ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ (New Zealand) ವಿರದ್ದ 22 ರನ್ಗಳ ಜಯ ಸಾಧಿಸಿದ ಭಾರತ(Team India) ಏಕದಿನ ಸರಣಿಯನ್ನು 3- 1 ಅಂತರಿದಿಂದ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 42.1 ಓವರ್ಗಳಲ್ಲಿ 209 ರನ್ಗಳಿಗೆ ಆಲೌಟ್ ಆಯ್ತು. ಸುಲಭದ ಮೊತ್ತವಾಗಿದ್ದರೂ ಭಾರತೀಯ ಬೌಲರ್ಗಳ ನಿಖರ ಬೌಲಿಂಗ್ನಿಂದಾಗಿ 48.1 ಓವರ್ಗಳಲ್ಲಿ 187 ರನ್ಗಳಿಗೆ ಆಲೌಟ್ ಆಯ್ತು.
ನ್ಯೂಜಿಲೆಂಡ್ ತಂಡ 64 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಉತ್ತಮವ ಸ್ಥಿತಿಯಲ್ಲಿತ್ತು. ಆದರೆ 82 ರನ್ಗಳಿದ್ದಾಗ ನಿಕ್ ಕೆಲ್ಲಿ ಔಟಾದರೆ ನಂತರ 1 ರನ್ ಗಳಿಸುವಷ್ಟರಲ್ಲಿ ಫಿನ್ ಎಲೆನ್ ಔಟಾದ ನಂತರ ಪತನ ಆರಂಭವಾಯಿತು.
ಕೊನೆಯಲ್ಲಿ ಬ್ರಾಸ್ವೆಲ್ 19 ರನ್, ಮಿಚೆಲ್ ಸ್ಯಾಂಟ್ನರ್ 24 ರನ್ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಕೊನೆಯಲ್ಲಿ ಉತ್ತಮ ಜೊತೆಯಾಟ ಬಾರದ ಕಾರಣ ಅಂತಿಮವಾಗಿ ನ್ಯೂಜಿಲೆಂಡ್ 187 ರನ್ಗಳಿಗೆ ಅಲೌಟ್ ಆಯ್ತು.
ಭಾರತದ ಪರ ಆರ್ಶ್ದೀಪ್ ಸಿಂಗ್ 3 ವಿಕೆಟ್ ಪಡೆದರೆ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು. ನಬಿ, ಯಶ್ ಠಾಕೂರ್ ನಮನ್ ಧೀರ್ ತಲಾ ಒಂದೊಂದು ವಿಕೆಟ್ ಕಿತ್ತರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಕಿವೀಸ್ ಬೌಲರ್ಗಳು ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ 34 ರನ್ಗಳಾಗುವಷ್ಟರಲ್ಲಿ ಪ್ರಮುಖ 3 ವಿಕೆಟ್ಗಳು ಪತನಗೊಂಡವು. ಈ ಸಂಕಷ್ಟದ ಹಂತದಲ್ಲಿ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ 55 ಎಸೆತಗಳಲ್ಲಿ 52 ರನ್ಗಳ ಉಪಯುಕ್ತ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.
ಶ್ರೇಯಸ್ ಅಯ್ಯರ್ 22 ರನ್ ಗಳಿಸಿ ಔಟಾದರೆ, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಅಕ್ಷರ್ ಪಟೇಲ್ ಹಾಗೂ ಇಶಾನ್ ಕಿಶನ್ ತಲಾ 46 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಂತಿಮ ಹಂತದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಅರ್ಶ್ದೀಪ್ ಸಿಂಗ್ ತಲಾ 14 ರನ್ಗಳ ಅಮೂಲ್ಯ ಕಾಣಿಕೆ ನೀಡಿದ ಪರಿಣಾಮ, ಭಾರತ 42.1 ಓವರ್ಗಳಲ್ಲಿ 209 ರನ್ ಗಳಿಸಿ 200ರ ಗಡಿ ದಾಟಲು ಯಶಸ್ವಿಯಾಯಿತು.
ಭಾರತ ಸಾಧನೆ:
ನ್ಯೂಜಿಲಂಡ್ ಕಳೆದ 7 ವರ್ಷಗಳಿಂದ ತವರಿನಲ್ಲಿ ಯಾವುದೇ ಸೋಲು ಕಂಡಿರಲಿಲ್ಲ. ಆದರೆ ಈಗ ಭಾರತ ವಿರುದ್ಧ ಸೋತಿದೆ.
