಆ ಕಡೆಯ ಜನರು ನಿಮ್ಮನ್ನು ನಿಜವಾಗಿಯೂ ಗೌರವಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಲುಕೋಟೆಯಲ್ಲಿ ಕಣ್ಮನ ಸೆಳೆದ ವೈಭವದ ರಾಜಮುಡಿ ಉತ್ಸವ
ಚಿತ್ರರಂಗದಲ್ಲಿ ಜಾವೇದ್ ಅಖ್ತರ್ ಅವರ ಕುಟುಂಬದ ಸದಸ್ಯರು ನಿರ್ಮಾಣ, ಚಿತ್ರಕಥೆ ಮತ್ತು ಹಾಡುಗಳ ರಚನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರಶೀದಿ ಉಲ್ಲೇಖಿಸಿದ್ದಾರೆ. ಅವರು ಪರಸ್ಪರರ ಕೆಲಸವನ್ನು ಹೊಗಳದಿದ್ದರೆ ಅವರ ವ್ಯವಹಾರ ಹೇಗೆ ನಡೆಯುತ್ತದೆ? ಇದೇ ಇದರ ಹಿಂದಿರುವ ಅಸಲಿ ವಿಚಾರ ಎಂದು ಆರೋಪಿಸಿದ್ದಾರೆ. ನಾನು ಮುಸ್ಲಿಂ, ನನ್ನ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಗೌರವಯುತ ಜೀವನ ನಡೆಸುತ್ತಿದ್ದೇನೆ ಎಂದಿರುವ ರಶೀದಿ, ಜಾವೇದ್ ಅಖ್ತರ್ ಎರಡು ವಿಭಿನ್ನ ದೋಣಿಗಳಲ್ಲಿ ಕಾಲಿಡಲು ಪ್ರಯತ್ನಿಸುತ್ತಿದ್ದಾರೆ. ಎರಡೂ ಕಡೆಗಳನ್ನು ಏಕಕಾಲದಲ್ಲಿ ಹಿಡಿದಿಟ್ಟುಕೊಳ್ಳುವ ಅವರ ಪ್ರಯತ್ನ ಸರಿಯಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಹಾವೇರಿಯ ಕಬ್ಬು ಬೆಳೆಗಾರರಿಂದ ಬೃಹತ್ ಹೋರಾಟ – ಸಚಿವ ರುದ್ರಪ್ಪ ಲಮಾಣಿ ಮನೆ ಮುಂದೆ ಧರಣಿಗೆ ಕರೆ
ಈ ವಿವಾದಕ್ಕೆ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಕೂಡ ಪ್ರತಿಕ್ರಿಯಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ರಾಮಾಯಣ ಹಿಂದೂಗಳಿಗೆ ಪವಿತ್ರ ಗ್ರಂಥ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅದರಲ್ಲಿರುವ ವಿಷಯಗಳ ಬಗ್ಗೆ ಪ್ರತಿಯೊಬ್ಬರೂ ವಿಭಿನ್ನ ಅಭಿಪ್ರಾಯ ಹೊಂದಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ – ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ರಾಮಾಯಣ ನಿಸ್ಸಂದೇಹವಾಗಿ ನಮಗೆ ಪವಿತ್ರ ಗ್ರಂಥ. ಆದರೆ, ಕೆಲವರಿಗೆ ಅದರ ಕೆಲವು ಭಾಗಗಳ ಬಗ್ಗೆ ಆಕ್ಷೇಪಗಳಿರಬಹುದು. ಉದಾಹರಣೆಗೆ, ಸೀತೆಯನ್ನು ವನವಾಸಕ್ಕೆ ಕಳುಹಿಸಿದ್ದು ಏಕೆ ಎಂದು ಯಾರಾದರೂ ಪ್ರಶ್ನಿಸಬಹುದು. ಪ್ರತಿಯೊಬ್ಬರಿಗೂ ಅವರದ್ದೇ ಆದ ಆಲೋಚನೆ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಇಂತಹ ವಿಚಾರಗಳ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲು ಸಾಧ್ಯ? ಎಂದು ರಾಜೀವ್ ರೈ ಹೇಳಿದ್ದಾರೆ. ಇದನ್ನೂ ಓದಿ: ರಸ್ತೆ ಸೇರಿ ಗ್ರಾಮೀಣಾಭಿವೃದ್ಧಿಗೆ 16,000 ಕೋಟಿ ರೂ.: ಈಶ್ವರ ಖಂಡ್ರೆ
