– ಆಯುಷ್ ವಲಯಕ್ಕೆ ಸಂಬಂಧಿಸಿದ ಆರ್ಥಿಕತೆ ಶತಕೋಟಿ ರೂಪಾಯಿಗಳ ಮಟ್ಟಕ್ಕೆ ತಲುಪಿದೆ
ಬೆಂಗಳೂರು: ಭಾರತೀಯ ಕುಟುಂಬಗಳು ತಲೆಮಾರುಗಳಿಂದ ತಮ್ಮ ಆಹಾರ ಮತ್ತು ಮನೆಮದ್ದಿನ ಸಂಪ್ರದಾಯಗಳಲ್ಲಿ ಬಳಸಿಕೊಂಡು ಬಂದಿರುವ ಅರಿಶಿನಕ್ಕೂ (Turmeric) ಈಗ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ಕಂಡುಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ತಿಳಿಸಿದರು.
#WATCH | Bengaluru, Karnataka | Prime Minister Narendra Modi says, “India’s exports of AYUSH and herbal products are steadily increasing. The economy linked to the AYUSH sector has grown to a scale of hundreds of billions of rupees. Even turmeric—a staple that Indian families have incorporated into their diets and domestic traditions for generations—is now seeing a surge in global demand…”
(Source: ANI/ DD)
— ANI (@ANI) November 13, 2026
ಬೆಂಗಳೂರಿನ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತದ ಆಯುಷ್ (AYUSH) ಮತ್ತು ಗಿಡಮೂಲಿಕೆ ಉತ್ಪನ್ನಗಳ ರಫ್ತು ನಿರಂತರವಾಗಿ ಹೆಚ್ಚುತ್ತಿದೆ. ಆಯುಷ್ ವಲಯಕ್ಕೆ ಸಂಬಂಧಿಸಿದ ಆರ್ಥಿಕತೆಯು ನೂರಾರು ಶತಕೋಟಿ ರೂಪಾಯಿಗಳ ಮಟ್ಟಕ್ಕೆ ಬೆಳೆದಿದೆ. ಭಾರತೀಯ ಕುಟುಂಬಗಳು ತಲೆಮಾರುಗಳಿಂದ ತಮ್ಮ ಆಹಾರ ಮತ್ತು ಮನೆಮದ್ದಿನ ಸಂಪ್ರದಾಯಗಳಲ್ಲಿ ಬಳಸಿಕೊಂಡು ಬಂದಿರುವ ಅರಿಶಿನಕ್ಕೂ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ಕಂಡುಬರುತ್ತಿದೆ ಎಂದು ಹೇಳಿದರು.
ವಿವಿಧ ದೇಶಗಳಲ್ಲಿ ಆಯುರ್ವೇದದ 150ಕ್ಕೂ ಹೆಚ್ಚು ತರಬೇತಿ ಕೋರ್ಸ್ಗಳಿಗೆ ಮಾನ್ಯತೆ ದೊರೆತಿದೆ ಮತ್ತು ಅದರ ವಿಸ್ತರಣೆಗೆ ಬೆಂಬಲ ನೀಡಲು 28 ರಾಷ್ಟ್ರಗಳೊಂದಿಗೆ ತಿಳುವಳಿಕೆ ಒಪ್ಪಂದಗಳಿಗೆ (MoUs) ಸಹಿ ಹಾಕಲಾಗಿದೆ. ಇಂದು ಸಮಗ್ರ ಆರೋಗ್ಯ ರಕ್ಷಣೆ (Holistic Healthcare) ಒಂದು ಜಾಗತಿಕ ಆಂದೋಲನವಾಗಿ ಹೊರಹೊಮ್ಮಿದೆ, ಮತ್ತು ಇದರಲ್ಲಿ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.
ಜಗತ್ತಿನ ಅನೇಕ ಪ್ರಮುಖ ನಾಯಕರ ಕುಟುಂಬಗಳಲ್ಲಿ ಯೋಗದೊಂದಿಗೆ ನಂಟು ಹೊಂದಿರುವ ಒಬ್ಬರಾದರೂ ಇದ್ದಾರೆ. ಈ ಕಲೆಯ ಮೂಲಕ ಭಾರತವು ಎಷ್ಟು ದೂರ ತಲುಪಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಭಾರತವನ್ನು ಅರ್ಥಮಾಡಿಕೊಳ್ಳಲು ಯೋಗವು ಒಂದು ಹೆಬ್ಬಾಗಿಲಾಗಿದೆ ಎಂದು ತೋರುತ್ತದೆ ಎಂದು ಹೇಳಿದರು.

ಆಧುನಿಕ ವಿಜ್ಞಾನವನ್ನ ಭಾರತದ ಆಧ್ಯಾತ್ಮಿಕ ಜ್ಞಾನದೊಂದಿಗೆ ಬೆಸೆಯುವ ಈ ಸಂಸ್ಥೆಯ ನಿರಂತರ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ. ಕರ್ನಾಟಕದ ಈ ಪುಣ್ಯಭೂಮಿಯು ಶತಮಾನಗಳಿಂದಲೂ ಯೋಗದ ಪ್ರಮುಖ ಕೇಂದ್ರವಾಗಿದೆ. ಯೋಗದ ಈ ಅದ್ಭುತವಾದ ಶಕ್ತಿ, ಚೈತನ್ಯವನ್ನ ಅನುಭವಿಸುವ ಅವಕಾಶ ದೊರೆಯುತ್ತಿದೆ ಎಂದು ತಿಳಿಸಿದರು.
ಅನೇಕ ಆಚಾರ್ಯರು, ವಿದ್ವಾಂಸರು ಜನ್ಮ ತಳೆದು, ಯೋಗ ಪರಂಪರೆಯನ್ನ ಸಮೃದ್ಧಿಗೊಳಿಸಿದ್ದಾರೆ. ನಮ್ಮೆಲ್ಲರಿಗೂ ಗೊತ್ತಿದೆ, ಕನ್ನಡದ ಅದ್ಭುತ ಕಲಾವಿದರಾದ ಡಾ. ರಾಜ್ಕುಮಾರ್ ಅವರು, ಕಲಾ ಜಗತ್ತಿನೊಂದಿಗೆ ಯೋಗಕ್ಕೂ ಸೇವೆ ಸಲ್ಲಿಸಿದ್ದಾರೆ. ಇಂತಹ ಕರ್ನಾಟಕದ ಮಹಾನ್ ಪರಂಪರೆಯ ನಡುವೆ, ಪ್ರಶಾಂತಿ ಕುಟೀರದ 50 ವರ್ಷಗಳ ಪಯಣವು ಸೇವೆ ಮತ್ತು ಸಮರ್ಪಣೆಯ ಒಂದು ಅಸಾಧಾರಣ ಗಾಥೆಯಾಗಿ ನಿಂತಿದೆ. ಇದು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇಬೇಕಾದ ಕಥೆಯಾಗಿದೆ. ಒಂದು ಸಣ್ಣ ಯೋಗ ಕೇಂದ್ರವು ಇಷ್ಟು ದೊಡ್ಡ ಆಂದೋಲನವಾಗಿ ವಿಕಸನಗೊಂಡಿರುವುದೇ ಒಂದು ಸ್ಫೂರ್ತಿಯಾಗಿದೆ. ಇದು ನಮ್ಮೆಲ್ಲರಿಗೂ ಒಂದು ಪ್ರೇರಣೆ ಎಂದು ಸ್ಮರಿಸಿದರು.
