-ಶರದ್ ಪವಾರ್ ಆರೋಗ್ಯ ವಿಚಾರಿಸಿದ ಮೋದಿ
ಮುಂಬೈ: ಎನ್ಸಿಪಿ ಸಂಸ್ಥಾಪಕ ಶರದ್ ಪವಾರ್ (Sharad Pawar) ಅವರ ಆರೋಗ್ಯ ಸ್ಥಿರವಾಗಿದ್ದು, ಸದ್ಯ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಮುನ್ನ ಶರದ್ ಪವಾರ್ ಅವರನ್ನು ಪುಣೆಯ (Pune) ಮಲ್ಟಿ-ಸ್ಪೆಷಾಲಿಟಿ ಹೆಲ್ತ್ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ಬುಧವಾರ (ನ.4) ಡಿಸ್ಚಾರ್ಜ್ ಆದ ಕೆಲವೇ ಗಂಟೆಗಳ ನಂತರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ (Mumbais Breach Candy Hospital) ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ರೈತರ ‘ಜೈಲ್ ಭರೋ’ ಹೈಡ್ರಾಮಾ: ಮುಖಂಡರ ಸಾಮೂಹಿಕ ವಶ, ಪೊಲೀಸರ ಕಸ್ಟಡಿಯಲ್ಲೇ ರೈತ ಅಸ್ವಸ್ಥ!
ಉಸಿರಾಟ ಹಾಗೂ ಎದೆಗೆ ಸಂಬಂಧಿಸಿದ ಸೋಂಕಿನ ಕಾರಣದಿಂದ ಶರದ್ ಪವಾರ್ ಅವರನ್ನು ಬುಧವಾರ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ.ಸಮ್ದಾನಿ ಅವರು ತಿಳಿಸಿದ್ದಾರೆ.
ಇನ್ನೂ ಪ್ರಧಾನಿ ಮೋದಿ ಅವರು ಶರದ್ ಪವಾರ್ ಅವರಿಗೆ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಸಂಪೂರ್ಣ ವಿಶ್ರಾಂತಿ ಪಡೆದು, ಶೀಘ್ರದಲ್ಲೇ ಗುಣಮುಖರಾಗುವಂತೆ ತಿಳಿಸಿದ್ದಾರೆ ಎಂದು ಪವಾರ್ ಅವರ ಆಪ್ತ ಸಹಾಯಕ ವಿಠ್ಠಲ್ ಮಣಿಯಾರ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.ಇದನ್ನೂ ಓದಿ: ಯುವತಿಗೆ ಮತ್ತು ಬರಿಸಿ ರೇಪ್ ಆರೋಪ – ಯುವಕ ಸಮೀರ್ ಬಂಧನ
