– ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದ ಲೈಸನ್ಸ್ ಸರ್ವೆಯರ್
ನೆಲಮಂಗಲ: ಇಲ್ಲಿನ ತಾಲೂಕು ಕಚೇರಿ ಮೇಲೆ ಇಂದು ಲೋಕಾಯುಕ್ತ ಪೊಲೀಸರು ದಾಳಿ (Lokayukta Police Raid) ನಡೆಸಿದ್ದು, ರೈತರೊಬ್ಬರ ಭೂಮಿ ಸರ್ವೆ ಮಾಡಲು ಲಂಚಕ್ಕೆ ಬೇಡಿಯಿಕಟ್ಟಿದ್ದ ಅಧಿಕಾರಿ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಮಹೇಶ್ ಗೌಡ ಲೋಕಾ ಬೆಲೆಗೆ ಸಿಕ್ಕಿಬಿದ್ದ ಲೈಸನ್ಸ್ ಸರ್ವೆಯರ್ (License Surveyor). ಇದನ್ನೂ ಓದಿ: ಅರಮನೆ, ಅಂಬಾರಿ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧ, ಕ್ಷಮೆ ಕೇಳುವ ಪ್ರಮೇಯವೇ ಇಲ್ಲ – ಯತೀಂದ್ರ
ಮಹೇಶ್ ಗೌಡ ರೈತರೊಬ್ಬರ ಬಳಿ ಭೂಮಿ ಸರ್ವೆಗೆ 20,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ರೈತನಿಂದ 20 ಸಾವಿರ ಹಣ ಪಡೆಯುವಾಗ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಮೂರು ಕಾರುಗಳಲ್ಲಿ ಬಂದಿರುವ 10ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು, ನೆಲಮಂಗಲ ತಾಲೂಕು ಕಚೇರಿಯ ಸರ್ವೆ ಕಚೇರಿಯಲ್ಲಿ ಹೆಚ್ಚಿನ ತಪಾಸಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಂಪಿ ಸಂರಕ್ಷಣೆಗೆ ಯುನೆಸ್ಕೋ ತಜ್ಞರ ಮೆಚ್ಚುಗೆ – ಡಿಸೆಂಬರ್ ಮಧ್ಯಭಾಗದಲ್ಲಿ ಅಂತಿಮ ವರದಿ ನಿರೀಕ್ಷೆ

