ಮನಿಲಾ: ಫಿಲಿಫೈನ್ಸ್ನ (Philippines) ರಾಜಧಾನಿ ಮನಿಲಾದಲ್ಲಿರುವ ಐತಿಹಾಸಿಕ ಗುರುದ್ವಾರಕ್ಕೆ (Gurudwara) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭೇಟಿ ನೀಡಿದ್ದಾರೆ. ಈ ವೇಳೆ, ಗುರುದ್ವಾರದ ಪುನರ್ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಗುರುದ್ವಾರವು ಅಪಾರ ಆಧ್ಯಾತ್ಮಿಕ ಮಹತ್ವ ಹೊಂದಿದೆ. ಗುರು ಸಾಹಿಬ್ ಅವರ ಬೋಧನೆಗಳಿಂದ ಪ್ರೇರಣೆ ಪಡೆದು ಸಿಖ್ ಸಮುದಾಯ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಸಿಖ್ ಸಮುದಾಯದ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗುರುದ್ವಾರಕ್ಕೆ ಭೇಟಿ ನೀಡಲು ಸಾಧ್ಯವಾಗಿದ್ದಕ್ಕೆ ತುಂಬಾ ಧನ್ಯವೆಂದು ಭಾವಿಸುತ್ತಿದ್ದೇನೆ. ಇದನ್ನೂ ಓದಿ: ಅಮೆರಿಕದ ಮೇಲೆ ಡರ್ಟಿ ಬಾಂಬ್ – ರಾಸಾಯನಿಕ ದಾಳಿಗೆ ಇರಾನ್ ಸಂಚು?
Feeling very blessed to be at the Gurudwara Khalsa Diwan in Manila.
ਗੁਰਦੁਆਰਾ ਖ਼ਾਲਸਾ ਦੀਵਾਨ, ਮਨੀਲਾ ਵਿਖੇ ਆ ਕੇ ਬਹੁਤ ਵਡਭਾਗਾ ਮਹਿਸੂਸ ਕਰ ਰਿਹਾ ਹਾਂ। https://t.co/JNuNFMq6Ja
— Narendra Modi (@narendramodi) November 17, 2026
ಮನಿಲಾದ ಈ ಗುರುದ್ವಾರವು 1901ರಲ್ಲಿ ಸ್ಥಾಪನೆಗೊಂಡು, 1903ರಲ್ಲಿ ಔಪಚಾರಿಕವಾಗಿ ಸಂಘಟಿತವಾದ ಸಂಸ್ಥೆಯಾಯಿತು. 1924ರಲ್ಲಿ ‘ಖಲ್ಸಾ ದಿವಾನ್’ ಎಂದು ನೋಂದಾಯಿಸಿಕೊಂಡಿತು. ಇದು ಅತ್ಯಂತ ಹಳೆಯ ಗುರುದ್ವಾರವಾಗಿದ್ದು, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜ ಸೇವೆಗಳ ಮೂಲಕ ಮನಿಲಾದಲ್ಲಿರುವ ಸಿಖ್ ಸಮುದಾಯ ಹಾಗೂ ಇತರ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ.
ಈ ಗುರುದ್ವಾರವು ಭಾರತೀಯ-ಸಿಖ್ ಸಮುದಾಯ ಮತ್ತು ಫಿಲಿಪೈನ್ಸ್ ಸಮಾಜದ ನಡುವೆ ಒಂದು ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನೂ ಓದಿ: ಅಪ್ಪ, ಅಮ್ಮ ಭೇಟಿಯಾಗಿದ್ದ ರೆಸ್ಟೋರೆಂಟ್ಗೆ ಗರ್ಲ್ಫ್ರೆಂಡ್ ಜೊತೆ ಹೋಗಿದ್ದೆ – ಮೊದಲ ಬಾರಿ ಗೆಳತಿ ಬಗ್ಗೆ ರಾಹುಲ್ ಗಾಂಧಿ ಮಾತು
