ಬಿಗ್ಬಾಸ್ ಇಂದಿನ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಮನೆಮಂದಿಯ ವಿರುದ್ಧ ಕಿಚ್ಚ ಸುದೀಪ್ (Kiccha Sudeep) ಸಿಡಿದೆದ್ದಿದ್ದಾರೆ. ಮನೆಯ ಕೆಲಸ ಹಾಗೂ ಬಿಗ್ಬಾಸ್ ರೂಲ್ಸ್ ಪಾಲಿಸದಿರುವವರ ವಿರುದ್ಧ ಬಿಗ್ ಪನಿಶ್ಮೆಂಟ್ ನೀಡೋದಾಗಿ ತಿಳಿಸಿದ್ದಾರೆ.
ಹೌದು, ಈ ವಾರ ಬಿಗ್ಬಾಸ್ (Bigg Boss) ಮನೆಯಲ್ಲಿ ಹಲವರು ರೂಲ್ಸ್ಗಳನ್ನು ಬ್ರೇಕ್ ಮಾಡಿದ್ದಾರೆ. ಕ್ಯಾಪ್ಟನ್ ಹೇಳಿದ ಕೆಲಸವನ್ನು ಮಾಡುವ ವಿಷಯದಲ್ಲಿ ಹಾಗೂ ಬಿಗ್ಬಾಸ್ ನೀಡುವ ರೂಲ್ಸ್ಗಳನ್ನು ಫಾಲೋ ಮಾಡುತ್ತಿಲ್ಲ. ಇದನ್ನೂ ಓದಿ: ಪುತ್ರನ ಬರ್ತ್ಡೇಗೆ ಜೈಲಲ್ಲೇ ಸಿಗೋ ಚಾಕೋಲೇಟ್ ಕೊಟ್ಟು ವಿಶ್ ಮಾಡಿದ ದರ್ಶನ್
Characterನ meterನಲ್ಲಿ ಏರುಪೇರು!
ಬಿಗ್ ಬಾಸ್ – ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/B3zrp623nV
— Colors Kannada (@ColorsKannada) October 31, 2026
ಸೌಂದರ್ಯ ಶೆಟ್ಟಿಯವರ (Soundarya Shetty) ಕ್ಯಾಪ್ಟನ್ಸಿಯಲ್ಲಿ ಗಗನ್ಗೆ ಪಾತ್ರೆ ತೊಳೆಯುವಂತೆ ಪನಿಶ್ಮೆಂಟ್ ನೀಡಿದ್ದರು. ಸೀಸನ್ ಆರಂಭವಾದಾಗಿನಿಂದ ಒಂದು ಬಾರಿ ಹಾಗೂ ಸೌಂದರ್ಯ ಶೆಟ್ಟಿಯವರ ಕ್ಯಾಪ್ಟನ್ಸಿಯಲ್ಲಿ ಎರಡು ಬಾರಿ ಗ್ಲಾಸ್ ಒಡೆದು ಹಾಕಿದ್ದರು. ಇದೇ ಕಾರಣಕ್ಕಾಗಿ ಪಾತ್ರೆ ತೊಳೆಯುವಂತೆ ಪನಿಶ್ಮೆಂಟ್ ನೀಡಿದ್ದರು. ಆದರೆ ಗಗನ್ ತೊಳೆಯುವುದಿಲ್ಲ ಘಂಟಾಘೋಷವಾಗಿ ತಿಳಿಸಿದ್ದರು. ಜೊತೆಗೆ ಹೆಚ್ಚಿನ ಜನ ಬಿಗ್ಬಾಸ್ ಮನೆಯಲ್ಲಿ ಪಾತ್ರೆ ತೊಳೆಯಲು ಹಿಂಜರಿಯುತ್ತಿದ್ದಾರೆ.
ಇನ್ನೂ ಸಾಮಾನ್ಯವಾಗಿ ಬಿಗ್ಬಾಸ್ ರೂಲ್ಸ್ ಪ್ರಕಾರ, ವಾರದ ಕೊನೆಯಲ್ಲಿ ಯಾರು ಕಳಪೆ ಪ್ರದರ್ಶನ ನೀಡಿ, ಜೈಲಿಗೆ ಹೋಗುತ್ತಾರೆಯೋ ಅವರ ಕೈಯಿಂದ ತರಕಾರಿ ಕಟ್ ಮಾಡಿಸಬೇಕು. ಜಗದೀಶ್ ಕ್ಯಾಪ್ಟನ್ ಆದ ಈ ವಾರದಲ್ಲಿ ಕಿರಣ್ ಶಾಸ್ತ್ರೀ ಕಳಪೆ ಆಗಿದ್ದರು. ಆದರೆ ಮನೆಯ ಸ್ಪರ್ಧಿಗಳಾದ ಗಗನ್, ತಾಂಡವ್, ಪ್ರಶಾಂತ್, ಧನುಷ್, ಸೋನಿಕಾ ಹಾಗೂ ಜಗದೀಶ್ ಸೇರಿಕೊಂಡು ತರಕಾರಿ ಕಟ್ ಮಾಡಿ, ರೂಲ್ಸ್ ಬ್ರೇಕ್ ಮಾಡಿದ್ದಾರೆ.
Styleಗೆ ಹೊಸ definition – ಕಿಚ್ಚ!
ಬಿಗ್ ಬಾಸ್ – ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKEngage #CKKichcha https://t.co/Yrd2pBh1AE
— Colors Kannada (@ColorsKannada) October 31, 2026
ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ಈ ಬಗ್ಗೆ ಮಾತನಾಡಿದ ಸುದೀಪ್, ಕೆಲವರಿಗೆ ಈ ಮನೆಯಲ್ಲಿ ಪಾತ್ರೆ ತೊಳೆಯೋಕೆ ಇಷ್ಟ ಇಲ್ಲ. ರೂಲ್ಸ್ ಫಾಲೋ ಮಾಡೋಕೆ ಆಗಲ್ಲ. ಅದಕ್ಕೆ ವಾರ ಪೂರ್ತಿ ಅಡುಗೆ ಮಾಡಿ, ಊಟ ಮಾಡಿ, ಆದರೆ ಪಾತ್ರೆಗಳನ್ನು ಯಾರು ತೊಳೆಯಬೇಡಿ. ಯಾರೆಲ್ಲ ರೂಲ್ಸ್ ಬ್ರೇಕ್ ಮಾಡಿದ್ದೀರೋ ಅವರೆಲ್ಲ ನಗುತ್ತಲೇ ಇರಿ. ನಾಳೆ ಎಲ್ಲರಿಗೂ ಬಿಗ್ ಸರ್ಪ್ರೈಸ್ ಇದೆ. Expect The Unexpected ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಮಾಯಣ ಸಿನಿಮಾ ನೋಡಿದ ಯಶ್ ಮಕ್ಕಳು: ಅಪ್ಪನ ಬಗ್ಗೆ ಮೆಚ್ಚುಗೆ
