ಮುಂಬೈ: ಮಹಾರಾಷ್ಟ್ರದ (Maharashtra) ಛತ್ರಪತಿ ಸಂಭಾಜಿನಗರದಲ್ಲಿ ಐಷಾರಾಮಿ ಬಸ್ಸೊಂದು ಸೇತುವೆಯ ತಡೆಗೋಡೆಗೆ ಗುದ್ದಿ, 20 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ (Accident) 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
26 ಪ್ರಯಾಣಿಕರಿದ್ದ ಬಸ್ (Bus), ಪುಣೆಯಿಂದ ನಾಗ್ಪುರಕ್ಕೆ ತೆರಳುತ್ತಿತ್ತು. ಈ ವೇಳೆ ಕೇಂಬ್ರಿಡ್ಜ್ ಚೌಕ್ ಬಳಿ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಬಸ್ ಕೆಳಗೆ ಬಿದ್ದಿದೆ. ಇದರಿಂದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: 10 ಅಡಿ ಆಳದಲ್ಲಿ ಮುಚ್ಚಿಟ್ಟ ಚುಕ್ಕಿ ಜಿಂಕೆ ಅವಶೇಷ ಪತ್ತೆಹಚ್ಚಿದ ʻರೋಜ್ಹಿʼ – ಕಳ್ಳಬೇಟೆಗಾರ ಅರೆಸ್ಟ್
ಅವಶೇಷಗಳ ಅಡಿ ಸಿಕ್ಕಿಬಿದ್ದ ಪ್ರಯಾಣಿಕರನ್ನು ಸ್ಥಳೀಯ ನಿವಾಸಿಗಳು ಮತ್ತು ರಕ್ಷಣಾ ತಂಡಗಳು ಹೊರಗೆ ತೆಗೆದು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ | ರಂಗಾರೆಡ್ಡಿಯಲ್ಲಿ ಮಿಲಿಟರಿ ಟ್ರಕ್ ಪಲ್ಟಿಯಾಗಿ 8 ಸೇನಾ ಸಿಬ್ಬಂದಿಗೆ ಗಾಯ
