– ಗಡುವು ಮೀರಿ ಹಾಜರುಪಡಿಸಿದ್ರೆ ಬಿಡುಗಡೆ
ನವದೆಹಲಿ: ಯಾವುದೇ ವ್ಯಕ್ತಿಯನ್ನು ಅರೆಸ್ಟ್ (Arrest) ಅಲ್ಲ, ವಶಕ್ಕೆ (Detention) ಪಡೆದ ತಕ್ಷಣದಿಂದಲೇ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸುವ ಡೆಡ್ಲೈನ್ (Deadline) ಆರಂಭವಾಗಲಿದೆ ಎಂದು ಸುಪ್ರೀಂಕೋರ್ಟ್ (Supreme Court) ಸ್ಪಷ್ಟಪಡಿಸಿದೆ.
24 ಗಂಟೆಗಳೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿಯನ್ನು ಹಾಜರುಪಡಿಸಬೇಕು ಎಂಬ ಗಡುವಿನ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಅವಧಿ ಲೆಕ್ಕ ಹಾಕಬೇಕು. ಅಧಿಕೃತವಾಗಿ ಬಂಧನ ದಾಖಲಿಸಿದ ಸಮಯದಿಂದಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನೂ ಓದಿ: ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹ – ಶುಕ್ರವಾರ ಯಾದಗಿರಿ ಬಂದ್ಗೆ ಕರೆ
ಪೊಲೀಸರು ವ್ಯಕ್ತಿಯನ್ನು ಮೊದಲು ವಶಕ್ಕೆ ಪಡೆದು, ನಂತರ ಅಧಿಕೃತವಾಗಿ ಬಂಧನ ದಾಖಲಿಸುವ ಮೂಲಕ 24 ಗಂಟೆಗಳ ಲೆಕ್ಕಾಚಾರವನ್ನು ಮುಂದೂಡಲು ಅವಕಾಶ ನೀಡಿದರೆ ಅದು ಸಂವಿಧಾನ ನೀಡಿರುವ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ. ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರೆ – ನ.6ರಿಂದ 10ರವರೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ನಿರ್ಬಂಧ
ಸುಪ್ರೀಂ ಕೊಟ್ಟ ತೀರ್ಪು ಏನು?
– ಪೊಲೀಸರು ವಶಕ್ಕೆ ಪಡೆದ ಕ್ಷಣದಿಂದಲೇ ಡೆಡ್ಲೈನ್ ಆರಂಭ.
– ವಿಚಾರಣೆ, ತನಿಖೆ, ಶೋಧ, ವಶ ಪ್ರಕ್ರಿಯೆ ಹೊರಗಿಡಲು ಸಾಧ್ಯವಿಲ್ಲ.
– ಬಂಧನದ ಸ್ಥಳದಿಂದ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಕರೆದೊಯ್ಯುವುದನ್ನು 24 ಗಂಟೆಗಳ ಲೆಕ್ಕಾಚಾರದಿಂದ ಹೊರಗಿಡಬಹುದು.
– 24 ಗಂಟೆ ಮೀರಿ ಕೋರ್ಟ್ ಮುಂದೆ ಹಾಜರುಪಡಿಸಿದ್ರೆ ಬಿಡುಗಡೆ ಮಾಡಬೇಕು.
– 24 ಗಂಟೆಗಳ ಸಾಂವಿಧಾನಿಕ ಮಿತಿಯೊಳಗಿದ್ದರೂ ಅನಗತ್ಯವಾಗಿ ವಶದಲ್ಲಿಡಬಾರದು.
– ಕೋರ್ಟ್ಗೆ ಹಾಜರುಪಡಿಸಿದಾಗ ಮ್ಯಾಜಿಸ್ಟ್ರೇಟ್ಗಳು ಬಂಧನ ದಿನ, ಸಮಯ ದಾಖಲಿಸಬೇಕು.
– ಸಂವಿಧಾನದ ನಿಯಮ ಪಾಲನೆ ಆಗಿದ್ಯಾ ಅಂತ ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
