ಕೋಲ್ಕತ್ತಾ: 2026ರ ಟಿ20 ವಿಶ್ವಕಪ್ ಟೂರ್ನಿಯ ಮಧ್ಯಭಾಗದಿಂದ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ತೀವ್ರ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ.
– Captain.
– First match in SMAT.
– Run Chase.
– Fifty with bat.
– Player of the match.SURYAKUMAR YADAV HAS ARRIVED – Great news for Mumbai Indians in IPL 2027 💙 https://t.co/Ykc6UkrClU
— Johns. (@CricCrazyJohns) November 14, 2026
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (Syed Mushtaq Ali Trophy) ಮುಂಬೈ ತಂಡದ (Mumbai Team) ನಾಯಕನಾಗಿ ಆಡುತ್ತಿರುವ ಸ್ಕೈ ಮತ್ತೆ ಭರ್ಜರಿ ಬ್ಯಾಟಿಂಗ್ ಮಾಡಿ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಕೋಲ್ಕತ್ತಾದ ಜಾದವ್ಪುರ ವಿಶ್ವವಿದ್ಯಾಲಯ ಕ್ಯಾಂಪಸ್ 2ನೇ ಮೈದಾನದಲ್ಲಿಂದು ಹೈದರಾಬಾದ್ (ಇಂಡಿಯಾ) ವಿರುದ್ಧ ನಡೆದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ 20 ಓವರ್ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಸ್ಪರ್ಧಾತ್ಮಕ ರನ್ ಗುರಿ ಬೆನ್ನಟ್ಟಿದ ಮುಂಬೈ 13.1 ಓವರ್ಗಳಲ್ಲೇ ಕೇವಲ 3 ವಿಕೆಟ್ ನಷ್ಟಕ್ಕೆ 174 ರನ್ ಚಚ್ಚಿ ಗೆದ್ದು ಬೀಗಿತು.
ಕ್ಯಾಪ್ಟನ್ ಸೂರ್ಯ ಸ್ಫೋಟಕ ಫಿಫ್ಟಿ
2026ರ ವಿಶ್ವಕಪ್ನ ಮಧ್ಯಭಾಗದಿಂದಲೂ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಬಿಸಿಸಿಐ ಟಿ20 ನಾಯಕತ್ವದಿಂದಲೂ ಹೊರದಬ್ಬಿತು. ಬಳಿಕ ಯಾವುದೇ ಸಮಯದಲ್ಲೂ ಟೀಂ ಇಂಡಿಯಾ ಪರ ಆಡಲು ರೆಡಿ ಅಂತಾ ಸೂರ್ಯಕುಮಾರ್ ಹೇಳಿದ್ದರು. ಆದ್ರೆ ಇಂದಿನ ಪಂದ್ಯದಲ್ಲಿ 285.71 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಸೂರ್ಯ ಕೇವಲ 21 ಎಸೆತಗಳಲ್ಲಿ 60 ರನ್ (5 ಸಿಕ್ಸರ್, 6 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇದರಿಂದ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು.

ಸದ್ಯ ಸೂರ್ಯ ಅವರ ಇಂದಿನ ಬ್ಯಾಟಿಂಗ್ ಪ್ರದರ್ಶನ ಅವರ ಅಭಿಮಾನಿಗಳಿಗೂ ರಸದೌತಣ ನೀಡಿದೆ. ಸೂರ್ಯಕುಮಾರ್ ಅವರ ಹಳೆಯ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
