ನವದೆಹಲಿ: 2024ರ ಲೋಕಸಭೆ ಚುನಾವಣೆಯ ಫಲಿತಾಂಶ ಅಕ್ರಮವಾಗಿದೆ ಎಂಬ ರಾಹುಲ್ ಗಾಂಧಿ (Rahul Gandhi) ಹೇಳಿಕೆಗೆ ಬಿಜೆಪಿ (BJP) ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಅವರನ್ನೇ `ಅನಧಿಕೃತ ವಿಪಕ್ಷ ನಾಯಕ’ ಎಂದು ಕರೆದಿರುವ ಬಿಜೆಪಿ, ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ಪ್ರತಿಭಟನಾ ರ್ಯಾಲಿಯನ್ನು (INDIA Bloc Rally) `ಫ್ಲಾಪ್ ಶೋ’ ಎಂದು ಟೀಕಿಸಿದೆ.
ಭಾನುವಾರ ವಿರೋಧ ಪಕ್ಷಗಳ ರ್ಯಾಲಿ ಮುಕ್ತಾಯಗೊಂಡ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ (Sambit Patra), ರ್ಯಾಲಿಯಲ್ಲಿ ಶೇ.40ರಷ್ಟು ಜಾಗ ಖಾಲಿ ಉಳಿದಿತ್ತು ಎಂದು ಹೇಳಿದ್ದಾರೆ. ರ್ಯಾಲಿಯಲ್ಲಿ 10 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ಹೇಳಿಕೊಂಡಿದ್ದವು. ಆದರೆ ವಾಸ್ತವದಲ್ಲಿ ಅಷ್ಟು ಜನರು ಸೇರಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕೊನೇ ಪಂದ್ಯದಲ್ಲೂ ಬೆಂಚ್ ಕಾದ ವೈಭವ್ – ಎಲ್ಲರನ್ನೂ ಖುಷಿಪಡಿಸೋದು ನನ್ನ ಕೆಲಸ ಅಲ್ಲ ಎಂದ ಗಂಭೀರ್
ರಾಮಲೀಲಾ ಮೈದಾನದ ಒಟ್ಟು ಜಾಗದಲ್ಲಿ ಶೇ.40ರಷ್ಟು ಸ್ಥಳ ಖಾಲಿಯಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಮೈದಾನದಲ್ಲಿ 28 ಸಾವಿರ ಕುರ್ಚಿಗಳನ್ನು ಹಾಕಲಾಗಿತ್ತು. ಮಧ್ಯಾಹ್ನ 3:30ರಿಂದ 4 ಗಂಟೆಯ ವೇಳೆಗೆ ಸುಮಾರು 5 ಸಾವಿರದಿಂದ 7 ಸಾವಿರ ಕುರ್ಚಿಗಳು ಖಾಲಿ ಇದ್ದವು. 10 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆಯ ವಾಸ್ತವ ಇದೇ ಎಂದು ಸಂಬಿತ್ ಪಾತ್ರಾ ಟೀಕಿಸಿದ್ದಾರೆ. ಇದನ್ನೂ ಓದಿ: ಯಾರ್ರೀ ಅದು ಕಮೀಷನರ್, ಹೆಡ್ ಕ್ಲರ್ಕ್ಗಿಂತ ಕಡೆಯಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ – ಕುಮಾರಸ್ವಾಮಿ ಕೆಂಡಾಮಂಡಲ
ರಾಹುಲ್ ಗಾಂಧಿ ಅವರ ಭಾಷಣ ಸಂಪೂರ್ಣ ಸಮಯ ವ್ಯರ್ಥ ಮಾಡಿದಂತಿತ್ತು. 2024ರ ಲೋಕಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಾಗಿರಲಿಲ್ಲ ಎಂಬುದನ್ನು ರಾಹುಲ್ ಗಾಂಧಿ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ʻಸ್ಟಿಂಗ್ ಆಪರೇಷನ್ʼ ವಿಡಿಯೋಗಳನ್ನ ಕೆನಡಾದಲ್ಲಿ ಅಪ್ಲೋಡ್ ಮಾಡಿದ್ಯಾರು? – ನರೇಂದ್ರಸ್ವಾಮಿ ಸ್ಫೋಟಕ ಹೇಳಿಕೆ
