ಕಲಬುರಗಿ: ಹಂದಿ ಓಡಿಸಲು ಇಟ್ಟಿದ್ದ ಮದ್ದನ್ನು ಪಟಾಕಿ ಅಂತ ತಿಳಿದು ಬೆಂಕಿ ಹಚ್ಚಿದ ಪರಿಣಾಮ ತಲೆ ಛಿದ್ರಗೊಂಡು ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಸೇಡಂ ತಾಲ್ಲೂಕಿನ ಹಂದರಕಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮದ್ದಿಗೆ ಬೆಂಕಿ ಹಚ್ಚಿದ ಪರಿಣಾಮ ಬಾಲಕ ಭೀಮರಾಯ (15)ನ ಮುಖ ಬ್ಲಾಸ್ಟ್ ಆಗಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಾಡು ಹಂದಿಗಳನ್ನ ಓಡಿಸಲು ಬಾಲಕನ ತಂದೆ ಮನೆಯಲ್ಲಿ ಮದ್ದು ತಂದಿಟ್ಟಿದ್ದರು. ದೀಪಾವಳಿ ಪಟಾಕಿ ಎಂದು ಭೀಮರಾಯ ಅದಕ್ಕೆ ಬೆಂಕಿ ಹಚ್ಚಿದ್ದ. ಬೆಂಕಿ ಹಚ್ಚಿದ ಕ್ಷಣಾರ್ಧದಲ್ಲಿ ದೊಡ್ಡದಾಗಿ ಸ್ಪೋಟಗೊಂಡು ಬಾಲಕನ ತಲೆ ಛಿದ್ರ ಛಿದ್ರವಾಗಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
