-ಪುನೀತ್ `ಹೃದಯಜ್ಯೋತಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್
ಕರ್ನಾಟಕ ರತ್ನ, ಕನ್ನಡಿಗರ ಅಪ್ಪು. ಕನ್ನಡದ ಕಂದ. ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅಗಲಿ ಇಂದಿಗೆ 5 ವರ್ಷಗಳು. 2021ರ ಅಕ್ಟೋಬರ್ 29ರಂದು ಹೃದಯಸ್ತಂಭನಕ್ಕೆ ಉಸಿರುಚೆಲ್ಲಿದ ಚಿತ್ರಪ್ರೇಮಿಗಳ ಆರಾಧ್ಯ ದೈವನ ಪುಣ್ಯಸ್ಮರಣೆಯನ್ನು ಇಂದು ಆಚರಿಸಲಾಗ್ತಿದೆ. ಪುನೀತ್ ರಾಜ್ಕುಮಾರ್, ಕನ್ನಡಿಗರನ್ನು ಅಗಲಿ ಐದು ವರ್ಷಗಳು ಕಳೆದರೂ ಅವರ ನೆನಪು ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲೂ ಹಸಿರಾಗಿದೆ.
ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿಗೆ ಕುಟುಂಬಸ್ಥರು, ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿದ್ರು. ಅಶ್ವಿನಿ ಪುನೀತ್, ಅಪ್ಪು ಮಗಳು ದೃತಿ, ರಾಘವೇಂದ್ರ ರಾಜ್ಕುಮಾರ್ ಕುಟುಂಬ ಅಪ್ಪುವಿಗೆ ಇಷ್ಟ ಆಗುವ ವೆಜ್ ಮತ್ತು ನಾನ್ ವೆಜ್ ಖಾದ್ಯಗಳನ್ನು ಇರಿಸಿ ಪೂಜೆ ಸಲ್ಲಿಸಿದ್ರು. ಅಪ್ಪು ಎಲ್ಲೂ ಹೋಗಿಲ್ಲ ನಮ್ಮೊಂದಿಗೆ ಇದ್ದಾನೆ. ಅವನು ಸಂಪಾದಿಸಿರುವ ಅಭಿಮಾನಿಗಳಲ್ಲಿ ನಾವು ನಮ್ಮ ಪುನೀತ್ನನ್ನು ಕಾಣುತ್ತೇವೆ ಎಂದು ರಾಘಣ್ಣ ಭಾವುಕರಾದ್ರು. ಇದನ್ನೂ ಓದಿ: ಶಿವರಾಜ್ಕುಮಾರ್ ಅಭಿನಯದ ‘ಡ್ಯಾಡ್’ ಚಿತ್ರದ ‘ಮಗಳೆ ನಿನ್ನ ಜೊತೆ’ ಹಾಡು ರಿಲೀಸ್
ಮರೆಯಾದ ಮಾಣಿಕ್ಯ ಪುನೀತ್ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮಗಳನ್ನು ಕಂಠೀರವ ಸ್ಟುಡಿಯೋದಲ್ಲಿ ಆಯೋಜಿಸಲಾಗಿತ್ತು. ಅನ್ನಸಂತರ್ಪಣೆ, ರಕ್ತದಾನ ಶಿಬಿರ, ನೇತ್ರದಾನ. ಬಡ ಮಕ್ಕಳಿಗೆ ನೋಟ್ಬುಕ್ಗಳನ್ನು ವಿತರಣೆ ಮಾಡಿದರು. ಈ ಮೂಲಕ ತಮ್ಮ ಅಭಿಮಾನವನ್ನು ತೋರ್ಪಡಿಸಿದ್ರು.
