– ರಾಜಸ್ಥಾನದ ನಗೌರ್ನಲ್ಲಿ ಘಟನೆ; ಹಲವು ಕಾರ್ಮಿಕರು ಸಿಲುಕಿರೋ ಶಂಕೆ
ಜೈಪುರ: ಪೊಟ್ಯಾಸಿಯಂ ನೈಟ್ರೇಟ್ (Potassium Nitrate) ಸಂಗ್ರಹಿಸಿದ್ದ ಗೋಡೋನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರೀ ಸ್ಫೋಟ ಸಂಭವಿಸಿರುವ ಘಟನೆ ರಾಜಸ್ಥಾನದ ನಗೌರ್ ನಗರದಲ್ಲಿ (Rajasthan Nagaur city) ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗೊಡೋನ್ನಲ್ಲೇ ಸಿಲುಕಿರೋ ಶಂಕೆ ವ್ಯಕ್ತವಾಗಿದೆ.
ಸ್ಫೋಟ (Explosion) ಸಂಭವಿಸುತ್ತಿದ್ದಂತೆ ದಟ್ಟ ಹೊಗೆ ಮುಗಿಲೆತ್ತರಕ್ಕೆ ಚಿಮ್ಮಿದ್ದು, ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಉಂಟುಮಾಡಿದೆ. ಸ್ಫೋಟದ ಶಬ್ಧ ಕೇಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮನೆಯಿಂದಾಚೆಗೆ ಓಡಿ ಬಂದಿದ್ದಾರೆ.
రాజస్థాన్లో భారీ పేలుడు కలకలం!
నాగోర్లో బాణసంచా పేలి ఇద్దరు మృతి..
రెండు కిలోమీటర్ల దూరం వరకు వినిపించిన పేలుడు శబ్దాలు..
భయాందోళనలతో ఇళ్ల నుంచి పరుగులు తీసిన స్థానికులు..
ఘటనా స్థలంలో కొనసాగుతున్న సహాయక చర్యలు.
#Rajasthan #Blast #Nagaur https://t.co/BbZlgf5rWY— Telugu Stride (@TeluguStride) November 5, 2026
ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ನಾಗೌರ್ ಕೊತ್ವಾಲಿ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಶುರು ಮಾಡಿದ್ರೆ, ಅತ್ತ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಗೋಡೋನ್ನ ಒಳಗೆ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡಾಗ ಗೋಡೋನ್ ಒಳಗೆ ಹಲವು ಕಾರ್ಮಿಕರು ಇದ್ದಿರಬಹುದು. ಆದರೆ, ಆ ಸಮಯದಲ್ಲಿ ಒಟ್ಟು ಎಷ್ಟು ಮಂದಿ ಇದ್ದರು, ಎಷ್ಟು ಜನರು ಸುರಕ್ಷಿತವಾಗಿ ಹೊರಬರಲು ಸಾಧ್ಯವಾಯಿತು? ಯಾರಾದ್ರೂ ಒಳಗೆ ಸಿಲುಕಿಕೊಂಡಿದ್ದಾರಾ? ಅನ್ನೋದು ಇನ್ನೂ ಖಚಿತವಾಗಿಲ್ಲ. ಸದ್ಯಕ್ಕೆ ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವುದಷ್ಟೇ ತಿಳಿದುಬಂದಿದೆ ಎಂದು ವರದಿಗಳು ತಿಳಿಸಿವೆ.
ಗನ್ ಪೌಡರ್ ತಯಾರಿ
ಸ್ಫೋಟ ಸಂಭವಿಸಿದ ಗೋಡೋನ್ನಲ್ಲಿ ಪೊಟ್ಯಾಸಿಯಮ್ ನೈಟ್ರೇಟ್ ಅನ್ನು ಸಂಗ್ರಹಿಸಲಾಗಿತ್ತು. ಅಲ್ಲದೇ, ಈ ಸ್ಥಳದಲ್ಲಿ ಪಟಾಕಿ ತಯಾರಿಸಲು ಪರವಾನಗಿ ಇತ್ತೆಂಬ ಪ್ರಾಥಮಿಕ ಮಾಹಿತಿಯೂ ಲಭ್ಯವಾಗಿದೆ. ಪೊಟ್ಯಾಸಿಯಮ್ ನೈಟ್ರೇಟ್ ಬಳಸಿ ಇಲ್ಲಿ ಗನ್ಪೌಡರ್ (ಬೆರುಮದ್ದು) ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಪೂರ್ಣ ಪರಿಶೀಲನೆ ಬಳಿಕ ನಿಖರ ಮಾಹಿತಿ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
