– ರಾವಣ ಪಾತ್ರಕ್ಕೆ ಜನರು ತೋರಿದ ಪ್ರೀತಿ, ಅಭಿಮಾನಕ್ಕೆ ನನ್ನ ಖುಷಿಗೆ ಪಾರವೇ ಇಲ್ಲ: ಯಶ್ ತಾಯಿ ಭಾವುಕ
ರಣಬೀರ್ ಕಪೂರ್-ಸಾಯಿ ಪಲ್ಲವಿ-ಯಶ್ (Yash) ಅಭಿನಯದ ರಾಮಾಯಣ ಭಾಗ-1 (Ramayana) ರಿಲೀಸ್ ಆಗಿದ್ದು, ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ 200 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಬೆಂಗಳೂರಿನಲ್ಲಿ ಕನ್ನಡ ಅವತರಣಿಕೆ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಸಂತೋಷ್ ಥಿಯೇಟರ್ನಲ್ಲಿ ಬೆಳಗ್ಗೆ 6 ಗಂಟೆಗೇ ಫಸ್ಟ್ ಶೋ ನೋಡಿ ಯಶ್ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಯಶ್ ಕಟೌಟ್ಗೆ ಆರತಿ ಎತ್ತಿ, ದೃಷ್ಟಿ ತೆಗೆದು ಕುಂಬಳಕಾಯಿ ಒಡೆದಿದ್ದಾರೆ. ಇದನ್ನೂ ಓದಿ: ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆ: ‘ರಾಮಾಯಣ’ ಸೀತೆ ಪಾತ್ರಕ್ಕಾಗಿ ನಾನೂ ಆಡಿಷನ್ ಕೊಟ್ಟಿದ್ದೆ ಎಂದ ಶ್ರೀನಿಧಿ ಶೆಟ್ಟಿ
ಈ ಬೆನ್ನಲ್ಲೇ ಭಾವುಕವಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಯಶ್ ತಾಯಿ ಪುಷ್ಪಾ ಅರುಣ್ಕುಮಾರ್, ನನ್ನ ಮಗ ತಾನು ಕಂಡ ಪ್ರತಿಯೊಂದು ಕನಸನ್ನೂ ನನಸಾಗಿಸಿಕೊಂಡು ಜನರ ಮೆಚ್ಚುಗೆ ಗಳಿಸಿದ್ದಾನೆ. ರಾವಣ ಪಾತ್ರಕ್ಕೆ ಜನರು ತೋರಿದ ಪ್ರೀತಿ, ಅಭಿಮಾನಕ್ಕೆ ನನ್ನ ಖುಷಿಗೆ ಪಾರವೇ ಇಲ್ಲ ಅಂದಿದ್ದಾರೆ.
ಅಂದಹಾಗೆ, ರಾಮಾಯಣವೊಂದು ದೃಶ್ಯಕಾವ್ಯವೇ ಸರಿ ಅಂತ ವ್ಯಾಪಕ ಮೆಚ್ಚುಗೆ ಪಾತ್ರವಾಗಿದೆ. ಮೊದಲ ದಿನ 200 ಕೋಟಿ ಕಲೆಕ್ಷನ್ ಆಗಿದೆ. ಇದನ್ನೂ ಓದಿ: ವಿಶ್ವಾದ್ಯಂತ 50 ಸಾವಿರ ಥಿಯೇಟರ್ಗಳಲ್ಲಿ ರಾಮಾಯಣ ರಿಲೀಸ್ – ರಾವಣನಾಗಿ ಅಬ್ಬರಿಸಿದ ಯಶ್
