ಬೆಂಗಳೂರು: ವೇಲ್ನಿಂದ ಕುತ್ತಿಗೆ ಬಿಗಿದು ವಿವಾಹಿತ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ತುರಹಳ್ಳಿ (Turahalli) ಸಮೀಪದ ಗುಬ್ಬಲಾಳದಲ್ಲಿ (Gubbalal) ನಡೆದಿದೆ.
ಯಾದಗಿರಿ (Yadagiri) ಮೂಲದ ಅಂಬಿಕಾ (21) ಕೊಲೆಯಾದ ಮಹಿಳೆ. ಇದನ್ನೂ ಓದಿ: ದಕ್ಷಿಣ ರಷ್ಯಾದಲ್ಲಿ ಸೇನಾ ಸಾರಿಗೆ ವಿಮಾನ ಪತನ – 17 ಮಂದಿ ಸಾವು
ಮೃತ ಅಂಬಿಕಾ ಅನೇಕ ವರ್ಷಗಳಿಂದ ಪತಿಯೊಂದಿಗೆ ಬೆಂಗಳೂರಲ್ಲಿ ವಾಸವಾಗಿದ್ದರು. ಪತಿ ಮಂಜುನಾಥ್ ಜಿಬಿಎ ಲಾರಿ ಡ್ರೈವರ್ ಆಗಿದ್ದರು. ಪಕ್ಕದ ಮನೆಯ ಸಂಬಂಧಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ತಲಘಟ್ಟಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವೇಲ್ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.ಇದನ್ನೂ ಓದಿ: ಸಿಎಂ ಡಿಕೆಶಿ ಮುಂದೆಯೇ `ಕೈ’ ಕಾರ್ಯಕರ್ತರ ಮೇಲೆ ಬಿಜೆಪಿ ಶಾಸಕಿ ಫುಲ್ ಗರಂ
