– ಮೂವರು ಆರೋಪಿಗಳು ಪರಾರಿ
ಚಿಕ್ಕಮಗಳೂರು: ತಾಲೂಕಿನ (Chikkamagaluru) ದೇವದಾನ ಗ್ರಾಮದಲ್ಲಿ ಚುಕ್ಕಿ ಜಿಂಕೆಯನ್ನು (Deer) ಬೇಟೆಯಾಡಿದ್ದ ಓರ್ವ ಆರೋಪಿಯನ್ನು ಬಾಳೆಹೊನ್ನೂರು ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಬಂಧಿಸಿದ್ದಾರೆ.
ಪರಮೇಶ್ವ್ ಗೌಡ ಬಂಧಿತ ಆರೋಪಿ. ಕವೀಶ್, ಪೃಥ್ವಿ ರಾಜ್ ಹಾಗೂ ವಿನಯ್ ಎಂಬವರು ಪರಾರಿಯಾಗಿದ್ದು, ಅಧಿಕಾರಿಗಳು ಇವರ ಪತ್ತೆಗೆ ಬಲೆ ಬೀಸಿದ್ದಾರೆ. ಈ ನಾಲ್ವರು ಸೇರಿ ಉರುಳು ಹಾಕಿ ಚುಕ್ಕಿ ಜಿಂಕೆಯನ್ನು ಶಿಕಾರಿ ಮಾಡಿದ್ದರು. ಬಳಿಕ ಅದನ್ನು ಮಾಂಸ ಮಾಡಿ ಅಡುಗೆ ಮಾಡುವಾಗ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ದಾಳಿ ನಡೆಸಿದ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಬಾಡೂಟಕ್ಕೆ ವನ್ಯಜೀವಿಗಳ ಬೇಟೆ – ಓರ್ವ ಆರೋಪಿ ಅರೆಸ್ಟ್, ಮೂವರು ಪರಾರಿ
10 ಅಡಿ ಆಳದಲ್ಲಿದ್ದ ಅವಶೇಷ ಪತ್ತೆಹಚ್ಚಿದ ರೋಜ್ಹಿ
ಆರೋಪಿಗಳು ಚುಕ್ಕಿ ಜಿಂಕೆಯನ್ನು ಶಿಕಾರಿ ಮಾಡಿ ಅದರ ಅವಶೇಷಗಳನ್ನು 10 ಅಡಿ ಆಳದಲ್ಲಿ ಮುಚ್ಚಿಟ್ಟಿದ್ದರು. ಆ ಅವಶೇಷಗಳನ್ನು ಅರಣ್ಯ ಇಲಾಖೆಯ ಶ್ವಾನ ದಳದ ರೋಜ್ಹಿ ಹೆಸರಿನ ಶ್ವಾನ ಪತ್ತೆಹಚ್ಚಿದೆ. ಅಲ್ಲದೇ ಮಾಂಸವನ್ನು ಎರಡು ಮನೆಯಲ್ಲಿ ಹಂಚಿಕೆ ಮಾಡಿ ಅಡುಗೆ ಮಾಡಿರುವುದನ್ನ ಸಹ ಶ್ವಾನ ಪತ್ತೆಹಚ್ಚಿದೆ.
ಆರೋಪಿಗಳ ವಿರುದ್ಧ ಬಾಳೆಹೊನ್ನೂರು ವಲಯ ಅರಣ್ಯ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವು – ಕಳ್ಳಬೇಟೆಗಾರನ ಬಂಧನ
