ತುಮಕೂರು: ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ (Uttarakhand Helicopter Crash) ಮೃತಪಟ್ಟ ಐವರ ಪೈಕಿ ಇಬ್ಬರು ತುಮಕೂರು (Tumakuru) ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ಹುಲಿಯೂರುದುರ್ಗ ಮೂಲದವರು ಎಂದು ಗುರುತಿಸಲಾಗಿದೆ. ಮೃತರಾದ ಶಂಕರೇಗೌಡ ಮತ್ತು ನಟರಾಜ್ ಅವರ ಪಾರ್ಥಿವ ಶರೀರ ಇಂದು ರಾತ್ರಿ ಬೆಂಗಳೂರಿಗೆ ತಲುಪಲಿವೆ.
ಇಂದು ರಾತ್ರಿ ವಿಮಾನದ ಮೂಲಕ ಇಬ್ಬರ ಪಾರ್ಥಿವ ಶರೀರಗಳನ್ನು ಬೆಂಗಳೂರಿಗೆ ತರಲಾಗುತ್ತಿದೆ. ಬಳಿಕ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ರಾತ್ರಿ 2 ಗಂಟೆ ಸುಮಾರಿಗೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗಕ್ಕೆ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಅನಧಿಕೃತ ವಿಪಕ್ಷ ನಾಯಕ – `ಇಂಡಿಯಾ’ ರ್ಯಾಲಿ ಫ್ಲಾಪ್ ಶೋ ಎಂದ ಬಿಜೆಪಿ
ನಾಳೆ ಇಬ್ಬರ ಅಂತ್ಯಕ್ರಿಯೆ:
ಮೃತ ಶಂಕರೇಗೌಡ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 8 ಗಂಟೆಗೆ ಅವರ ಹುಟ್ಟೂರು ಹಕ್ಕಿಮರಿಪಾಳ್ಯದಲ್ಲಿ ನೆರವೇರಲಿದೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಕೊನೇ ಪಂದ್ಯದಲ್ಲೂ ಬೆಂಚ್ ಕಾದ ವೈಭವ್ – ಎಲ್ಲರನ್ನೂ ಖುಷಿಪಡಿಸೋದು ನನ್ನ ಕೆಲಸ ಅಲ್ಲ ಎಂದ ಗಂಭೀರ್
ಇನ್ನು ನಟರಾಜ್ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 9 ಗಂಟೆಗೆ ಅವರ ಹುಟ್ಟೂರು ಹುಲಿಯೂರುದುರ್ಗದ ಹಳೇಯೂರು ಗ್ರಾಮದಲ್ಲಿ ನಡೆಯಲಿದೆ. ಕುಟುಂಬದ ಆಪ್ತ ಮೂಲಗಳ ಪ್ರಕಾರ, ಇಬ್ಬರ ಅಂತಿಮ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಪಾರ್ಥಿವ ಶರೀರಗಳ ಆಗಮನಕ್ಕಾಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಾಯುತ್ತಿದ್ದಾರೆ. ಇದನ್ನೂ ಓದಿ: ಯಾರ್ರೀ ಅದು ಕಮೀಷನರ್, ಹೆಡ್ ಕ್ಲರ್ಕ್ಗಿಂತ ಕಡೆಯಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ – ಕುಮಾರಸ್ವಾಮಿ ಕೆಂಡಾಮಂಡಲ
ಉತ್ತರಾಖಂಡ್ನಲ್ಲಿ ಹೆಲಿಕಾಪ್ಟರ್ ಪತನಗೊಂಡು ಐವರು ಮೃತಪಟ್ಟಿರುವ ಘಟನೆ ರಾಜ್ಯದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಅದರಲ್ಲೂ ತುಮಕೂರು ಜಿಲ್ಲೆಯ ಒಂದೇ ತಾಲೂಕಿನ ಇಬ್ಬರು ಈ ದುರಂತದಲ್ಲಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ಶೋಕ ಮೂಡಿಸಿದೆ. ಇದನ್ನೂ ಓದಿ: ʻಸ್ಟಿಂಗ್ ಆಪರೇಷನ್ʼ ವಿಡಿಯೋಗಳನ್ನ ಕೆನಡಾದಲ್ಲಿ ಅಪ್ಲೋಡ್ ಮಾಡಿದ್ಯಾರು? – ನರೇಂದ್ರಸ್ವಾಮಿ ಸ್ಫೋಟಕ ಹೇಳಿಕೆ

