ಬಿಗ್ಬಾಸ್ ಮನೆಯಲ್ಲಿ ಈಗ ಯುವರಾಣಿಯರ ಅಧಿಕಾರ ಜೋರಾಗಿದೆ. ತಮ್ಮ ಸೇನೆ, ಸೈನ್ಯವನ್ನು ರೂಪಿಸಿಕೊಳ್ಳಲು ಈ ವಾರ ಟಾಸ್ಕ್ಗಳನ್ನು ನೀಡುತ್ತಿದ್ದಾರೆ.
ಟಾಸ್ಕ್ನಲ್ಲಿ ಗೆದ್ದು ಬೀಗಿದ ಯುವರಾಣಿಯ ತಂಡಕ್ಕೆ ಸಿಗುವ ಅಧಿಕಾರವೇ ನಾಮಿನೇಷನ್. ಆಗ ಓರ್ವ ಯುವರಾಣಿ ಇನ್ನೋರ್ವ ಯುವರಾಣಿಗೆ ಆ ತಂಡದ ಓರ್ವ ಸಿಬ್ಬಂದಿಯನ್ನು ನಾಮಿನೇಷನ್ ಮಾಡುವ ಅಧಿಕಾರ ಕೊಡುತ್ತಾರೆ. ಅದರಂತೆ ಆಯ್ಕೆಯಾದ ವ್ಯಕ್ತಿಯೂ ನಾಮಿನೇಟ್ ಆಗುತ್ತಾರೆ. ಇದನ್ನೂ ಓದಿ: ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ ಕೇಸ್| ನಟನಿಗೆ ಬಿಗ್ ರಿಲೀಫ್
ಯುವರಾಣಿ ಗಾನವಿ ಪರ ನಿಂತ ಮಂಜುನಾಥ್ಗೆ nomination ಕೊಡುಗೆ!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/c5mReyDJbr
— Colors Kannada (@ColorsKannada) November 17, 2026
ಯುವರಾಣಿ ಸೌಂದರ್ಯ ಅವರ ತಂಡವು ಟಾಸ್ಕ್ ಗೆದ್ದು ನಾಮಿನೇಷನ್ ಅಧಿಕಾರ ಪಡೆಯುತ್ತಾರೆ. ಅದರಂತೆ ಸೌಂದರ್ಯ ಯುವರಾಣಿ ಗಾನವಿಗೆ ನಾಮಿನೇಷನ್ ಮಾಡಲು ತಿಳಿಸುತ್ತಾರೆ. ಆಗ ಗಾನವಿ ತಮ್ಮ ತಂಡ ಮಂಜುನಾಥ್ ಅವರನ್ನು ನಾಮಿನೇಟ್ ಮಾಡುತ್ತಾರೆ.
ಮಂಜ-ಮಂಜಿ ಎಂದಲೇ ಜೊತೆಗಿದ್ದವರು ಇದೀಗ ಉಲ್ಟಾ ಹೊಡೆದಿದ್ದಾರೆ. ಗಾನವಿ ನಾಮಿನೇಟ್ ಮಾಡುತ್ತಿದ್ದಂತೆ ಶಾಕ್ ಆಗ ಮಂಜ, ಯಾವುದೇ ಒಂದು ಗೇಮ್ನಿಂದ ಪರ್ಸನಾಲಿಟಿ ಗೊತ್ತಾಗಲ್ಲ, ಒಂದೇ ಗೇಮ್ನಿಂದ ಟ್ರೋಫಿ ಎತ್ತಿಕೊಂಡು ಹೋಗೋಕೆ ಆಗಲ್ಲ. ಪರ್ಸನಾಲಿಟಿ ಅಂತ ಬಂದಾಗ ನಾನು ಸ್ಟ್ಯಾಂಡ್ ತೆಗೆದುಕೊಂಡಿದ್ದೀನಿ ಎಂದಿದ್ದಾರೆ.ಇದನ್ನೂ ಓದಿ: ಮುಂಬೈನಲ್ಲಿ 200 ಜನ ರೆಡಿಯಾಗಿದ್ದಾರೆ – ಅಮಿತಾಬ್ ಬಚ್ಚನ್ಗೆ ಗ್ಯಾಂಗ್ಸ್ಟರ್ ಗೋಲ್ಡಿ ಧಿಲ್ಲೋನ್ನಿಂದ ಜೀವ ಬೆದರಿಕೆ
ಬಿಗ್ಬಾಸ್ ಆಟ ಎಂದ ಮೇಲೆ ಟ್ವಿಸ್ಟ್ಗಳು ಇದ್ದೇ ಇರುತ್ತವೆ. ಯುವರಾಣಿಯರ ಕೈಗೆ ನಾಮಿನೇಷನ್ ಅಧಿಕಾರ ಸಿಕ್ಕಿದ್ದೇ ತಡ, ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ.ಇದನ್ನೂ ಓದಿ: ಮೂರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
