ರಾಮನಗರ: ನಮ್ಮನ್ನು ನಾಯಕರನ್ನಾಗಿ ಬೆಳೆಸಿ ಉಳಿಸಿದ ರಾಮನಗರವನ್ನು (Ramanagara) ಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ರಾಮನಗರ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಾಗಮಲೆ ಮಹದೇಶ್ವರ ಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ರಾಮನಗರವನ್ನು ನಿರ್ಲಕ್ಷಿಸುವ ಪ್ರಶ್ನೆಗೆ ಬರುವುದಿಲ್ಲ. ಪಕ್ಷವನ್ನು ಬಲಪಡಿಸುವುದು ಹಾಗೂ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಮಯವನ್ನು ಜಿಲ್ಲೆಗೆ ಮೀಸಲಿಡಲಾಗುವುದು. ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಕಾರ್ಯಕರ್ತರಿಗೆ ಹಾಗೂ ಅವರ ಭಾವನೆಗಳಿಗೆ ನಾನು ನಿರಾಶೆ ಉಂಟು ಮಾಡುವುದಿಲ್ಲ. ಪಕ್ಷದ ಹಿತಕ್ಕಾಗಿ, ಕಾರ್ಯಕರ್ತರ ಸಲುವಾಗಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಉಡುಪಿ | ಬೆಂಗಳೂರಿಗೆ ಹೊರಟಿದ್ದ ಟೆಕ್ಕಿ ಅಪಘಾತಕ್ಕೆ ಬಲಿ
ನಾನು ರಾಷ್ಟ್ರ ರಾಜಕಾರಣದಲ್ಲಿ ಎಷ್ಟೇ ಬ್ಯುಸಿ ಇದ್ದರೂ ರಾಮನಗರದ ನಾಲ್ಕು ಕ್ಷೇತ್ರಗಳಿಗೆ ಸಮಯ ಕೊಡಲು ನಿರ್ಧರಿಸಿದ್ದೇನೆ. ನಾಲ್ಕು ಕ್ಷೇತ್ರಗಳಲ್ಲಿ ಪ್ರವಾಸ ಮಾಡಲು ನಾನು, ನಿಖಿಲ್ ಸಮಯ ನಿಗದಿ ಮಾಡುತ್ತೇವೆ. ಈ ಜಿಲ್ಲೆಯ ಜನತೆಯಿಂದ ನಾವು ನಾಯಕರಾಗಿದ್ದೇವೆ. ನಮ್ಮನ್ನು ಸೃಷ್ಟಿ ಮಾಡಿರುವ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ನನಗೆ ನನ್ನ ಕಾರ್ಯಕರ್ತರು ಮುಖ್ಯ. ನನ್ನನ್ನು ನಾಯಕನನ್ನಾಗಿ ಸೃಷ್ಟಿಸಿದವರು ಈ ಜಿಲ್ಲೆಯ ಕಾರ್ಯಕರ್ತರು. ಅವರ ಭಾವನೆಗಳೇ ನನ್ನ ಭಾವನೆಗಳು. ಹೀಗಾಗಿ ಅವರಿಗೆ ನಿರಾಶೆ ಉಂಟು ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಿರಿಯೂರು ಬೈ ಎಲೆಕ್ಷನ್| ‘ಬಿಜೆಪಿಗೇ ಟಿಕೆಟ್’ ಎಂದ ಅಶೋಕ್ ಹೇಳಿಕೆಗೆ ಹೆಚ್ಡಿಕೆ ಅಸಮ್ಮತಿ
ಪಕ್ಷದ ಸಂಘಟನೆಯಲ್ಲಿ ನಾವೆಂದು ಹಿಂದೆ ಬಿದ್ದಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದ್ದರೂ ನಿಖಿಲ್ ಕುಮಾರಸ್ವಾಮಿ ಅವರು ಸುಮಾರು 60 ರಿಂದ 70 ಕ್ಷೇತ್ರಗಳನ್ನು ಪ್ರವಾಸ ಮಾಡಿ ಸಂಘಟನೆ ಕೆಲಸ ಮಾಡಿದ್ದಾರೆ. ಮೂರು ಬಾರಿ ಅವರು ಸೋತಿದ್ದರು ಕೂಡ ಎದೆಗುಂದದೆ ನಿರಂತರವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಕೂಡ ಅವರು ವ್ಯಾಪಕವಾಗಿ ಪ್ರವಾಸ ಮಾಡುತ್ತಿದ್ದು, ಸಂಘಟನೆಗೆ ಶಕ್ತಿ ತುಂಬುತ್ತಿದ್ದಾರೆ. ಇನ್ನೊಂದೆಡೆ ನಾನು ಕೂಡ ತಿಂಗಳಿಗೆ ಎರಡು ಮೂರು ದಿನ ಜಿಲ್ಲೆಗೆ ಮೀಸಲು ಇಡುತ್ತೇನೆ ಎಂದರು. ಇದನ್ನೂ ಓದಿ: ಇರಾನ್ ಬಳಿ ಇನ್ನೂ 2,500 ಕ್ಷಿಪಣಿಗಳಿವೆ: ಅಮೆರಿಕ ಗುಪ್ತಚರ
ರಾಮನಗರ ಜಿಲ್ಲೆಯಿಂದ ನಮ್ಮನ್ನು ಖಾಲಿ ಮಾಡಿಸುತ್ತೇವೆ ಎಂದು ಕೆಲವರು ಭ್ರಮೆಯಲ್ಲಿದ್ದಾರೆ. ಅವರಿಗೆ ಭ್ರಮೆಯಲ್ಲೇ ಇರುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಜಿಲ್ಲೆಯ ಜನರು ಹಾಗೂ ಕಾರ್ಯಕರ್ತರು ನಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ದೇವೇಗೌಡರಿಂದ ಇದುವರೆಗೆ ಪಕ್ಷವನ್ನು ಪ್ರಬಲವಾಗಿ ಬೆಳೆಸಿ ಉಳಿಸಿಕೊಂಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಪೊಲೀಸ್ ಭದ್ರಕೋಟೆಯಲ್ಲಿ ಕೆಎಎಸ್ ಪ್ರಿಲಿಮಿನರಿ ಎಕ್ಸಾಂ – ಬನಿಯನ್ನಲ್ಲೇ ಪರೀಕ್ಷೆ ಬರೆದ ಯುವಕ
ರಾಮನಗರ ನನಗೆ ರಾಜಕೀಯವಾಗಿ ಜನ್ಮ ಕೊಟ್ಟಂತಹ ಕ್ಷೇತ್ರ. ಈ ಜಿಲ್ಲೆಯಿಂದ ನಮ್ಮ ಕುಟುಂಬವನ್ನು ಹೊರಗೆ ಹಾಕುತ್ತೇವೆ ಎಂದು ಕೆಲ ವಿರೋಧಿಗಳು ಶಪಥ ಮಾಡಿದ್ದಾರೆ. ಆದರೆ ಅವರಿಗೆ ಆ ಶಕ್ತಿ ಇಲ್ಲ. ನಾನು ಎಲ್ಲೇ ಹೋದರೂ ಕುಮಾರಣ್ಣ ಅಂತ ಜನ ಆಶೀರ್ವಾದ ಮಾಡುತ್ತಾರೆ. ಜನರ ಪ್ರೀತಿ ಮುಂದೆ ಇವರ ರಾಜಕಾರಣ ನಡೆಯಲ್ಲ. ದೊಡ್ಡ ಕುರುಬರಹಳ್ಳಿಯಲ್ಲಿ ಚಿಲ್ಲರೆ ರಾಜಕಾರಣ ಮಾಡಿದ್ದಾರೆ. 