ಬೆಂಗಳೂರು: ಇವತ್ತು ರೈತರ ಹೆಸರಿನಲ್ಲಿ ಗ್ರಾಹಕರನ್ನು ಲೂಟಿ ಮಾಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ (Bharathi Shetty) ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಹಾಲಿಗೆ 17 ರೂಪಾಯಿ ದರ (Milk Price Hike) ಏರಿಸಿದೆ ಎಂದು ಖಂಡಿಸಿದರು. ಇದನ್ನೂ ಓದಿ: ಮೇಘಾಲಯ ಸಚಿವ ಸ್ಥಾನಕ್ಕೆ ಮೆತ್ಬಾ ಲಿಂಗ್ಡೋ ರಾಜೀನಾಮೆ
ಹಿಂದೆ ಭಾರತೀಯ ಜನತಾ ಪಕ್ಷದ ಸರ್ಕಾರ ಇದ್ದಾಗ 50 ಪೈಸೆ ಜಾಸ್ತಿ ಮಾಡಿದಂತ ಸಂದರ್ಭದಲ್ಲಿ ಇದೇ ಕಾಂಗ್ರೆಸ್ ಮುಖಂಡರು ಬೀದಿಗೆ ಇಳಿದು ಹೋರಾಟ ಮಾಡಿ ಗಲಾಟೆ ಮಾಡಿದ್ದರು. ಇವತ್ತು 17 ರೂಪಾಯಿ ಏರಿಸಿದ್ದಾರೆ. ಇದರಿಂದ ಜನಸಾಮಾನ್ಯರು ಸೇರಿ ಎಲ್ಲರೂ ಕಣ್ಣೀರು ಹಾಕುವ ವ್ಯವಸ್ಥೆಯನ್ನು ಈ ಸರ್ಕಾರ ಮಾಡಿಕೊಟ್ಟಿದೆ ಎಂದು ದೂರಿದರು. ಇದನ್ನೂ ಓದಿ: ಅಣಕು ಸಂಸತ್ತಿನಲ್ಲಿ ಮಾತ್ರ ನೀವು ಪಿಎಂ, ನಿಜವಾಗಲೂ ಆ ಕನಸು ನನಸಾಗಲ್ಲ: ರಾಹುಲ್ಗೆ ಅಮಿತ್ ಶಾ ವ್ಯಂಗ್ಯ
ರೈತರಿಗೆ 7 ರೂಪಾಯಿ ಕೊಡುವಂತದ್ದು ನ್ಯಾಯಯುತ, ಅವರಿಗೆ ಕೊಡಲೇಬೇಕು. ಅದಕ್ಕೋಸ್ಕರ ಗ್ರಾಹಕರ ಜೇಬಿಗೆ ಕೈ ಹಾಕುವುದಲ್ಲ. ನಿಮ್ಮ ಖಜಾನೆ ಖಾಲಿಯಾಗಿದೆಯಾ? ನೀವು ಲೂಟಿ ಮಾಡುವುದನ್ನು ನಿಲ್ಲಿಸಿದರೆ ಹಾಲಿಗೆ ಪ್ರೋತ್ಸಾಹಧನ ಕೊಡಲು ಸಾಧ್ಯ ಎಂದು ನುಡಿದರು. ಇದನ್ನೂ ಓದಿ: `ಇಂಡಿಯಾ’ ರ್ಯಾಲಿ ಕಾಂಗ್ರೆಸ್ ರಾಜಕೀಯ ಪತನದ ಶವಪೆಟ್ಟಿಗೆಗೆ ಕೊನೆಯ ಮೊಳೆ: ಜೆ.ಪಿ.ನಡ್ಡಾ
ಹಾಲಿಗೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹಧನ ಕೊಡುವುದಾಗಿ ಹೇಳಿದ್ದರು. ಅದನ್ನು ಕೊಟ್ಟಿದ್ದೀರಾ ಎಂದು ಕೇಳಿದರು. ತಾವು ಪ್ರೋತ್ಸಾಹಧನ ಕೊಡುವುದು ಬಿಟ್ಟು ಜನರ ಮೇಲೆ ಹೊರೆ ಹಾಕುವುದು ಖಂಡನೀಯ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಮೋದಿಯನ್ನ ವಜಾ ಮಾಡಿದಾಗಲೇ ಪ್ರಜಾಪ್ರಭುತ್ವ ಉಳಿಯೋದು – ಖರ್ಗೆ, ದೀದಿ, ಅಖಿಲೇಶ್ ಯಾದವ್ ನಿಗಿನಿಗಿ
ನಿಮ್ಮ ಕಾಲಾವಧಿಯಲ್ಲಿ, ನಿಮ್ಮ ಸರ್ಕಾರದ ಕಾಲಾವಧಿಯಲ್ಲಿ ಗೋವಿನ ರಕ್ಷಣೆ ಆಗುವುದಿಲ್ಲ. ಗೋವಿನ ಭಕ್ಷಣೆ, ಆಗುವುದನ್ನು ನಾವು ನಿರಂತರವಾಗಿ ನೋಡುತ್ತೇವೆ. ಕೋಲಾರದಲ್ಲಿ ಗೋವನ್ನ ಕದಿಯುವ ಕೆಲಸವನ್ನ ಖದೀಮರು ಮಾಡಿದರೆ, ಕಾನೂನು ಸುವ್ಯವಸ್ಥೆ ಸತ್ತುಹೋಗಿದೆ. ಅವರನ್ನು ಹಿಡಿಯುವಂತ ಕೆಲಸವನ್ನು ತಮ್ಮಿಂದ ಆಗುತ್ತಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಜ್ಞಾನೇಶ್ ಕುಮಾರ್ ಜೈಲಿಗೆ ಹೋಗ್ತಾರೆ, 2024 ರ ಚುನಾವಣೆಯೇ ಅಕ್ರಮ: ರಾಹುಲ್ ಗುಡುಗು
ಹಾಲಿನ ದರ ಏರಿಸಿ ಕನ್ನಡಿಗರನ್ನು ದರೋಡೆ ಮಾಡುವುದನ್ನು ಕೈಬಿಡಿ ಎಂದು ಆಗ್ರಹಿಸಿದರು. ಇಲ್ಲವಾದರೆ, ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಹೋರಾಟ ಮಾಡಲಿದೆ. ನಾಳೆ ಬೆಂಗಳೂರಿನಲ್ಲಿ ನಾವು ಫ್ರೀಡಂ ಪಾರ್ಕ್ನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಿವೀಸ್ಗೆ 7 ವಿಕೆಟ್ಗಳ ಭರ್ಜರಿ ಜಯ – ಸರಣಿ ಗೆದ್ದರೂ 17 ವರ್ಷಗಳಲ್ಲಿ ಫಸ್ಟ್ ಟೈಮ್ ಕೆಟ್ಟ ದಾಖಲೆ ಬರೆದ ಭಾರತ
