– 12 ಘಟಕಗಳಿಗೆ ಅನುಮತಿ, 57 ಘಟಕಗಳ ಲೈಸೆನ್ಸ್ ನವೀಕರಣಕ್ಕೆ ಗ್ರೀನ್ ಸಿಗ್ನಲ್
ಬೆಂಗಳೂರು: ರಾಜ್ಯದಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರಾಟ ಮತ್ತು ಉತ್ಪಾದನಾ ಘಟಕಗಳ (Packaged Drinking Water Unint) ವಿರುದ್ಧ ಆಹಾರ ಸುರಕ್ಷತಾ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ನಿಯಮಗಳನ್ನ ಪಾಲಿಸದ ಹಾಗೂ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಮಾನದಂಡಗಳನ್ನ ಪೂರೈಸದ ನೀರಿನ ಘಟಕಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದು, ಒಟ್ಟು 102 ಘಟಕಗಳಿಗೆ ಅನುಮತಿ ನಿರಾಕರಿಸಲಾಗಿದೆ.
ರಾಜ್ಯದಲ್ಲಿರುವ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಪರಿಶೀಲನೆ ನಡೆಸಿದ ಬಳಿಕ ಆಹಾರ ಸುರಕ್ಷತಾ ಇಲಾಖೆ ಈ ಕ್ರಮ ಕೈಗೊಂಡಿದೆ. ಪರಿಶೀಲನೆ ವೇಳೆ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವ ಘಟಕಗಳಿಗೆ ಅನುಮತಿ ನೀಡಲಾಗಿದ್ದು, ಕೆಲವು ಘಟಕಗಳ ಪರವಾನಗಿ ನವೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ.
57 ಘಟಕಗಳ ಲೈಸೆನ್ಸ್ ನವೀಕರಣಕ್ಕೆ ಗ್ರೀನ್ ಸಿಗ್ನಲ್
ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಒಟ್ಟು 12 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳಿಗೆ ಅನುಮತಿ ನೀಡಲಾಗಿದೆ. ಜೊತೆಗೆ 57 ಘಟಕಗಳ ಪರವಾನಗಿ ನವೀಕರಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ನಿಯಮಗಳನ್ನ ಉಲ್ಲಂಘಿಸಿರುವ 37 ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
FSSAI ಮಾನದಂಡ ಪಾಲಿಸದ ಘಟಕಗಳ ಮೇಲೆ ನಿಗಾ
ಅಕ್ಟೋಬರ್ 29 ಮತ್ತು 30ರಂದು ನಡೆಸಿದ ಪರಿಶೀಲನೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಗುಣಮಟ್ಟ, ಉತ್ಪಾದನಾ ಪ್ರಕ್ರಿಯೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಸೇರಿದಂತೆ ಅಗತ್ಯ ಮಾನದಂಡಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸುವ ಹಾಗೂ ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪಾಲಿಸದ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಮುಚ್ಚಲಾದ ಪ್ಯಾಕೇಜ್ಡ್ ಕುಡಿಯುವ ನೀರು ಘಟಕಗಳು
1. ಎಸ್ಎಂಆರ್ ಆಕ್ವಾ ಮಿನರಲ್ಸ್, ಮುಳಬಾಗಿಲು, ಕೋಲಾರ
2. ಎಸ್.ಪಿ. ಫುಡ್ ಆ್ಯಂಡ್ ಬೆವರೇಜಸ್, ಹಾಸನ
3. ಅವಂತಿ ಇಂಡಸ್ಟ್ರೀಸ್, ಮದನಾಯಕನಹಳ್ಳಿ, ಬೆಂಗಳೂರು ನಗರ ಜಿಲ್ಲೆ
4. ಓಂ ಶಕ್ತಿ ಮಿನರಲ್ಸ್, ಮದನಾಯಕನಹಳ್ಳಿ, ಬೆಂಗಳೂರು ನಗರ ಜಿಲ್ಲೆ
5. ಆಕ್ವಾ ರಿಫ್ರೆಶ್, ಕೆಐಎಡಿಬಿ, ಕಲಬುರಗಿ
6. ನಂದಿ ಫುಡ್ ಆ್ಯಂಡ್ ಬೆವರೇಜಸ್, ಕೆಐಎಡಿಬಿ, ಕಲಬುರಗಿ
7. ಸಾಯಿ ರಾಮ್ ಫುಡ್ ಬೆವರೇಜಸ್, ಬೀದರ್
8. ದಲಿಯಾ ಬೆವರೇಜಸ್, ಮೈಸೂರು ಗ್ರಾಮಾಂತರ
9. ಶ್ರೀ ದೇವಿ ಎಂಟರ್ಪ್ರೈಸಸ್, ಬನ್ನಿಮಂಟಪ, ಮೈಸೂರು.
10. ಶ್ರೀ ದುರ್ಗಾ ಎಂಟರ್ಪ್ರೈಸಸ್, ಮೇಟಗಳ್ಳಿ, ಮೈಸೂರು.
11. ಚಿರಂತನ್ ಫುಡ್ ಆ್ಯಂಡ್ ಬೆವರೇಜಸ್, ದಾವಣಗೆರೆ.
12. ಎಂ.ಎಸ್. ಫುಡ್ ಆ್ಯಂಡ್ ಬೆವರೇಜಸ್, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ

