ಬೆಂಗಳೂರು: ಪುಲಿಕೇಶಿನಗರದಲ್ಲಿ ಐಇಡಿ ಬ್ಲಾಸ್ಟ್ ಬಳಿಕ ಇದೀಗ ಮತ್ತೊಂದು ಸ್ಫೋಟಕ ವಸ್ತು (Explosive Substance) ಪತ್ತೆಯಾಗಿರುವ ಘಟನೆ ಜ್ಞಾನಭಾರತಿಯ (Jnana Bharathi) ಸೊಣ್ಣೇನಹಳ್ಳಿಯಲ್ಲಿ (Sonnenahalli) ನಡೆದಿದೆ.
ಸೊಣ್ಣೇನಹಳ್ಳಿ ಸರ್ಕಲ್ ಬಳಿ ಬಂಡೆ ಒಡೆಯಲು ಬಳಸುವ ಡೈನಮೈಟ್ ಪತ್ತೆಯಾಗಿದ್ದು, ಸ್ಥಳದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, ಸ್ಫೋಟಕ ನಿಷ್ಕ್ರಿಯಗೊಳಿಸಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ʻಹೆಲಿಕಾಪ್ಟರ್ ಕಳಿಸುವೆ ಕಾರ್ಯಕ್ರಮಕ್ಕೆ ಬನ್ನಿʼ – ಕಾಗೋಡು ತಿಮ್ಮಪ್ಪಗೆ ಕರೆ ಮಾಡಿ ಮಾತಾಡಿದ ಡಿಕೆಶಿ
ಕ್ವಾರಿಗೆ ಬಳಸುವ ಸ್ಫೋಟಕ ವಸ್ತು ಇದಾಗಿದೆ. ಈ ಸ್ಫೋಟಕ ವಸ್ತುವನ್ನು ಸ್ಥಳದಲ್ಲಿ ತಂದಿಟ್ಟವರು ಯಾರು ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೊಕ್ಕಸ ಭರ್ತಿಗೆ ಇಡೀ ಕೆಎಂಎಫ್ ಅನ್ನೇ ಕಾಂಗ್ರೆಸ್ ಸರ್ಕಾರ ಗುತ್ತಿಗೆ ಹಿಡಿದಿದೆ: ಜೋಶಿ ಆಕ್ರೋಶ
