ಚಿಕ್ಕಮಗಳೂರು: ಇಲ್ಲಿನ ಇಂದಾವರದಲ್ಲಿರುವ ಪಾಕಿಸ್ತಾನ ಮೂಲದ ಧರ್ಮಗುರು ರಿಯಾಜ್ ಅಹ್ಮದ್ ಗೋಹರ್ ಶಾಹಿ ಅನುಯಾಯಿಯ ಸಮಾಧಿಗೆ ಹಸಿರು ಚಾದರ ಹೊದಿಸಿ, ಕಲ್ಮ (Kalma) ವಿರೋಧಿ ಬರಹ ಬರೆಯಲಾಗಿದೆ. ಇದರಿಂದ ಚಿಕ್ಕಮಗಳೂರಲ್ಲಿ ( Chikkamagaluru) ಮುಸ್ಲಿಂ ಸಮುದಾಯದೊಳಗೆ ತೀವ್ರ ಆಕ್ರೋಶ ಸ್ಫೋಟಗೊಂಡಿದ್ದು, ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ರಿಜ್ವಾನ್ ಎಂಬವರು ಸಾವನ್ನಪ್ಪಿದ್ದರು. ಒಂದು ವರ್ಷದ ಬಳಿಕ ರಿಜ್ವಾನ್ ಸಮಾಧಿ ಮೇಲೆ ಕುಟುಂಬಸ್ಥರು ಹಸಿರು ಚಾದರ ಹೊದಿಸಿ, ಗೋರಿ ನಿರ್ಮಿಸಲು ಮುಂದಾಗಿದ್ದಾರೆ. ಗೋರಿಯ ಮೇಲಿನ ಕಲ್ಮವನ್ನು ತಿದ್ದಿ, ಕಲ್ಮ ವಿರೋಧಿ ಸಾಲುಗಳನ್ನು ಬರೆಯಲಾಗಿದ್ದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: 3 ಕೋಟಿ ಮೌಲ್ಯದ ಆಸ್ತಿಗಾಗಿ ಬೆಂಗಳೂರಿನಲ್ಲಿ 7 ಜನರ ನರಮೇಧ!
ಅಸಲಿಗೆ ಗೋಹರ್ ಶಾಹಿ ಓರ್ವ ಧರ್ಮ ವಿರೋಧಿ ಎಂದು ಸಮುದಾಯವೇ ಹೇಳಿದೆ. ಜಗತ್ತಿನ ಮುಸ್ಲಿಂ ಸಮುದಾಯ ಕೂಡ ಆತನನ್ನ ವಿರೋಧಿಸಿದೆ. ಆತನ ಬೆಂಬಲಿಗರನ್ನು ಮುಸ್ಲಿಂ ವಿರೋಧಿಗಳು ಎಂದೇ ಸಮುದಾಯ ಪರಿಗಣಿಸಿದೆ. ಹಾಗಾಗಿ, ಕಳೆದ ವರ್ಷ ಇಂದಾವರದ ಖಬರಸ್ಥಾನದಲ್ಲಿ ರಿಜ್ವಾನ್ ಅಂತ್ಯಕ್ರಿಯೆ ನೆರವೇರಿಸುವಾಗಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಸ್ಥಳಿಯರ ವಿರೋಧದ ನಡುವೆಯೂ ಅಂತ್ಯಕ್ರಿಯೆ ನಡೆದಿತ್ತು. ಈಗ ವಿವಾದಾತ್ಮಕ ಬರಹ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಈ ಸೂಕ್ಷ್ಮ ವಿಚಾರವಾಗಿ ರಿಜ್ವಾನ್ ಸಹೋದರ ಬರ್ಕತ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ನಡುವೆ ತೀವ್ರ ವಾಕ್ಸಮರ ನಡೆದಿದೆ. ಸಮಾಧಿ ಮೇಲಿನ ಆ ವಿವಾದಾತ್ಮಕ ಕಲ್ಮ ವಿರೋಧಿ ಬರಹ ಹಾಗೂ ಹಸಿರು ಚಾದರವನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದಿರುವ ಮುಸ್ಲಿಂ ಸಮುದಾಯದ ಮುಖಂಡರು, ಚಿಕ್ಕಮಗಳೂರು ಎಸ್ಪಿ ಜೀತೆಂದ್ರ ಕುಮಾರ್ ದಾಯ್ಮಾಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅ.16ರಿಂದ 31ರವರೆಗೆ 15 ದಿನದಲ್ಲಿ 7 ಕೊಲೆ – ನರಮೇಧಕ್ಕೆ ಮಗಳು ಸಾಥ್, ತಪ್ಪೊಪ್ಪಿಕೊಂಡ ಹಂತಕ
