ಬೆಂಗಳೂರು: ಹಳ್ಳಿಗರೆಂದರೆ ಗುಗ್ಗುಗಳಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರಿಗೆ ತಿರುಗೇಟು ನೀಡಿದ್ದಾರೆ.
ಸ್ಟಿಂಗ್ ಆಪರೇಷನ್ ಕುರಿತ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಅವರು, ಹೆಚ್.ಡಿ.ಕುಮಾರಸ್ವಾಮಿ ಹಳ್ಳಿ ಗುಗ್ಗುನಾ? ನಾವೇನು ಬಿಗ್ ಬಾಸ್ ನಡೆಸ್ತಿದ್ದೀವಾ, ತನಿಖೆಯನ್ನು ಲೈವ್ ಸ್ಟ್ರೀಮ್ ಮಾಡಲು ಆಗುತ್ತಾ? ತನಿಖೆ ಮಕ್ಕಳ ಆಟವಲ್ಲ, ಅವರಿಂದ ನನಗೆ ಪ್ರಮಾಣಪತ್ರ ಅಗತ್ಯವಿಲ್ಲ, ಕಲಿಯುವುದು ಏನೂ ಇಲ್ಲ” ಎಂದು ವಾಗ್ದಾಳಿ ನಡೆಸಿದ್ದರು.
“ಭಾರತದ ಆತ್ಮ ಹಳ್ಳಿಗಳಲ್ಲಿದೆ.”
-ರಾಷ್ಟ್ರಪಿತ ಮಹಾತ್ಮ ಗಾಂಧಿನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ.
#ಹಳ್ಳಿಗರೆಂದರೆಗುಗ್ಗುಗಳಲ್ಲ
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 5, 2026
ಈ ಟೀಕೆಗೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಹೆಚ್ಡಿಕೆ, ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹೇಳಿದ್ದಾರೆ. ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂದು ಬರೆದು #ಹಳ್ಳಿಗರೆಂದರೆಗುಗ್ಗುಗಳಲ್ಲ ಎಂದು ಹ್ಯಾಶ್ ಟ್ಯಾಗ್ ಹಾಕಿ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ.
ಮಿಸ್ಟರ್ Useless Fellow, ‘ಇಟಲಿ’ ಪ್ರಿಯಾಂಕ ಖರ್ಗೆ (@PriyankKharge) ಅವರೇ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ‘ಹಳ್ಳಿ ಗುಗ್ಗು’ ಹಾಗೂ ‘ಈಡಿಯಟ್’ ಎಂದು ಜರಿದು ನಿಮ್ಮ ‘ಹೈಟೆಕ್’ ಅಹಂಕಾರವನ್ನು ಹಾಗೂ ನಿಮ್ಮ ಸಂಸ್ಕಾರವನ್ನು ಪ್ರದರ್ಶಿಸಿದ್ದೀರಿ.
ಅಧಿಕಾರದ ಮದದಲ್ಲಿ ನೀವು ಆಡಿರುವ ಈ ಮಾತು ಕೇವಲ ಕುಮಾರಸ್ವಾಮಿ ಅವರಿಗಷ್ಟೇ ಅಲ್ಲ, ಇಡೀ ದೇಶದ ಹಳ್ಳಿಗಳ ಮಣ್ಣಿನ ಮಕ್ಕಳಿಗೆ ಹಾಗೂ ಕಷ್ಟಪಟ್ಟು ದುಡಿಯುವ ರೈತರಿಗೆ ಮಾಡಿದ ಘೋರ ಅಪಮಾನ. ದೆಹಲಿ ಮತ್ತು ಇಟಲಿ ನಾಯಕರ ಎದುರು ಜೀ ಹುಜೂರ್ ಎನ್ನುವ ‘ನಿಮ್ಮಂತಹ ಗುಲಾಮರಿಗೆ’ ಹಳ್ಳಿಗರ ಸ್ವಾಭಿಮಾನ ಎಂದಿಗೂ ಅರ್ಥವಾಗುವುದಿಲ್ಲ.
