ಬೆಂಗಳೂರು: ಜನರೇ ಎಚ್ಚರ.. ಬೆಳಕಿನ ಹಬ್ಬ ನಿಮ್ಮ ಬದುಕಲ್ಲಿ ಕತ್ತಲೆಯನ್ನು ತರಬಹುದು ಎಚ್ಚರ. ಬೆಂಗಳೂರಿನ (Bengaluru) ಕಣ್ಣಿನ ಆಸ್ಪತ್ರೆಗಳಲ್ಲಿ ಸಾಲು ಸಾಲು ಪಟಾಕಿ ಅವಘಡ ಪ್ರಕರಣಗಳು ಸಂಭವಿದ್ದು, ಪಟಾಕಿ ಸಿಡಿತದಿಂದ ಉಂಟಾದ ಅವಘಡಗಳ ಸಂಖ್ಯೆ ಇದೀಗ 61ಕ್ಕೆ ಏರಿಕೆಯಾಗಿದೆ.
ಬಾಲಕರಿಂದ ಹಿಡಿದು 40 ವರ್ಷ ವಯಸ್ಸಿನವರೆಗೂ ವ್ಯಕ್ತಿಗಳು ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಪಟಾಕಿ ಸಿಡಿತ ಪ್ರಕರಣಗಳು 61ಕ್ಕೆ ಏರಿಕೆ ಆಗಿವೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಪ್ರಕರಣ 20ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ
5 ವರ್ಷದ 2 ಮಕ್ಕಳು, 5-10 ವರ್ಷದ ಓರ್ವ ಬಾಲಕ, 10-20 ವರ್ಷದ ಐವರು ಪಟಾಕಿ ಸಿಡಿತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 20-40 ವರ್ಷ ವಯಸ್ಸಿನ 11 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಕಣ್ಣಿಗೆ ಗಾಯಗೊಂಡವರು 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ 41ಕ್ಕೆ ಏರಿಕೆ ಆಗಿದೆ. ಫ್ರೌಡರು 16 ಮಂದಿ, 18 ವರ್ಷದೊಳಗಿನ 15 ಮಕ್ಕಳು ಗಾಯಗೊಂಡಿದ್ದಾರೆ. ಒಟ್ಟು ಪುರುಷರು 19, ಮಹಿಳೆಯರು 12 ಜನರಿಗೆ ಹಾನಿಯಾಗಿದೆ. ಈ ಪೈಕಿ ಸ್ವತಃ ಪಟಾಕಿ ಹಚ್ಚುವಾಗ 23 ಜನರಿಗೆ ಗಾಯ ಹಾಗೂ 8 ಜನ ಪಟಾಕಿ ಹಚ್ಚುವುದನ್ನ ನೋಡುತ್ತಿದ್ದಾಗ ಕಣ್ಣಿಗೆ ಗಾಯ ಆಗಿದೆ. ಇದರಲ್ಲಿ ಒಬ್ಬರಿಗೆ ಶಸ್ತ್ರ ಚಿಕಿತ್ಸೆ ಆಗಿದ್ದು, ಉಳಿದ 30 ಗಾಯಳುಗಳಿಗೆ ಸಾಮಾನ್ಯ ಚಿಕಿತ್ಸೆ ನೀಡಲಾಗ್ತಿದೆ. ಇದನ್ನೂ ಓದಿ: ದೀಪಾವಳಿ ಎಫೆಕ್ಟ್ನಿಂದ ಬೆಂಗಳೂರಲ್ಲಿ ಹೆಚ್ಚಾಯ್ತು ವಾಯು ಮಾಲಿನ್ಯ
