ನವದೆಹಲಿ: ಮನೆಯ ಮೇಲ್ಛಾವಣಿ ಕುಸಿದು (Roof Collapse) ಮೂರು ವರ್ಷದ ಮಗು ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ದೆಹಲಿಯ (Delhi) ಪೂರ್ವ ಭಾಗದ ಕಸ್ತೂರ್ಬಾ ನಗರದಲ್ಲಿ (Kasturba Nagar) ಮಂಗಳವಾರ ಮುಂಜಾನೆ ನಡೆದಿದೆ.
ಮೃತರನ್ನು ಮೂರು ವರ್ಷದ ಮಗು ಹಾಗೂ ಪಿಂಟು (35) ಎಂದು ಗುರುತಿಸಲಾಗಿದೆ. ಮೇಲ್ಛಾವಣಿ ಕುಸಿದ ಸಂದರ್ಭದಲ್ಲಿ ಮನೆಯಲ್ಲಿದ್ದ ಎಂಟು ಮಂದಿ ಬಾಡಿಗೆದಾರರಾಗಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇನ್ನೂ ಆರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಸದ್ಯ ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಸಿನಿಮಾ ನಟರ ವಿರುದ್ಧ ಯುಟಿ ಖಾದರ್ ಅಸಮಾಧಾನ
ಘಟನೆ ನಡೆದ ಸ್ಥಳಕ್ಕೆ ಬಿಜೆಪಿ ಕೌನ್ಸಿಲರ್ ಪಂಕಜ್ ಲೂಥ್ರಾ ಭೇಟಿ ನೀಡಿದ್ದಾರೆ. ಕಟ್ಟಡ ಕುಸಿತಕ್ಕೆ ಅಕ್ರಮ ನಿರ್ಮಾಣ ಹಾಗೂ ಒತ್ತುವರಿಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ಕಟ್ಟಡ ನಿರ್ಮಾಣವಾಗಿದ್ದ ಜಾಗ ರೈಲ್ವೆ ಇಲಾಖೆಗೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ. ಕಟ್ಟಡ ನಿರ್ಮಾಣವಾಗಿರುವ ಜಾಗ ವಾಸ್ತವವಾಗಿ ರೈಲ್ವೆ ಇಲಾಖೆಗೆ ಸೇರಿದೆ. ಕಳೆದ ಐದರಿಂದ ಆರು ದಶಕಗಳಿಂದ ಜನರು ಈ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: UP Election 2027: ಮೈತ್ರಿ ಸೀಟು ಹಂಚಿಕೆ ಚರ್ಚೆ ಚುರುಕು; ಕಾಂಗ್ರೆಸ್ನ 181 ಕ್ಷೇತ್ರ ಬೇಡಿಕೆಗೆ ಎಸ್ಪಿ ಒಪ್ಪುತ್ತಾ?
