ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ (Washington) ಡಿಸಿಯಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಶ್ವೇತಭವನದಿಂದ (White House) ಕೇವಲ 2 ಕಿಲೋ ಮೀಟರ್ಗಿಂತ ಕಡಿಮೆ ದೂರದಲ್ಲಿರುವ ಜನನಿಬಿಡ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ವಾಷಿಂಗ್ಟನ್ನ ಲೋಗನ್ ಸರ್ಕಲ್ ಪ್ರದೇಶದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಈ ಪ್ರದೇಶ ವೈಟ್ಹೌಸ್ನಿಂದ ಸುಮಾರು ಒಂದು ಮೈಲಿ ದೂರದಲ್ಲಿದೆ. ಘಟನೆಯ ನಿಖರ ಸ್ಥಳ ಸೇರಿದಂತೆ ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ನಾಥನ್ ಕ್ಲಾರ್ಕ್ ತಿಳಿಸಿದ್ದಾರೆ. ಇದನ್ನೂ ಓದಿ: ಕೆಪಿಎಸ್ಸಿ ಪರೀಕ್ಷೆಯನ್ನು ಚುನಾವಣೆ ಮಾದರಿಯಲ್ಲಿ ನಡೆಸಲು ಸಿಎಂ ಸೂಚನೆ
ಘಟನೆ ಹಿನ್ನೆಲೆ 15ನೇ ಸ್ಟ್ರೀಟ್ನ 1500ನೇ ಬ್ಲಾಕ್ ಸುತ್ತಮುತ್ತಲಿನ ಪ್ರದೇಶಗಳಿಂದ ದೂರವಿರುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಈ ಪ್ರದೇಶದಲ್ಲಿ ಜಿಮ್ ಸೆಂಟರ್, ಚರ್ಚ್, ವಸತಿ ಕಟ್ಟಡಗಳು ಹಾಗೂ ಸೂಪರ್ ಮಾರ್ಕೆಟ್ಗಳಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದನ್ನೂ ಓದಿ: ಚೀನಾ ಸ್ಪೈ ಜೊತೆ ಸಂಬಂಧ – ವಜಾಗೊಳಿಸುವ ಮುನ್ನವೇ ಹುದ್ದೆ ತೊರೆದ ಜೆನ್ಸನ್ ಹುವಾಂಗ್
ಘಟನೆ ನಡೆದ ಪ್ರದೇಶದ ಸಮೀಪವಿರುವ ಶಾಲೆಗಳಿಗೂ ಲಾಕ್ಡೌನ್ ವಿಧಿಸಲಾಗಿದೆ. ಪೊಲೀಸರು ಭಾರಿ ಪ್ರಮಾಣದಲ್ಲಿ ಸ್ಥಳದಲ್ಲಿ ಭದ್ರತೆ ಕೈಗೊಂಡಿದ್ದು, ಅಮೆರಿಕದ ಫೆಡರಲ್ ಬ್ಯೂರೋ ಆಫ್ ಆಲ್ಕೋಹಾಲ್, ಟೊಬ್ಯಾಕೊ, ಫೈರ್ಆರ್ಮ್ಸ್ ಅಂಡ್ ಎಕ್ಸ್ಪ್ಲೋಸಿವ್ಸ್ ಸಂಸ್ಥೆಯ ಅಧಿಕಾರಿಗಳೂ ತನಿಖೆಗೆ ನೆರವಾಗಲು ಸ್ಥಳಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್ನಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ – 8 ಮಂದಿ ಸಾವು, 17 ಜನರಿಗೆ ಗಾಯ
