ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ (Gundlupet) ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದ (Aanjaneya Temple) ಮುಂಭಾಗದಲ್ಲಿ ಮಾಂಸ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಕಿಡಿಗೇಡಿಗಳ ಕೃತ್ಯವೆಂದು ಶಂಕಿಸಿರುವ ವಿವಿಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿವೆ. ಪವಿತ್ರ ಧಾರ್ಮಿಕ ಸ್ಥಳದ ಮುಂದೆ ಮಾಂಸ ಎಸೆದಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯತ್ನ ಎಂದು ಸಂಘಟನೆಗಳು ಆರೋಪಿಸಿವೆ. ಇದನ್ನೂ ಓದಿ: ಪತ್ನಿ ಮೇಲಿನ ಕೋಪಕ್ಕೆ ಸ್ಕ್ರಾಪ್ ಗೋಡೌನ್ಗಳಿಗೆ ಬೆಂಕಿಯಿಟ್ಟ ಪತಿ – ಉಸಿರುಗಟ್ಟಿ ಅಮಾಯಕ ವ್ಯಕ್ತಿ ಸಾವು
ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಕೃತ್ಯಗಳು ಹಾಗೂ ಮಾಂಸ ಮಾರಾಟ ದಂಧೆಗಳು ಹೆಚ್ಚಾಗುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಮುಖಂಡರು, ಕೂಡಲೇ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಲಾಗಿದೆ. ಇದನ್ನೂ ಓದಿ: ಟ್ರೆಕ್ಕಿಂಗ್ಗೆ ಬಂದು ದಾರಿ ತಪ್ಪಿದ ಒಡಿಶಾ ಮೂಲದ ಯೂಟ್ಯೂಬರ್ – ರೋಪ್ ಸಹಾಯದಿಂದ ರಕ್ಷಣೆ