ಇನ್ನು ಅಪ್ಪು ಸ್ಮಾರಕ ವೀಕ್ಷಣೆಗೆ ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಆಗಮಿಸಿದ್ರು. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡು ಈಗಲೂ ನೋವು ಅನುಭವಿಸುತ್ತಿದ್ದೇವೆ. ಅವರ ಸಮಾಜಮುಖಿ ಕಾರ್ಯಗಳು ನಮ್ಮ ಜೀವನಕ್ಕೆ ಸ್ಪೂರ್ತಿ ಆಗಿದೆ ಎಂದ್ರು ಅಪ್ಪು ಫ್ಯಾನ್ಸ್ .ಇದನ್ನೂ ಓದಿ: ಅಪ್ಪು ಸ್ಮಾರಕಕ್ಕಾಗಿ ಸಿಎಂಗೆ ಮನವಿ ಮಾಡಿದ್ದೇವೆ: ರಾಘವೇಂದ್ರ ರಾಜ್ಕುಮಾರ್
ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅಭಿಮಾನಿ ದೇವರ ಅಗಲಿ ಇಂದಿಗೆ 5 ವರ್ಷಗಳು. ಅಪ್ಪು ಅನಿರೀಕ್ಷಿತ ಅಗಲಿಕೆಯ ನಂತರ, ಹೃದಯಾಘಾತದಿಂದ ಆಗುವ ಅಕಾಲಿಕ ಸಾವುಗಳನ್ನು, ಅದರಲ್ಲೂ ಯುವಜನರ ಸಾವುಗಳನ್ನು ತಡೆಯಲು ಹಾಗೂ ರೋಗಿಗೆ `ಗೋಲ್ಡನ್ ಅವರ್’ ಒಳಗೆ ತುರ್ತು ಚಿಕಿತ್ಸೆ ಸಿಗುವಂತೆ ಮಾಡಲು `ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ’ ಜಾರಿಗೆ ತಂದಿದೆ. ಸದ್ಯ ಈ ಯೋಜನೆಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದ್ದು, ಈ ಬಗ್ಗೆ ಆರೋಗ್ಯ ಸಚಿವ ಖಾದರ್ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ.
ಹೃದಯಜ್ಯೋತಿ ಯೋಜನೆ ಅಡಿ 13 ಸಾವಿರಕ್ಕೂ ಹೆಚ್ಚು ಜೀವಗಳ ರಕ್ಷಣೆ ಆಗಿದ್ದು, ಉಚಿತ ಚಿಕಿತ್ಸೆ ಜೊತೆಗೆ ಹೃದಯಾಘಾತದಿಂದ ಸಾವನ್ನಪ್ಪುವವರನ್ನ ರಕ್ಷಣೆ ಮಾಡಲಾಗಿದೆ. 31 ಜಿಲ್ಲೆಗಳಲ್ಲಿ 85 ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳನ್ನ ಹೃದಯಾಘಾತ ತಡೆಯುವ ಕೇಂದ್ರಗಳನ್ನಾಗಿ ರೂಪಿಸಿ ಕಾರ್ಯನಿರ್ವಹಣೆ ಮಾಡಲಾಗ್ತಿದೆ. ಈ ಯೋಜನೆಯನ್ನು ರಾಜ್ಯದ ಹಲವು ಜಿಲ್ಲೆಯ ತಾಲೂಕುಗಳಿಗೆ ವಿಸ್ತಾರ ಮಾಡೋದಕ್ಕೆ ಚಿಂತನೆ ಮಾಡಲಾಗ್ತಿದ್ದು, ಅಪ್ಪು ಅವರ ಹೆಸರಿನ ಈ `ಹೃದಯ ಜ್ಯೋತಿ’ ಇಂದು ಸಾವಿರಾರು ಮನೆಗಳಲ್ಲಿ ಜೀವದ ದೀಪವನ್ನು ಆರದಂತೆ ಕಾಪಾಡುತ್ತಿದೆ. ಅವರ ಮಾನವೀಯತೆ ಮತ್ತು ಸೇವಾ ಮನೋಭಾವ ಈ ಯೋಜನೆಯ ಮೂಲಕ ಸದಾ ಜೀವಂತವಾಗಿರಲಿದೆ ಎಂದು ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ: ದಶಮುಖ ರಾವಣನನ್ನ ಎದೆ ಮೇಲೆ ಧರಿಸಿದ ಯಶ್ – ಗೋಲ್ಡನ್ ಬ್ರೂಚ್ ಫುಲ್ ವೈರಲ್
ಒಟ್ಟಾರೆ. ಕನ್ನಡದ ಕಣ್ಮಣಿ. ಕರ್ನಾಟಕ ಕಂದನನ್ನು ಕಳೆದುಕೊಂಡು ಕರುನಾಡು ಬಡವಾಗಿದ್ದು, ಪುನೀತ್ ಸ್ಮಾರಕಕ್ಕೆ ಭೇಟಿ ನೀಡಿ ದೊಡ್ಮನೆ ನಗುವಿನ ದೊರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಅಮೆರಿಕದಲ್ಲೂ ಯಶ್ ರಾವಣಾರ್ಭಟ – ಹಸಿರು ಸೀರೆಯನ್ನುಟ್ಟು ಬಂದ ರಾಧಿಕಾಗೆ ಫ್ಯಾನ್ಸ್ ಫಿದಾ
