ಹಾಸನ: ಇಂದು ಹಾಸನಾಂಬ ದೇವಿ (Hasanamba Devi) ಸಾರ್ವಜನಿಕ ದರ್ಶನಕ್ಕೆ ನಾಲ್ಕನೇ ದಿನ. ಇಂದೂ ಕೂಡ ದೇವಿಯ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ.
ಎಲ್ಲಾ ಸಾಲುಗಳಲ್ಲಿ ಭಕ್ತರು ತುಂಬಿ ತುಳುಕುತ್ತಿದ್ದು, ಧರ್ಮದರ್ಶನ, 1000 ರೂ., 300 ರೂ.ಯ ವಿಶೇಷ ದರ್ಶನದ ಸಾಲಿನಲ್ಲಿಯೂ ಭಾರೀ ಸಂಖ್ಯೆಯಲ್ಲಿ ಜನರಿದಿದ್ದಾರೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್, ನೇರವಾಗಿ ವಿಶೇಷ ದರ್ಶನದ 1000 ರೂ., 300 ರೂ. ಟಿಕೆಟ್ ಮಾರಾಟ ಹಾಗೂ ಲಾಡು ಪ್ರಸಾದ ಮಾರಾಟದಿಂದ ಮೂರೇ ದಿನದಲ್ಲಿ ಐದು ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಹೆಚ್ಚಿನ ಭಕ್ತರು ಇರುವುದರಿಂದ ದರ್ಶನ ವಿಳಂಬವಾದರೂ ಭಕ್ತರು ಸಮಾಧಾನದಿಂದ ದೇವಿ ದರ್ಶನ ಪಡೆಯುತ್ತಿದ್ದಾರೆ. ಇಂದು ದೇವಿ ದರ್ಶನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ, ಮಠಾಧೀಶರು, ನ್ಯಾಯಾಧೀಶರು ಸೇರಿ ಹಲವು ಗಣ್ಯರು ಆಗಮಿಸಲಿದ್ದಾರೆ.
