– ದೇಶದ ಜನತೆ ಮುಂದೆ ಬೇಷರತ್ ಕ್ಷೆಮೆ ಕೋರುವಂತೆ ಪಟ್ಟು
ಬೆಂಗಳೂರು: ಪ್ರಧಾನಿ ಮೋದಿಯವರ ತಂದೆ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ವಜಾ ಮಾಡಬೇಕು ಇಲ್ಲವೇ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಬಿಜೆಪಿ (BJP) ಆಗ್ರಹಿಸಿದೆ.
ಪ್ರಧಾನಮಂತ್ರಿ ಶ್ರೀ @narendramodi ಅವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಸಿರುವ ಅವಹೇಳನಕಾರಿ ಪದಗಳು ಕಾಂಗ್ರೆಸ್ನ ರಾಜಕೀಯ ಸಂಸ್ಕೃತಿಯ ಅಧಃಪತನಕ್ಕೆ ಸಾಕ್ಷಿ.
ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಮಂತ್ರಿಯವರ ಕುಟುಂಬದ ಬಗ್ಗೆಯೇ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ತನ್ನ ಹತಾಶೆ ಮತ್ತು ಹತಾಶ ಮನಸ್ಥಿತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ.
ವಿಚಾರಗಳ ಮೂಲಕ ರಾಜಕೀಯ ಎದುರಿಸುವ ಶಕ್ತಿ ಕಳೆದುಕೊಂಡಿರುವ ಕಾಂಗ್ರೆಸ್, ವೈಯಕ್ತಿಕ ನಿಂದನೆಗೆ ಇಳಿದಿರುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಇಂತಹ ಅಸಂಸ್ಕೃತ ರಾಜಕಾರಣಕ್ಕೆ ದೇಶದ ಜನತೆ ಎಂದಿಗೂ ಮನ್ನಣೆ ನೀಡುವುದಿಲ್ಲ.
#CongressInsultsPM #RespectPM
#CongressMafiaGang #KhargeInsultsPM— R. Ashoka (@RAshokaBJP) October 26, 2026
ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ಇಂದು ಬಿಜೆಪಿ ನಾಯಕರು ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ರು. ಛಲವಾದಿ ನಾರಾಯಣ ಸ್ವಾಮಿ, ಅಶ್ವಥ್ ನಾರಾಯಣ, ಸಿಕೆ ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ರವಿಕುಮಾರ್, ಕೇಶವಪ್ರಸಾದ ಸೇರಿ ಹಲವು ನಾಯಕರು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಮಾತಾಡಿದ ನಾಯಕರು, ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ರು. ಮೋದಿಯರ ತಂದ ಬಗ್ಗೆ ಮಾತಾಡಿದ ಖರ್ಗೆಯವನ್ನು ಕಾಂಗ್ರೆಸ್ ವಜಾ ಮಾಡಬೇಕು ಅಥವಾ ಖರ್ಗೆಯವರು ದೇಶದ ಜನತೆ ಮುಂದೆ ಬೇಷರತ್ ಕ್ಷೆಮೆ ಕೋರಬೇಕು ಎಂದು ಆಗ್ರಹಿಸಿದ್ರು.
ಬಳಿಕ ಅಶೋಕ್ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆಗೆ ನಾಯಕರು ಹೊರಟ್ರು. ಈ ವೇಳೆ ಬ್ಯಾರಿಕೇಡ್ಗಳನ್ನು ರಸ್ತೆಗೆ ಅಡ್ಡ ಇಟ್ಟು ಪೊಲೀಸರು ಪ್ರತಿಭಟನಾಕಾರನ್ನು ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನ ಮತ್ತಷ್ಟು ತೀವ್ರಗೊಳಿಸಿದ ಬಿಜೆಪಿ ನಾಯಕರು ಬ್ಯಾರಿಕೇಡ್ಗಳ ಮೇಲೆಯೇ ಹತ್ತಿ ಧಿಕ್ಕಾರ ಕೂಗಿದ್ರು. ಪೊಲೀಸರು ಹರಸಾಹಸ ಪಟ್ಟು ಪ್ರತಿಭನಟನಾ ನಿರತ ನಾಯಕರನ್ನು ಬ್ಯಾರಿಕೇಡ್ಗಳಿಂದ ಕೆಳಗಿಸಿಳಿಸಿದ್ರು.
ಬಳಿಕ ಎಲ್ಲರನ್ನೂ ಬಲವಂತವಾಗಿ ಬಸ್ ಒಳಗೆ ತುಂಬಿಕೊಂಡು ವಶಕ್ಕೆ ಪಡೆದ್ರು. ನಂತರ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದ್ರು.

