ಹಾವೇರಿ: ಕಾನ್ಸಟೇಬಲ್ ಪರೀಕ್ಷೆಯಲ್ಲಿ 25 ಅಂಕ, ವಿಎಒ (VAO) ಪರೀಕ್ಷೆಯಲ್ಲಿ 151 ಅಂಕ ಪಡೆದ ಪ್ರಕರಣದ ಆರೋಪಿಯ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಶಿಗ್ಗಾಂವಿ (Shiggaon) ಪೊಲೀಸ್ ಠಾಣೆಯಲ್ಲಿ ಸವಣೂರು ಎಸಿ ಸಮೀರ ಪ್ರಕಾಶ ಖೋಡೆ ಪ್ರಕರಣ ದಾಖಲಿಸಿದ್ದು, ಆರೋಪಿ ಶಂಕರ್ ಬನ್ನೂರು ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: VA ಪರೀಕ್ಷೆ ಟಾಪರ್ ಅಸಲಿ ಮುಖವಾಡ ಕಳಚಿದ ಸಿಸಿಟಿವಿ: ‘ಗೂಗಲ್ ಲೆನ್ಸ್’ ಬಳಸಿ ಬರೆದಿದ್ದ ಅಭ್ಯರ್ಥಿ ಪೊಲೀಸ್ ವಶಕ್ಕೆ!
ತನಿಖೆ ವೇಳೆ ಶಿಗ್ಗಾಂವಿಯ ಪರೀಕ್ಷಾ ಕೊಠಡಿ ಸಂಖ್ಯೆ 12ರಲ್ಲಿ ಪರೀಕ್ಷೆ 1 ಮತ್ತು 2ರ ಪರೀಕ್ಷೆಯಲ್ಲಿ ನಿಯಮ ಉಲ್ಲಂಘನೆ ಮಾಡಿ, ನಕಲು ಮಾಡಿದ್ದು ಬೆಳೆಕಿಗೆ ಬಂದಿದೆ. 200 ಅಂಕಗಳ ಓಎಂಆರ್ ಉತ್ತರ ಪತ್ರಿಕೆಗಳಲ್ಲಿ ಉತ್ತರಗಳನ್ನ ಗುರುತಿಸಿ, ಒಟ್ಟು 151 ಅಕ್ರಮ ಅಧಿಕ ಅಂಕಗಳನ್ನ ಪಡೆದುಕೊಂಡಿದ್ದಾನೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
