– ಒಂದೇ ದಿನ ನಾಲ್ವರು ಮಕ್ಕಳ ಜೊತೆ ಬಾವಿಗೆ ಹಾರಿ ಇಬ್ಬರು ಸೋದರಿಯರು ಆತ್ಮಹತ್ಯೆ
ಭೋಪಾಲ್: ಪತಿಯ ಸಾವಿನ ದುಃಖದಲ್ಲಿದ್ದ 8 ತಿಂಗಳ ಗರ್ಭಿಣಿ ಪತ್ನಿ ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ಸಹೋದರಿ ತಾನು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರತ್ಯೇಕ ಘಟನೆ ಮಧ್ಯಪ್ರದೇಶದ (Madhya Pradesh) ಬೇರಾದ್ ಮತ್ತು ಕೋಲಾರಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗುಂಗರ್ಗಾಂವ್ ಮತ್ತು ಸೆಸೈಪುರ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಗುಂಗರ್ಗಾಂವ್ನ (Gungargaon) ನಿವಾಸಿಯಾದ ಅಂಜಲಿ (25), ಮಗ ಪ್ರಶಾಂತ್ (6) ಮೃತ ದುರ್ದೈವಿಗಳು. ಅಂಜಲಿ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಇತ್ತೀಚಿಗಷ್ಟೇ ರಸ್ತೆ ಅಪಘಾತದಲ್ಲಿ ಪತಿ ಧರಮ್ವೀರ್ ರಾವತ್ ಅವರನ್ನು ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪತ್ನಿ ಜೊತೆ ಲವ್ವಿ ಡವ್ವಿ – ಪ್ರಶ್ನೆ ಮಾಡಿದ ಪತಿಗೆ 12 ಬಾರಿ ಇರಿದ ಜಿಮ್ ಟ್ರೈನರ್
ಪತಿಯ ಸಾವಿನ ದುಃಖದಲ್ಲಿದ್ದ ಅಂಜಲಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಘಟನೆಗೂ ಮುನ್ನ ಅಂಜಲಿ ತನ್ನ ಮೂವರು ಹೆಣ್ಣು ಮಕ್ಕಳನ್ನೂ ಕೂಡ ಬಾವಿಯ ಬಳಿ ಕರೆದುಕೊಂಡು ಹೋಗಿದ್ದರು. ಆದರೆ ಈ ಪೈಕಿ ಓರ್ವ ಮಗಳು ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿದ್ದಾಳೆ. ಇದರಿಂದ ಇನ್ನುಳಿದವರ ಪ್ರಾಣ ಉಳಿಯಲು ಸಹಾಯವಾಯಿತು. ಆದರೆ ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಅಂಜಲಿಯ ಹಿರಿಯ ಸಹೋದರಿ ಸೀತಾ ರಾವತ್ (40) ತಮ್ಮ ಮಕ್ಕಳಾದ ರಾಖಿ (14), ಪ್ರಿಯಾಂಕಾ (11) ಮತ್ತು ಶ್ಲೋಕ್ (6) ಮೂವರನ್ನು ಕರೆದುಕೊಂಡು ಹೋಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆಯಾದರೂ ಸೀತಾ ಮನೆಗೆ ಬಾರದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ಈ ಸಂಬಂಧ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳರ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಈವರೆಗೂ ತಿಳಿದುಬಂದಿಲ್ಲ.ಇದನ್ನೂ ಓದಿ: ಡ್ರಾಪ್ ಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ – ಟಿವಿಕೆ ಮುಖಂಡ ಕ್ರಿಸ್ಟೋಫರ್ ಅರೆಸ್ಟ್
