ವಾಷಿಂಗ್ಟನ್: ಶುಕ್ರವಾರ (ನ.13) ಅಮೆರಿಕದಲ್ಲಿ (America) ಕೆಲ ಸಮಯಗಳ ಕಾಲ ಉಂಟಾಗಿದ್ದ ವಿಮಾನ ಹಾರಾಟ ನಿರ್ಬಂಧ ಸದ್ಯ ತೆರವುಗೊಂಡಿದ್ದು, ಹಳೆಯ ಹಾರ್ಡ್ವೇರ್, ರೂಟರ್ಗಳು ಓವರ್ಲೋಡ್ ಆಗಿದ್ದೇ ಕಾರಣ ಎಂದು ತಿಳಿದುಬಂದಿದೆ.
ಈ ಬಗ್ಗೆ ಯುಎಸ್ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ (Sean Duffy) ಮಾತನಾಡಿ, ವಿಮಾನ ಹಾರಾಟ ನಿರ್ಬಂಧಕ್ಕೆ ಸೈಬರ್ ದಾಳಿ ಅಥವಾ ಮೈಕ್ರೋಸಾಫ್ಟ್ ಸೇವೆಗಳ ವ್ಯತ್ಯಯ ಕಾರಣ ಎಂದಯ ಕೇಳಿಬಂದಿದ್ದ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ. ಇದಕ್ಕೂ ಮೈಕ್ರೋಸಾಫ್ಟ್ ವ್ಯತ್ಯಯಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಸ್ವಿಚ್ಗಳು, ನಮ್ಮ ರೂಟರ್ಗಳು ಡೇಟಾದಿಂದ ಓವರ್ಲೋಡ್ ಆಗಿವೆ, ಆ ಅಧಿಕ ಒತ್ತಡದಿಂದಾಗಿ ಆ ರೂಟರ್ಗಳು ಕಳುಹಿಸುತ್ತಿದ್ದ ಮಾಹಿತಿಯಲ್ಲಿ ಏರುಪೇರುಗಳು ಮತ್ತು ವ್ಯತ್ಯಾಸಗಳು ಉಂಟಾಗಲು ಶುರುವಾದವು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತಕ್ಷಣವೇ ಸಂಪೂರ್ಣ ಸಿಸ್ಟಮ್ ಅನ್ನು ಸ್ಥಗಿತಗೊಳಿಸಲಾಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮಿಕ್ಸ್ ಪೆಟ್ರೋಲ್ ಸಮರ – ಬಂಕ್ಗಳಲ್ಲಿ ಎಥೆನಾಲ್ ಡಿಸ್ಪ್ಲೇ ಕಡ್ಡಾಯ; ಶೀಘ್ರದಲ್ಲೇ ನ್ಯೂ ರೂಲ್ಸ್
ವಿಮಾನಗಳ ನಿರ್ಗಮನವನ್ನು ಕೆಲಕಾಲ ಸ್ಥಗಿತಗೊಳಿಸಿದ ನಂತರ, ರಾತ್ರಿ 8:15ಕ್ಕೆ (ಅಮೆರಿಕ ಸ್ಥಳೀಯ ಕಾಲಮಾನ) ಮತ್ತೆ ಪುನಾರಂಭಗೊಂಡಿದೆ. ಆದರೆ ವಿಮಾನಗಳು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರಲು ಸಮಯ ತೆಗೆದುಕೊಳ್ಳುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಈ ನಿರ್ಬಂಧದಿಂದಾಗಿ ಸುಮಾರು 11,000 ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಇದರಲ್ಲಿ 6,600ಕ್ಕೂ ಹೆಚ್ಚು ರದ್ದತಿಗಳು ಮತ್ತು 8,600 ವಿಮಾನಗಳು ವಿಳಂಬಗೊಂಡಿವೆ. ಭಾನುವಾರದಂದು 1,500 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದೆಲ್ಲದರ ಪರಿಣಾಮ ಅಂದಾಜು 1.5 ಮಿಲಿಯನ್ ಪ್ರಯಾಣಿಕರು ಸಮಸ್ಯೆ ಎದುರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ GST ವಂಚನೆ – ಯುವಕನ ಹೆಸರಲ್ಲಿ 350 ಕೋಟಿ ಫ್ರಾಡ್!
