ಕೋಲಾರ: ಬರ ಎದುರಾಗಿ ಕೋಲಾರದಲ್ಲಿ (Kolar) ಕೆರೆಗಳು ಖಾಲಿಯಾಗುತ್ತಿದ್ದಂತೆ ಅಕ್ರಮ ಫಿಲ್ಟರ್ ಮರಳು ಮಾಫಿಯಾ (Illegal Sand Mafia) ಜೋರಾಗಿದೆ. ಪರಿಣಾಮ ತಡೆಯುವಲ್ಲಿ ವಿಫಲವಾದ ಹಾಗೂ ಪರೋಕ್ಷ ಬೆಂಬಲದ ಆರೋಪದ ಮೇಲೆ ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ (PSI) ಹಾಗೂ ಕಾನ್ಸ್ಟೇಬಲ್ (Constable) ಅಮಾನತು ಮಾಡಲಾಗಿದೆ.
ಕೋಲಾರ (Kolar) ಜಿಲ್ಲೆ ಮುಳಬಾಗಿಲು ತಾಲೂಕು ನಂಗಲಿ ಪೊಲೀಸ್ ಠಾಣೆಯ ಪಿಎಸ್ಐ ವಿದ್ಯಾಶ್ರೀ ಹಾಗೂ ನಂಗಲಿ ಠಾಣೆಯ ಎಸ್ಬಿ ಕಾನ್ಸ್ಟೇಬಲ್ ಪ್ರವೀಣ್ ಅವರನ್ನು ಅಮಾನತು ಮಾಡಲಾಗಿದೆ. ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರು ಅಮಾನತು ಆದೇಶ ಮಾಡಿದ್ದಾರೆ. ಇದನ್ನೂ ಓದಿ: ಸೂರತ್ನ ತ್ಯಾಜ್ಯ ಬಟ್ಟೆ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ
ಇನ್ನೂ ನಂಗಲಿ ದೊಡ್ಡಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ಮುಳಬಾಗಿಲು ಎಎಸ್ಪಿ ಮೋನಿಷಾ ಶುಕ್ರವಾರ ರಾತ್ರಿ ದಾಳಿ ಮಾಡಿದ್ದರು. ದಾಳಿ ವೇಳೆ ಒಂದು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿ ವಶಕ್ಕೆ ಪಡೆಯಲಾಗಿತ್ತು. ನಂತರ ಎಎಸ್ಪಿ ಮೋನಿಷಾ ನೀಡಿದ ವರದಿ ಹಿನ್ನೆಲೆ, ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಿಂದ ಕೋಲಾರ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ. ಇದನ್ನೂ ಓದಿ: ಗಿಗ್ ಕಾರ್ಮಿಕರಿಗೆ ರಾಹುಲ್ ಗಾಂಧಿ ಬಂಪರ್ ಗಿಫ್ಟ್ – 15 ಲಕ್ಷದವರೆಗೆ ವಿಮೆ ಘೋಷಣೆ
