– ಬೆನ್ನಿಗಾನಹಳ್ಳಿಯಿಂದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ರವಾನೆ
ಬೆಂಗಳೂರು: ಮಾನವ ಕಿಡ್ನಿ ಸಾಗಣೆಗೆ ನಮ್ಮ ಮೆಟ್ರೋ (Namma Metro) ನೆರವಾಗಿದ್ದು, 37 ನಿಮಿಷಗಳಲ್ಲಿ ಕಿಡ್ನಿ ಸಾಗಣೆ (Kidney) ಮಾಡಲಾಗಿದೆ.
ಕೋಲಾರದ ಜಾಲಪ್ಪ ಆಸ್ಪತ್ರೆಯಿಂದ ಬೆಂಗಳೂರಿನ (Bengaluru) ನಾಗರಭಾವಿ ಫೋರ್ಟಿಸ್ ಆಸ್ಪತ್ರೆಗೆ ಕಿಡ್ನಿ ಸಾಗಣೆ ಮಾಡಬೇಕಿತ್ತು. ಹೀಗಾಗಿ ಇಂದು (ಅ.30) ಮಧ್ಯಾಹ್ನ 2:58ಕ್ಕೆ ಬೆನ್ನಿಗಾನಹಳ್ಳಿಯಿಂದ (Bennaganahalli) ಮೆಟ್ರೋ ರೈಲು ಹತ್ತಿದ ವೈದ್ಯಕೀಯ ತಂಡ ಮಧ್ಯಾಹ್ನ 3:35ಕ್ಕೆ ಅತ್ತಿಗುಪ್ಪೆ (Attiguppe) ಮೆಟ್ರೋ ನಿಲ್ದಾಣ ತಲುಪಿದೆ. ಇದನ್ನೂ ಓದಿ: 2019ರಲ್ಲಿಯೇ `ಪಬ್ಲಿಕ್ ಟಿವಿ’ ಗುರುತಿಸಿದ್ದ ಶಿವಾನಂದ ಸ್ವಾಮೀಜಿಗೆ ರಾಜ್ಯೋತ್ಸವ ಪ್ರಶಸ್ತಿ
ಜೀವ ಉಳಿಸುವ ಪಯಣ ಮಾನವ ಮೂತ್ರಪಿಂಡ ಸಾಗಣೆಗೆ ನಮ್ಮ ಮೆಟ್ರೋ ನೆರವು / A Race against Time Namma Metro Transports a Human Kidney. For details Pl See the Media Release. https://t.co/awdkc9MS1B
— ನಮ್ಮ ಮೆಟ್ರೋ (@OfficialBMRCL) October 30, 2026
ತುರ್ತು ವೈದ್ಯಕೀಯ ಸೇವೆಗೆ ವೇಗದ ಸಾರಿಗೆ ವ್ಯವಸ್ಥೆ ಇದಾಗಿದ್ದು, ಕೇವಲ 37 ನಿಮಿಷಗಳಲ್ಲಿ ಅತ್ತಿಗುಪ್ಪೆ ನಿಲ್ದಾಣ ನಮ್ಮ ಮೆಟ್ರೋ ಸಹಕಾರಿಯಾಗಿದೆ. ಈವರೆಗೆ ನಮ್ಮ ಮೆಟ್ರೋದಿಂದ 7 ಬಾರಿ ಅಂಗಾಂಗ ಸಾಗಣೆಗೆ ನೆರವಾಗಿದ್ದು, ಒಂದು ಲಿವರ್, ನಾಲ್ಕು ಹೃದಯ ಹಾಗೂ ಒಂದು ಜೋಡಿ ಶ್ವಾಸಕೋಶಗಳ ಸಾಗಣೆಗೆ ಸಹಕಾರ ನೀಡಿದೆ.
