ವಾಷಿಂಗ್ಟನ್: ಅಮೆರಿಕದ ಮಹತ್ವದ ಮಧ್ಯಂತರ ಚುನಾವಣೆಯ ಮತದಾನ(US Midterm Elections) ಮುಕ್ತಾಯಗೊಂಡಿದ್ದು, ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಆರಂಭಿಕ ಟ್ರೆಂಡ್ಗಳಲ್ಲಿ ರಿಪಬ್ಲಿಕನ್(Republican) ಪ್ರಾಬಲ್ಯದ ಹಲವು ಕ್ಷೇತ್ರಗಳಲ್ಲಿ ಡೆಮಾಕ್ರಟಿಕ್(Democrats) ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಇದು ಟ್ರಂಪ್(Donald Trump) ಅವರ ಹಿಡಿತವನ್ನು ಸಡಿಲಗೊಳಿಸುವ ಸೂಚನೆ ನೀಡಿದೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್(ಕೆಳಮನೆ) ಚುನಾವಣಾ ಕಣದಲ್ಲಿರುವ ರಿಪಬ್ಲಿಕನ್ ಮೂಲಗಳು ಆರಂಭಿಕ ಫಲಿತಾಂಶಗಳ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಬಾರಿಯ ಫಲಿತಾಂಶ ಡೆಮಾಕ್ರಟ್ಗಳ ಪರವಾಗಿ ವಾಲುವ ಸಾಧ್ಯತೆ ದಟ್ಟವಾಗಿದೆ ಎಂದು ಅಭಿಪ್ರಾಯಪಟ್ಟಿವೆ.
ಒಂದು ವೇಳೆ ಕೆಳಮನೆಯಲ್ಲಿ ರಿಪಬ್ಲಿಕನ್ ಪಕ್ಷ ಸೋಲುಂಡರೆ, ಟ್ರಂಪ್ ಅವರ ಶಾಸಕಾಂಗ ಕಾರ್ಯಸೂಚಿಗಳಿಗೆ ತಡೆ ಒಡ್ಡಲು ಹಾಗೂ ಅವರ ಆಡಳಿತದ ವಿರುದ್ಧ ವ್ಯಾಪಕ ತನಿಖೆ ನಡೆಸಲು ಡೆಮಾಕ್ರಟ್ಗಳಿಗೆ ಪೂರ್ಣ ಅಧಿಕಾರ ಸಿಗಲಿದೆ. ಅಷ್ಟೇ ಅಲ್ಲದೆ, ಸೆನೆಟ್ನಲ್ಲೂ ಹಿನ್ನಡೆಯಾದರೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳ ನೇಮಕ ಪ್ರಕ್ರಿಯೆಯ ಮೇಲೂ ಟ್ರಂಪ್ ಪ್ರಭಾವ ಕಳೆದುಕೊಳ್ಳಲಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ಇರಾನ್ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ರಿಪಬ್ಲಿಕನ್ಗಳ ವಿರುದ್ಧ ಜನಮತ ತಿರುಗುತ್ತಿರುವ ಸಂದರ್ಭದಲ್ಲೇ ಈ ಚುನಾವಣೆಗಳು ನಡೆದಿದ್ದು, ಇದರ ಅಂತಿಮ ಫಲಿತಾಂಶವು ಟ್ರಂಪ್ ಆಡಳಿತದ ಮೇಲಿನ ಜನತೆಯ ರಾಷ್ಟ್ರವ್ಯಾಪಿ ತೀರ್ಪು ಎಂದೇ ವಿಶ್ಲೇಷಿಸಲಾಗುತ್ತಿದೆ.
FoxNews Ratings are way down (27%!) because they’re spending too much time covering the Trump Deranged Dumocrats! All of those people who used to watch Fox, and no longer do, get it. It’s them, not me — My numbers are better than they have ever been. The new CNN Poll stated that “TRUMP” is at 99% among Republicans and, among Republican Presidents, “TRUMP” is at 53%, compared to Ronald Reagan at 18%, and Abraham Lincoln at 8%! Fox knows this, and so does everyone else! Also, why is Fox Corp. spending so much money donating to the Worst of the Worst, including Hakeem Jeffries, Jamie Raskin, Ted Lieu, Pete Aguilar, the California Dumocratic Party, the Dumocratic Congressional Campaign Committee, the Dumocratic Senatorial Campaign Committee, the Congressional Black Caucus PAC, the CHC Bold PAC, and the New Dumocrat Coalition Action Fund, among others? No wonder FoxNews Ratings are collapsing, and they’re going to go down a lot further. They’re way down, not because of me, but because they are AGAINST me! This happened once before, and Fox almost collapsed. It’s happening again! President DONALD J. TRUMP
( TS: Nov 3 2026, 7:00 PM ET )
— Commentary Donald J. Trump Truth Social Posts On X (@TrumpTruthOnX) November 4, 2026
ಕೆಳಮನೆಯಲ್ಲಿ ಡೆಮಾಕ್ರಟ್ಗಳು ಕೆಳಮನೆಯಲ್ಲಿ ಬಹುಮತ ಪಡೆಯುವ ಸಾಧ್ಯತೆ ದಟ್ಟವಾಗಿದೆ. Decision Desk HQ ಮುನ್ಸೂಚನೆಯ ಪ್ರಕಾರ ಡೆಮಾಕ್ರಟಿಕ್ ಪಕ್ಷವು 241 ಸ್ಥಾನಗಳನ್ನು ಹಾಗೂ ರಿಪಬ್ಲಿಕನ್ ಪಕ್ಷವು 194 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಸೆನೆಟ್ (ಮೇಲ್ಮನೆ) ಚುನಾವಣೆಯಲ್ಲೂ ಡೆಮಾಕ್ರಟ್ಗಳು ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಬಹುಮತದ ನಿಯಂತ್ರಣ ಸಾಧಿಸಲು ಅವರಿಗೆ ಕೇವಲ 4 ಸ್ಥಾನಗಳ ಅಗತ್ಯವಿದೆ.
