ನವದೆಹಲಿ: ನವೆಂಬರ್ 1 ರಂದು ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಕೈಗೊಂಡಿರುವ ಬೃಹತ್ ಮೆರವಣಿಗೆಯನ್ನು ಮುಂದೂಡುವಂತೆ ದೆಹಲಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (CTI) ಶುಕ್ರವಾರ ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ಪತ್ರ ಬರೆದಿದೆ.
ವರ್ಷದ ದೊಡ್ಡ ಹಬ್ಬ ದೀಪಾವಳಿಯ (Diwali) ಸಮಯದಲ್ಲಿ ರ್ಯಾಲಿ ಕೈಗೊಂಡಿರುವುದು, ಮಾರುಕಟ್ಟೆ ಹಾಗೂ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ದೆಹಲಿ ವರ್ತಕರ ಮಂಡಳಿ ತಿಳಿಸಿದೆ. ಆದ್ದರಿಂದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಈ ಪ್ರತಿಭಟನಾ ಮೆರವಣಿಗೆಯನ್ನು ಮುಂದೂಡುವಂತೆ ಮಂಡಳಿ ಮನವಿ ಮಾಡಿಕೊಂಡಿದೆ. ಆದರೆ, ರಾಹುಲ್ ಗಾಂಧಿ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಹಿನ್ನೆಲೆ ವರ್ತಕರ ಮಂಡಳಿ ಸೋನಿಯಾ ಗಾಂಧಿಯವರ ಮೊರೆ ಹೋಗಿದೆ.
ಹಬ್ಬದ ಶಾಪಿಂಗ್ ಋತುವಿನಲ್ಲಿ ತೀವ್ರ ಆರ್ಥಿಕ ನಷ್ಟದ ಬಗ್ಗೆ ವ್ಯಾಪಾರ ಸಂಸ್ಥೆ ಎಚ್ಚರಿಸಿದೆ. ಪ್ರತಿಭಟನೆಯಿಂದ ರಾಷ್ಟ್ರ ರಾಜಧಾನಿಯ 20 ಮಾರುಕಟ್ಟೆಗಳಲ್ಲಿ 10,000-12,000 ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂದು ಮಂಡಳಿ ತಿಳಿಸಿದೆ.
ನ. 1ರಂದು ಬೃಹತ್ ಪ್ರಮಾಣದಲ್ಲಿ ನಡೆಯತ್ತಿರುವ ಈ ಪ್ರತಿಭಟನೆಗೆ 10 ಲಕ್ಷ ಜನರು ಮತ್ತು 15,000 ರಿಂದ 20,000 ವಾಹನಗಳನ್ನು ಸೇರುವ ಸಾಧ್ಯತೆ ಇದೆ. ಪರಿಣಾಮ ರ್ಯಾಲಿಯಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಬಹುದು ಮತ್ತು ಮಾರುಕಟ್ಟೆಗಳಲ್ಲಿ ಸರಕುಗಳ ಸಾಗಣೆ ಮತ್ತು ಖರೀದಿದಾರರ ಮೇಲೆ ಪರಿಣಾಮ ಬೀರಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (CTI) ತಿಳಿಸಿದೆ.ಇದನ್ನೂ ಓದಿ: ಬಿಡದಿ ಟೌನ್ಶಿಪ್ ಜಟಾಪಟಿ – ರೈತರ ವಿರೋಧದ ನಡ್ವೆ 3,271 ರೈತರ, 1,883 ಎಕರೆ ಭೂಮಿಗೆ ಅಧಿಸೂಚನೆ ಪ್ರಕಟ
ವರ್ತಕರ ಹಿತದೃಷ್ಟಿಯ ಪರಿಣಾಮದಿಂದ ದೀಪಾವಳಿಯ ನಂತರ ರ್ಯಾಲಿಯನ್ನು ನಡೆಸಲು ಮಂಡಳಿ ಒತ್ತಾಯಿಸಿದ್ದು, ಈ ಕುರಿತು ಸೋನಿಯಾ ಗಾಂಧೀಯವರಿಗೆ ಮನವಿ ಪತ್ರವನ್ನು ಬರೆದಿದೆ.
ನ.1ರಂದು ಬೃಹತ್ ಪ್ರತಿಭಟನೆಗೆ ರಾಹುಲ್ ಗಾಂಧಿ ಕರೆ
ಇನ್ನು ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ(SIR)ಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪದ ಹಿನ್ನೆಲೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ ʻದೆಹಲಿ ಚಲೋʼ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದಾರೆ. ರ್ಯಾಲಿಯಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ. ಆದ್ದರಿಂದ ಪ್ರತಿಭಟನೆಯನ್ನು ಮುಂದೂಡಲು ದೆಹಲಿ ವ್ಯಾಪಾರಿಗಳು ವಿನಂತಿಸಿಗೊಂಡಿದ್ದಾರೆ.ಇದನ್ನೂ ಓದಿ: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್ – ವಯೋಮಿತಿ 5 ವರ್ಷ ಸಡಿಲಿಸಿದ ಸಿಎಂ ವಿಜಯ್ ಸರ್ಕಾರ