ರೈತರ ಕಷ್ಟಗಳ ಬಗ್ಗೆ, ಹಳ್ಳಿ ಜನರ ಬವಣೆಗಳ ಬಗ್ಗೆ ನಿಮ್ಮಂತಹ ‘ಟ್ವಿಟ್ಟರ್ ರಾಜಕಾರಣಿ’ಗಳಿಗೆ ವಿವರಿಸುವುದು “ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ”! ಅಪ್ಪನ ಹೆಸರಿನಲ್ಲಿ ಬೆಳೆದು, ದೆಹಲಿ ನಾಯಕರ ಕೃಪೆಯಿಂದ ಅಧಿಕಾರ ಪಡೆದಿರುವ ನಿಮಗೆ, ಗ್ರಾಮ ವಾಸ್ತವ್ಯ ಮಾಡಿ ಜನರ ಕಣ್ಣೀರು ಒರೆಸಿದ ಹಾಗೂ ಮುಖ್ಯಮಂತ್ರಿಯಾಗಿ ಎರಡು ಬಾರಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಅನ್ನದಾತರ ಬೆನ್ನಿಗೆ ನಿಂತ ಮಣ್ಣಿನ ಮಗನ ನೈಜತೆ ‘ಗುಗ್ಗು’ ಮತ್ತು ‘ಈಡಿಯಟ್’ ತರಹವೇ ಕಾಣುತ್ತದೆ. ಹೌದು, ನಾವು ರೈತರ ಪರ ನಿಲ್ಲುವ ಹೆಮ್ಮೆಯ ‘ಹಳ್ಳಿ ಗುಗ್ಗು’ಗಳೇ ಹೊರತು, ಬಣ್ಣ ಬದಲಿಸುವ ನಿನ್ನಂತಹ ‘ಕಾರ್ಪೋರೇಟ್ ಓತಿಕ್ಯಾತ’ಗಳಲ್ಲ.
ನಿಮ್ಮ @INCKarnataka ಆಡಳಿತದಲ್ಲಿ ಜನಸಾಮಾನ್ಯರಿಗೆ ಕಿಂಚಿತ್ತೂ ಒಳಿತಾಗಿಲ್ಲ. ಆದರೆ ನಿಮ್ಮ ಶೋಕಿ ಹಾಗೂ ವ್ಯಂಗ್ಯದ ಮಾತುಗಳಿಗೆ ಮಾತ್ರ ಕಮ್ಮಿಯಿಲ್ಲ. ಎಸಿ ಕೊಠಡಿಯಲ್ಲಿ ಕೂರುವ ಇಟಲಿ ಕಾಂಗ್ರೆಸ್ನ ಗುಲಾಮರಿಗೆ ಹಳ್ಳಿಯ ಮಣ್ಣಿನ ಬೆವರಿನ ಬೆಲೆ ಏನ್ಗೊತ್ತು?
ಮರೆಯಬೇಡಿ ಇಟಲಿ ಪ್ರಿಯಾಂಕ ಖರ್ಗೆಯವರೇ, ಎಲೆಕ್ಷನ್ ಬಂದಾಗ ಇದೇ ‘ಹಳ್ಳಿ ಗುಗ್ಗು’ಗಳ ಮನೆ ಬಾಗಿಲಿಗೆ ನೀವು ವೋಟು ಭಿಕ್ಷೆ ಬೇಡಿಕೊಂಡು ಬರಲೇಬೇಕು. ಹಳ್ಳಿಯವರು ಮುಗ್ಧರಿರಬಹುದು, ಆದರೆ ನಿಮ್ಮ ಕಪಟ ರಾಜಕಾರಣವನ್ನು ಅರ್ಥಮಾಡಿಕೊಳ್ಳಲಾಗದಷ್ಟು ದಡ್ಡರಲ್ಲ. ಇದೇ ಹಳ್ಳಿಗರು 2028ಕ್ಕೆ ವೋಟ್ ಒತ್ತುವಾಗ ನಿಮ್ಮನ್ನು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷವನ್ನು ತಿಪ್ಪೆಗುಂಡಿಗೆ ಎಸೆಯುತ್ತಾರೆ.
#ನಾವುಹಳ್ಳಿಯವರುಏನಿವಾಗ
#ನಾವು_ಹಳ್ಳಿಗರು
#ಜೆಡಿಎಸ್— Janata Dal Secular (JDS) (@JanataDal_S) November 5, 2026
ಜೆಡಿಎಸ್ನಿಂದ ಅಭಿಯಾನ:
ಕುಮಾರಸ್ವಾಮಿ ಅವರನ್ನು ಹಳ್ಳಿಗುಗ್ಗು ಎಂದು ಪ್ರಿಯಾಂಕ್ ಕರೆದ ಬೆನ್ನಲ್ಲೆ ಜೆಡಿಎಸ್ ಈಗ “ಹೌದು ಗುರು ನಾವು ಹಳ್ಳಿಯವರು ಏನಿವಾಗ” ಅಭಿಯಾನ ಶುರು ಮಾಡಿದೆ. ಹಳ್ಳಿ ಹಳ್ಳಿಗಳಲ್ಲಿ ಕಾರ್ಯಕರ್ತರು, ಮುಖಂಡರ ಮೂಲಕ ಅಭಿಯಾನ ಪ್ರಾರಂಭ ಮಾಡಿದೆ.