ರಾಜ್ಯಗಳ ಗವರ್ನರ್ ಚುನಾವಣೆಯ ಆರಂಭಿಕ ಟ್ರೆಂಡ್ಗಳಲ್ಲೂ ಡೆಮಾಕ್ರಟ್ಗಳು ಮುನ್ನಡೆಯಲ್ಲಿದ್ದಾರೆ. 13 ಗವರ್ನರ್ ಸ್ಥಾನಗಳು ಡೆಮಾಕ್ರಟ್ಗಳ ಪಾಲಾಗುವ ಹಾಗೂ 9 ಸ್ಥಾನಗಳು ರಿಪಬ್ಲಿಕನ್ನರಿಗೆ ಸಿಗುವ ಸಾಧ್ಯತೆ ಇದೆ. ಜಾರ್ಜಿಯಾ, ಓಹಿಯೋ ಮತ್ತು ಟೆಕ್ಸಾಸ್ನಂತಹ ರಿಪಬ್ಲಿಕನ್ ಭದ್ರಕೋಟೆಗಳಲ್ಲೂ ಡೆಮಾಕ್ರಟಿಕ್ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಿಪಬ್ಲಿಕನ್ ಪಕ್ಷವು ಸಂಸತ್ತಿನ ಕೆಳಮನೆಯ (House) ನಿಯಂತ್ರಣವನ್ನು ಕಳೆದುಕೊಂಡರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದಿನ ಎರಡು ವರ್ಷಗಳ ಆಡಳಿತಾವಧಿಗೆ ದೊಡ್ಡ ಹಿನ್ನಡೆಯಾಗಲಿದೆ. ಡೆಮಾಕ್ರಟ್ಗಳು ಬಹುಮತ ಪಡೆದರೆ ಟ್ರಂಪ್ ಅವರ ಶಾಸಕಾಂಗ ಕಾರ್ಯಸೂಚಿಗಳನ್ನು ನಿರ್ಬಂಧಿಸಲು, ವಲಸೆ ನೀತಿಗಳು ಹಾಗೂ ಇರಾನ್ ಯುದ್ಧದ ನಿರ್ಧಾರಗಳ ಕುರಿತು ಗಂಭೀರ ತನಿಖೆಗಳನ್ನು ಆರಂಭಿಸಲು ಅವರಿಗೆ ಕಾನೂನಾತ್ಮಕ ಅಧಿಕಾರ ಸಿಗುತ್ತದೆ.
ಬಹುಮತಕ್ಕೆ ಎಷ್ಟು ಸ್ಥಾನ ಬೇಕು?
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ (US Midterm Elections) ಒಟ್ಟು ಕಾಂಗ್ರೆಸ್ನ (ಸಂಸತ್ತಿನ) 470 ಸ್ಥಾನಗಳಿಗೆ ಮತ್ತು 36 ರಾಜ್ಯಗಳ ಗವರ್ನರ್ ಹುದ್ದೆಗಳಿಗೆ ಪ್ರಮುಖವಾಗಿ ಚುನಾವಣೆ ನಡೆಯುತ್ತಿದೆ.
1. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್(ಕೆಳಮನೆ)
ಒಟ್ಟು ಸ್ಥಾನಗಳು: 435 ಸ್ಥಾನಗಳು
ಎಲ್ಲಾ 435 ಸ್ಥಾನಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದೆ. ಯಾವುದೇ ಪಕ್ಷವು ಇಲ್ಲಿ ಬಹುಮತ ಸಾಧಿಸಲು 218 ಸ್ಥಾನಗಳ ಅಗತ್ಯವಿದೆ.
2. ಸೆನೆಟ್ (Senate – ಮೇಲ್ಮನೆ)
• ಒಟ್ಟು ಸ್ಥಾನಗಳು: 35 ಸ್ಥಾನಗಳು
ಅಮೆರಿಕದ ಸೆನೆಟ್ನಲ್ಲಿ ಒಟ್ಟು 100 ಸ್ಥಾನಗಳಿದ್ದು, ಪ್ರತಿ ಎರಡು ವರ್ಷಗಳಿಗೊಮ್ಮೆ ಮೂರನೇ ಒಂದು ಭಾಗದಷ್ಟು (1/3) ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಈ ಬಾರಿ 35 ಸ್ಥಾನಗಳಿಗೆ ಮತದಾನ ನಡೆದಿದೆ.
3. ಗವರ್ನರ್ ಚುನಾವಣೆಗಳು
ಒಟ್ಟು ರಾಜ್ಯಗಳು: 36 ರಾಜ್ಯಗಳು
ಅಮೆರಿಕದ ಒಟ್ಟು 50 ರಾಜ್ಯಗಳ ಪೈಕಿ 36 ರಾಜ್ಯಗಳ ಗವರ್ನರ್ ಹುದ್ದೆಗಳಿಗೆ ಈ ಚುನಾವಣೆಯಲ್ಲಿ ಮತದಾರರು ಹೊಸ ನಾಯಕರನ್ನು ಆಯ್ಕೆ ಮಾಡುತ್ತಿದ್ದಾರೆ.
