– ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ನಜ್ಜುಗುಜ್ಜು
ಚಿಕ್ಕಮಗಳೂರು: ಮಹೀಂದ್ರಾ ಥಾರ್ (Mahindra Thar) ಹಾಗೂ ಕಾರಿನ (Car) ನಡುವೆ ಮುಖಾಮುಖಿ ಡಿಕ್ಕಿ (Accident) ಸಂಭವಿಸಿ ಕಾರಿನಲ್ಲಿದ್ದ ಮೆಸ್ಕಾಂ (MESCOM) ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಡೂರು ಸಮೀಪದ ಬುಕ್ಕಸಾಗರ ಗೇಟ್ ಬಳಿ ನಡೆದಿದೆ. ಈ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೆಸ್ಕಾಂನ ಎಇ ಸನತ್ (49) ಮೃತ ದುರ್ದೈವಿ. ಗಂಭೀರವಾಗಿ ಗಾಯಗೊಂಡ ಮೂವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಎರಡು ವಾಹನಗಳು ನಜ್ಜುಗುಜ್ಜಾಗಿವೆ. ಇದನ್ನೂ ಓದಿ: ಸೇತುವೆಯ ತಡೆಗೋಡೆಗೆ ಗುದ್ದಿ 20 ಅಡಿ ಕಂದಕಕ್ಕೆ ಬಿದ್ದ ಬಸ್ – ಮಹಿಳೆ ಸಾವು, 20 ಮಂದಿಗೆ ಗಾಯ
ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 10 ಅಡಿ ಆಳದಲ್ಲಿ ಮುಚ್ಚಿಟ್ಟ ಚುಕ್ಕಿ ಜಿಂಕೆ ಅವಶೇಷ ಪತ್ತೆಹಚ್ಚಿದ ʻರೋಜ್ಹಿʼ – ಕಳ್ಳಬೇಟೆಗಾರ ಅರೆಸ್ಟ್