ಚುನಾವಣೆ ಅಕ್ರಮವಾಗಿ ನಡೆದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಿತ್ತು. 2024ರ ಚುನಾವಣೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ, ಕಾಂಗ್ರೆಸ್ ಅಥವಾ ಇಂಡಿಯಾ ಒಕ್ಕೂಟದ ಯಾವುದೇ ಪಕ್ಷ ನ್ಯಾಯಾಲಯದಲ್ಲಿ ಒಂದೇ ಒಂದು ಅರ್ಜಿ ಸಲ್ಲಿಸಿದೆಯೇ? ಎರಡೂವರೆ ವರ್ಷಗಳ ಬಳಿಕ ರಾಮಲೀಲಾ ಮೈದಾನದಲ್ಲಿ ನಿಂತು ಚುನಾವಣೆಯನ್ನು ಅಕ್ರಮ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯೋತ್ಸವ ಬಿಟ್ಟು ದೆಹಲಿ ಪ್ರತಿಭಟನೆಗೆ ತೆರಳಿದ ಕೈ ನಾಯಕರು: ಗೋವಿಂದ ಕಾರಜೋಳ ಖಂಡನೆ
ಭಾರತ ಅವರ `ಅಬ್ಬು ಜಾನ್’ಗೆ (ತಂದೆಗೆ) ಸೇರಿದ್ದಲ್ಲ, ಅದು ದೇಶದ ಜನರಿಗೆ ಸೇರಿದ್ದು. ಕಠಿಣ ಪರಿಶ್ರಮ ಮತ್ತು ಬೆವರಿನ ಮೂಲಕವೇ ಒಬ್ಬ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯ. ಅನೇಕ ಪಕ್ಷಗಳು ಮತ್ತು ವಿವಿಧ ಧ್ವಜಗಳನ್ನು ಒಟ್ಟುಗೂಡಿಸಿದರೂ ಭಾನುವಾರದ ರ್ಯಾಲಿಯಲ್ಲಿ 10 ಲಕ್ಷ ಜನರನ್ನು ಸೇರಿಸಲು ವಿರೋಧ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಇಂತಹ ತಂತ್ರಗಳನ್ನು ಅನುಸರಿಸುವುದರಿಂದ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ. ಸುಳ್ಳು ಆರೋಪಗಳ ಮೂಲಕ ಇಂಡಿಯಾ ಒಕ್ಕೂಟಕ್ಕೆ ಜನರ ಬೆಂಬಲ ಸಿಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಾಲಿನ ದರ ಏರಿಕೆ | ರೈತರ ಹೆಸರಿನಲ್ಲಿ ಗ್ರಾಹಕರ ಲೂಟಿ, ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ: ಭಾರತಿ ಶೆಟ್ಟಿ
ಭಾರತವು ಭಾರತೀಯ ಜನರಿಗೆ ಸೇರಿದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಹಾ ಮಾರುವ ವ್ಯಕ್ತಿಯೂ ಪ್ರಧಾನಿಯಾಗಬಹುದು, ಸಾಮಾನ್ಯ ವ್ಯಕ್ತಿಯೂ ಗೃಹ ಸಚಿವರಾಗಬಹುದು. ಇದೇ ವಿಚಾರ ನಿಮಗೆ ತೊಂದರೆ ನೀಡುತ್ತಿದೆ. ಇದು ಕೇವಲ ಗೊಂದಲ ಮತ್ತು ಅರಾಜಕತೆಯ ಪ್ರದರ್ಶನ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೇಘಾಲಯ ಸಚಿವ ಸ್ಥಾನಕ್ಕೆ ಮೆತ್ಬಾ ಲಿಂಗ್ಡೋ ರಾಜೀನಾಮೆ
