– ಪತ್ನಿ vs ಆಪ್ತ ಯಾರ ಪರ ನಿಲ್ತಾರೆ ದಚ್ಚು?
ನಟ ದರ್ಶನ್ (Darshan) ಅವರ ಸುತ್ತ ಮತ್ತೊಂದು ಚರ್ಚೆ ಶುರುವಾಗಿದೆ. ಒಂದು ಕಡೆ ಸಪ್ತಪದಿ ತುಳಿದ ಪತ್ನಿ ವಿಜಯಲಕ್ಷ್ಮಿ, ಮತ್ತೊಂದು ಕಡೆ ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತಿದ್ದ ಆಪ್ತ ಧನ್ವೀರ್. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ದರ್ಶನ್ ಮುಂದಿನ ನಡೆ ಏನು ಎಂಬ ಕುತೂಹಲ ಹೆಚ್ಚಾಗಿದೆ.
ದರ್ಶನ್ ಜೈಲು ಸೇರಿದ ಬಳಿಕ ಅವರ ಬೆಂಬಲಕ್ಕೆ ವಿಜಯಲಕ್ಷ್ಮಿ ಮತ್ತು ಧನ್ವೀರ್ (Dhanveer Gowda) ನಿಂತಿದ್ದರು. ದರ್ಶನ್ ಅವರ ಕಾನೂನು ಹೋರಾಟದ ಸಂದರ್ಭದಲ್ಲೂ ವಿಜಯಲಕ್ಷ್ಮಿ ಸಕ್ರಿಯರಾಗಿದ್ದರು. ಇತ್ತ ಧನ್ವೀರ್ ಕೂಡ ದರ್ಶನ್ ಅವರೊಂದಿಗೆ ಹಲವು ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಜಾಮೀನಿನ ಮೇಲೆ ಹೊರಬಂದ ಬಳಿಕ ಧನ್ಯವಾದ ತಿಳಿಸಿದವರ ಪಟ್ಟಿಯಲ್ಲೂ ಧನ್ವೀರ್ ಹೆಸರು ಕಾಣಿಸಿಕೊಂಡಿತ್ತು. ಕೋರ್ಟು, ಕಚೇರಿ, ಆಸ್ಪತ್ರೆ ಹಾಗೂ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ದರ್ಶನ್ ಜೊತೆ ಧನ್ವೀರ್ ಕಾಣಿಸಿಕೊಂಡಿದ್ದರು.
ದರ್ಶನ್ ವಿಚಾರದಲ್ಲಿ ಈ ಹಿಂದೆ ವಿಜಯಲಕ್ಷ್ಮಿ ಮತ್ತು ಧನ್ವೀರ್ ಒಂದೇ ನಿಲುವಿನಲ್ಲಿ ಇದ್ದರು ಎಂಬ ಚರ್ಚೆ ಇತ್ತು. ಆದರೆ ಇದೀಗ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿರುವ ಬಗ್ಗೆ ವರದಿಗಳು ಹಾಗೂ ಚರ್ಚೆಗಳು ಕೇಳಿಬರುತ್ತಿವೆ. ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ಗಂಭೀರ ಆರೋಪಗಳನ್ನ ಮಾಡಿದ್ದು, ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ಈಗ ವಿಜಯಲಕ್ಷ್ಮಿ (Vijayalakshmi) ಮತ್ತು ಧನ್ವೀರ್ ಪ್ರತ್ಯೇಕವಾಗಿ ದರ್ಶನ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ದರ್ಶನ್ ಅವರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿವೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಇಲ್ಲಿಯವರೆಗೆ ಕಷ್ಟದ ಸಮಯದಲ್ಲಿ ದರ್ಶನ್ ಬೆನ್ನಿಗೆ ನಿಂತಿದ್ದ ಇಬ್ಬರ ನಡುವೆಯೇ ಈಗ ಅಂತರ ಸೃಷ್ಟಿಯಾಗಿದೆಯೇ? ಈ ಬೆಳವಣಿಗೆಗೆ ದರ್ಶನ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಒಂದೆಡೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಮತ್ತೊಂದೆಡೆ ಆಪ್ತ ಧನ್ವೀರ್. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ದರ್ಶನ್ ಯಾರ ಪರ ನಿಲ್ಲುತ್ತಾರೆ? ಜೈಲಿನಲ್ಲಿರೋ ದರ್ಶನ್ ಮುಂದಿನ ನಡೆ ಏನು? ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

