ವಾಷಿಂಗ್ಟನ್: ಲಾಫಯೆಟ್ ಸ್ಕ್ವೇರ್ನಲ್ಲಿ ಕಾರೊಂದು ಭದ್ರತಾ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ನಂತರ, ವೈಟ್ ಹೌಸ್ ಅನ್ನು ತಾತ್ಕಾಲಿಕವಾಗಿ ಲಾಕ್ಡೌನ್ ಮಾಡಲಾಗಿದೆ.
ಕಾರು ತಡೆಗೋಡೆಯನ್ನು ದಾಟಿ ವೈಟ್ ಹೌಸ್ನ ಹೊರಗೆ ಡಿಕ್ಕಿ ಹೊಡೆದ ನಂತರ, ಸೀಕ್ರೆಟ್ ಸರ್ವಿಸ್ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಕಾರಿನ ಬಾನೆಟ್ನಿಂದ ಹೊಗೆ ಬಂದು, ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಧಾವಿಸುತ್ತಿರುವ ದೃಶ್ಯದ ವೀಡಿಯೊಗಳು ವೈರಲ್ ಆಗಿವೆ.
ಅಪಘಾತದ ನಂತರ ಸ್ಫೋಟಕಗಳನ್ನು ಹುಡುಕಲು ಶ್ವಾನದಳವನ್ನು ಕರೆತರಲಾಗಿತ್ತು ಎಂದು ವರದಿಯಾಗಿದೆ. ವ್ಯಕ್ತಿಯೊಬ್ಬ ಲಾಫಾಯೆಟ್ ಪಾರ್ಕ್ನ ವಾಯುವ್ಯ ಮೂಲೆಯ ಬಳಿ ತಡೆಗೋಡೆಯನ್ನು ದಾಟಿ ಒಳಗೆ ನುಗ್ಗಿದಾಗ, ಆತನನ್ನು ತಕ್ಷಣವೇ ಬಂಧಿಸಲಾಯಿತು.
