– ಕಡಿಮೆ ಮೊತ್ತ ಜಮೆಯಾಗಿದ್ದಕ್ಕೆ ರೈತರ ಆಕ್ರೋಶ
–ಗುಂಟೆಗೆ 85 ರೂ. ಬರ ಪರಿಹಾರ
ಯಾದಗಿರಿ: ಬರದಿಂದ (Drought) ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ (Farmers) ಬರ ಪರಿಹಾರದ ಹಣದಲ್ಲೂ (Drought Relief) ನಿರಾಸೆಯಾಗಿದೆ. ಸರ್ಕಾರ ಘೋಷಿಸಿದ ಪರಿಹಾರ ಮೊತ್ತಕ್ಕೂ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಹಣಕ್ಕೂ ವ್ಯತ್ಯಾಸ ಕಂಡುಬಂದಿದೆ. ರೈತರಿಗೆ ನೆರವಾಗಲು 5,000 ರೂ. ಬರ ಪರಿಹಾರ ಘೋಷಿಸಿದ್ದ ಸರ್ಕಾರ, ಮೊದಲ ಕಂತಿನಲ್ಲಿ ರೈತರಿಗೆ ತಲಾ 2,500 ಬಿಡುಗಡೆ ಮಾಡಿದೆ. ಆದರೆ ಯಾದಗಿರಿಯಲ್ಲಿ (Yadgiri) ಒಬ್ಬೊಬ್ಬ ರೈತರಿಗೆ ಒಂದೊಂದು ರೀತಿ ಹಣ ಜಮೆಯಾಗಿದೆ. ಕೆಲವರಿಗೆ ಕೇವಲ 1,500 ರೂಪಾಯಿ ಜಮೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಯಾದಗಿರಿ ಜಿಲ್ಲೆಯಲ್ಲಿ ಬರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪಗಳು ವ್ಯಕ್ತವಾಗಿವೆ. ಒಬ್ಬೊಬ್ಬ ರೈತರ ಖಾತೆಗೆ ಒಂದೊಂದು ರೀತಿಯ ಪರಿಹಾರ ಹಣ ಜಮೆಯಾಗಿದ್ದು, ಸರ್ಕಾರ ಘೋಷಿಸಿದ ಮೊತ್ತ ಸಂಪೂರ್ಣವಾಗಿ ಕೈ ಸೇರಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮೊದಲ ಕಂತಿನಲ್ಲಿ 2,500 ರೂಪಾಯಿ ಪರಿಹಾರ ನೀಡುವುದಾಗಿ ಹಾಗೂ ಎರಡನೇ ಕಂತಿನಲ್ಲಿ ಮತ್ತೆ 2,500 ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಈ ಮೂಲಕ ಒಟ್ಟು 5 ಸಾವಿರ ರೂಪಾಯಿ ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ನಿರಾಸೆಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ
ನವೆಂಬರ್ 5ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾದಗಿರಿ ಜಿಲ್ಲೆಯ ರೈತರೊಂದಿಗೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ರೈತರಿಗೆ ಒಟ್ಟು 5 ಸಾವಿರ ರೂಪಾಯಿ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ ಇದೀಗ ರೈತರ ಖಾತೆಗೆ ನಿರೀಕ್ಷಿತ ಮೊತ್ತಕ್ಕಿಂತ ಕಡಿಮೆ ಹಣ ಜಮೆಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನಾನು ಪ್ರಧಾನಿ ಆಗೋದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ – 2004ರಲ್ಲೇ ಹುದ್ದೆ ಬೇಡವೆಂದಿದ್ದೆ: ಸೋನಿಯಾ ಗಾಂಧಿ
ಗುಂಟೆಗೆ 85 ರೂ. ಬರ ಪರಿಹಾರ:
ಇನ್ನು ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಗುಂಟೆಗೆ 85 ರೂ.ನಂತೆ ಬರ ಪರಿಹಾರ ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಒಂದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರಿಗೆ ಮೊದಲ ಕಂತಿನಲ್ಲಿ 2,500 ರೂಪಾಯಿ ನಿಗದಿಪಡಿಸಲಾಗಿದೆ. ಇದರಿಂದ ಸಣ್ಣ ರೈತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: 28 ಲಕ್ಷ ಭಕ್ತರಿಂದ ಹಾಸನಾಂಬ ದೇವಿ ದರ್ಶನ – ಬರೋಬ್ಬರಿ 24 ಕೋಟಿಗೂ ಅಧಿಕ ಆದಾಯ
ಬರದಿಂದ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರದ ಹಣದಲ್ಲೂ ವ್ಯತ್ಯಾಸವಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರ ಘೋಷಿಸಿದ ಪೂರ್ಣ ಪರಿಹಾರ ಮೊತ್ತವನ್ನು ಕೂಡಲೇ ಜಮೆ ಮಾಡಬೇಕು ಹಾಗೂ ಪರಿಹಾರ ವಿತರಣೆಯಲ್ಲಿನ ಗೊಂದಲಕ್ಕೆ ಸ್ಪಷ್ಟನೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರೇಷನ್ ಕಾರ್ಡ್ ಇ-ಕೆವೈಸಿಗೆ ಇಂದೇ ಕೊನೆ ದಿನ – ಲಕ್ಷಾಂತರ ಕಾರ್ಡ್ ಡಿಲೀಟ್ ಸಾಧ್ಯತೆ
