– ಬಾಲಕಿ ಮೇಲೆ ಹುಡುಗ ಹಲ್ಲೆ ನಡೆಸುತ್ತಿರುವ ದೃಶ್ಯ ವೈರಲ್
ಚಂಡೀಗಢ: ಪಂಚಕುಲದ (Panchkula School Horror) ಶಾಲೆಯೊಂದರಲ್ಲಿ ಕಿಂಡರ್ಗಾರ್ಟನ್ (ನರ್ಸರಿ) ವಿದ್ಯಾರ್ಥಿನಿಯೊಬ್ಬಳ ಮೇಲೆ 3ನೇ ತರಗತಿ ಬಾಲಕ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಲ್ಲುಗಳು, ಹೂವಿನ ಕುಂಡದಲ್ಲಿ ಹಲ್ಲೆ ನಡೆಸಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಹುಡುಗನೊಬ್ಬ ಬಾಲಕಿಯ ಜುಟ್ಟು ಹಿಡಿದು, ಆಕೆಯ ತಲೆಯನ್ನು ಮೇಜಿನ ಮೇಲೆ ಬಡಿಯುತ್ತಿರುವ ದೃಶ್ಯದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೆಕ್ಟರ್ 20ರಲ್ಲಿರುವ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ ನಡೆದಿರುವ ಘಟನೆಯು ಶಾಲಾ ಆವರಣದಲ್ಲಿ ಪುಟ್ಟ ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ಬಾಲಕಿಯನ್ನು ಚಂಡೀಗಢದಲ್ಲಿರುವ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (PGIMER) ಗೆ ದಾಖಲಿಸಲಾಗಿದ್ದು, ಅಲ್ಲಿ ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Panchkula School Incident: Special Child Injured in Attack
A serious incident was reported at Sanskriti Model School in Sector 20, Panchkula, where a Class 3 student allegedly attacked a KG student, a special-needs child, with stones and a heavy flowerpot, leaving her unconscious.
The girl was initially taken to the Civil Hospital in Sector 6 and later referred to PGI Chandigarh due to her critical condition. Sector 20 police have inspected the scene and sought CCTV footage and details of the school’s security arrangements.
@ShivamSanghi12
@Radhika_Khera— Dr.Ektta Sharma (@Ekta_79) October 30, 2026
ಬಾಲಕಿಯನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದಿದ್ದಾನೆ. ಧರಧರನೆ ಎಳೆದುಕೊಂಡು ಹೋಗುವುದಲ್ಲದೇ, ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಭೀಕರ ಹಲ್ಲೆಗೊಳಗಾದ ಬಾಲಕಿಗೆ ರಕ್ತಸ್ರಾವವಾಗಿದೆ.
ಬಾಲಕನಿಗೆ ಎಂಟು ವರ್ಷ ಮತ್ತು ಬಾಲಕಿಗೆ ಆರು ವರ್ಷ ಎಂದು ಡಿಸಿಪಿ (ಅಪರಾಧ ವಿಭಾಗ) ಅಮರಿಂದರ್ ಸಿಂಗ್ ದೃಢಪಡಿಸಿದ್ದಾರೆ. ಈ ಘಟನೆಗೆ ಕಾರಣವೇನು ಎಂದು ಕೇಳಿದಾಗ, ಬಾಲಕನಿಗೆ ವೈದ್ಯಕೀಯ ಮೌಲ್ಯಮಾಪನ ನಡೆಯುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಏಳರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಇಂತಹ ಮೌಲ್ಯಮಾಪನಗಳನ್ನು ನಡೆಸಲಾಗುತ್ತದೆ. ಅದರ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮವನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ. ತನಿಖೆಯ ಭಾಗವಾಗಿ ಪೊಲೀಸರು ಶಾಲಾ ಆಡಳಿತ ಮಂಡಳಿಯವರನ್ನೂ ವಿಚಾರಣೆ ನಡೆಸುತ್ತಿದ್ದಾರೆ.