2004ರಲ್ಲಿ ನನಗೂ ಇದೇ ರೀತಿ ಮಾಡಿದ್ದರು. ರಾಮನಗರ ತಾಲೂಕಿನ ಕೂಟಗಲ್ಲು ಹೊಸೂರು ಗ್ರಾಮದಲ್ಲೂ ದೇವಾಲಯಕ್ಕೆ ಬೀಗ ಹಾಕಿ ನನಗೆ ಪ್ರವೇಶ ನಿರಾಕರಿಸಿದ್ದರು. ಈಗಲೂ ಅದೇ ರೀತಿ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಶಾಂತಿಯಿಂದ ಇರಬೇಕು ಎಂದು ಹೇಳಿದ್ದೇವೆ. ನಮಗೂ, ಕಾಂಗ್ರೆಸ್ನವರಿಗೂ ಇರುವ ವ್ಯತ್ಯಾಸ. ದೇವಾಲಯಕ್ಕೆ ಬೀಗ ಹಾಕಿದ್ದು ತಪ್ಪು ಎಂದು ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಹೇಳಿದ್ದಾರೆ. ಅದೇ ಸಮಾಧಾನದ ಸಂಗತಿ. ಕೊನೇಪಕ್ಷ ಅದು ತಪ್ಪು ಅಂತ ಅವರು ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಮಾಲದಿನ್ನಿ ಕ್ರಾಸ್ ಬಳಿ ಲಾರಿ, ಕಾರು ಮಧ್ಯೆ ಅಪಘಾತ; ಸ್ಥಳದಲ್ಲೇ ಮೂವರ ದುರ್ಮರಣ
ಕೆಲವರು ನಮ್ಮ ಸಾಕ್ಷಿಗುಡ್ಡೆ ಬಗ್ಗೆ ಪ್ರಶ್ನೆ ಮಾಡುತ್ತಾರೆ. ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿ ತಂದಿದ್ದು ನಾವೇ ಅಂತಾರೆ. ಕಳೆದ ಮೂರುವರೆ ವರ್ಷದಲ್ಲಿ ಈ ತಾಲೂಕು, ಈ ಜಿಲ್ಲೆ ಯಾವ ರೀತಿ ಇತ್ತು. ಈಗ ಏನಾದರೂ ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಿದ್ದಾರಾ? ಕೇವಲ ಘೋಷಣೆಗಳೇ ಈ ಸರ್ಕಾರದ ಸಾಕ್ಷಿಗುಡ್ಡೆ ಆಗಿವೆ. ಕನಕಪುರದಲ್ಲಿ ಊರೂ ಊರುಗಳನ್ನೇ ಎತ್ತಂಗಡಿ ಮಾಡುತ್ತಿರುವುದೇನೆ ಇವರ ಸಾಕ್ಷಿಗುಡ್ಡೆ. ಕಲ್ಲುಗಳನ್ನು ಹೊಡೆದು ವಿದೇಶಕ್ಕೆ ಕಳಿಸಿದ್ದು ಇವರ ಸಾಕ್ಷಿಗುಡ್ಡೆ. ಸದ್ಯ ಈಗ ಮೆಟ್ರೋಗೆ ರಾಜ್ಯದ ಕಲ್ಲು ಬಳಸಿ ಎಂದು ಹೇಳಿದ್ದಾರೆ. ನನಗೆ ಸಂತೋಷ ಆಯಿತು. ಜರ್ಮನಿಗೆ ಕದ್ದುಮುಚ್ಚಿ ಕಲ್ಲು ಕಳಿಸಿದ್ದರಲ್ಲಾ, ಪಾಪ ಈಗ ಜ್ಞಾನೋದಯ ಆಗಿ ಇಲ್ಲೇ ಬಳಸ್ತಿದ್ದಾರಂತೆ ಎಂದು ಸಿಎಂ ಡಿಕೆಶಿ ಬಗ್ಗೆ ವ್ಯಂಗ್ಯವಾಡಿದರು. ಇದನ್ನೂ ಓದಿ: ಮಾಬುಕಳ ಸೀತಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ – ಇಬ್ಬರ ಮೃತದೇಹ ಪತ್ತೆ
