ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧದ ಲಂಚದ ಆರೋಪಗಳ ತನಿಖೆಗೆ ಕೇರಳ ಸರ್ಕಾರ (Kerala Government) ಆದೇಶ ಹೊರಡಿಸಿದೆ.
ಸುಮಾರು 20 ವರ್ಷಗಳ ಹಿಂದೆ ಕೇರಳದ ಸಾರ್ವಜನಿಕ ನಿರ್ಮಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಜ್ಞಾನೇಶ್ ಕುಮಾರ್ ರಸ್ತೆ ಯೋಜನೆ ಬಿಲ್ ಮಂಜೂರು ಮಾಡಲು 2 ಕೋಟಿ ಲಂಚ ಕೇಳಿದ ಆರೋಪ ಇದಾಗಿದೆ.
2 ಕೋಟಿ ರೂ. ಲಂಚಕ್ಕಾಗಿ 17 ಕೋಟಿ ಮೌಲ್ಯದ ಅನುಮೋದಿತ ಬಿಲ್ಗಳನ್ನು ತಡೆಹಿಡಿಯಲಾಗಿತ್ತು ಅಂತ ಕೊಲ್ಲಂ ಜಿಲ್ಲೆಯ ಗುತ್ತಿಗೆದಾರರಾದ ಸಾಜನ್ ಎಂಬುವವರು ವಿಜಿಲೆನ್ಸ್ ಇಲಾಖೆಗೆ ದೂರು ನೀಡಿದ್ದರು.
ಬಿಲ್ಗಳಿಗೆ ಎಂಜಿನಿಯರ್ಗಳು ಅನುಮೋದನೆ ನೀಡಿದ್ದರೂ ಜ್ಞಾನೇಶ್ ಕುಮಾರ್ ಚೆಕ್ಗಳನ್ನು ತಡೆಹಿಡಿದಿದ್ದರು. ಲಂಚ ನೀಡದ ಹೊರತು ಚೆಕ್ಗಳನ್ನ ಬಿಡುಗಡೆ ಮಾಡಲು ಜ್ಞಾನೇಶ್ ಕುಮಾರ್ ನಿರಾಕರಿಸುತ್ತಿದ್ದಾರೆ ಎಂದು ಮಲೇಷ್ಯಾ ಮೂಲದ ಕಂಪನಿಯ ಯೋಜನಾ ಎಂಜಿನಿಯರ್ ‘ಲೀ ಸೀ ಬೀನ್’ ನಮಗೆ ತಿಳಿಸಿದ್ದರು.
ಈ ಸಮಸ್ಯೆಯನ್ನು ಬಗೆಹರಿಸಲು ತಾನು ಹಣದ ವ್ಯವಸ್ಥೆ ಮಾಡಿಕೊಡುವುದಾಗಿ ಸಾಜನ್ ಪ್ರಸ್ತಾಪಿಸಿದರೂ, ಕಂಪನಿಯ ಅಧಿಕಾರಿಗಳು ಲಂಚ ನೀಡಲು ನಿರಾಕರಿಸಿದರು. ಕೊನೆಗೆ ಬೆಂಗಳೂರಿನಲ್ಲಿರುವ ಕಂಪನಿಯ ಮತ್ತೊಂದು ಯೋಜನೆಯಿಂದ ‘ಲೀ ಸೀ ಬೀನ್’ ಹಣದ ವ್ಯವಸ್ಥೆ ಮಾಡಿದ್ದರು ಅಂತ ಸಾಜನ್ ವಿವರಿಸಿದ್ದರು.

