- ಜೆಸಿಬಿ ಮೇಲೆ ಕಲ್ಲು ತೂರಾಟ
ಬೆಳಗಾವಿ: ಫುಟ್ಪಾತ್ (Footpath) ತೆರವಿಗೆ ಹೋಗಿದ್ದ ಪಾಲಿಕೆ ಎಂಜಿನಿಯರ್ (Belagavi City Corporation Engineer) ಮೇಲೆ 40ಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಗರದ (Belagavi) ನಾಥಪೈ ಸರ್ಕಲ್ ಬಳಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಪಾಲಿಕೆಯ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಅಲ್ಲಿನ ಅಂಗಡಿ ಮಾಲೀಕರು ಜೆಸಿಬಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಜೆಸಿಬಿಯ ಗಾಜು ಒಡೆದು ಹೋಗಿದೆ. ಅಲ್ಲದೇ ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಫುಟ್ಪಾತ್ ಸರಿ ಮಾಡುವಂತೆ ಜಿಬಿಎಗೆ ಮನವಿ ಮಾಡಿ ಸೋತ ಉದ್ಯಮಿ – ಕೊನೆಗೆ ಸ್ವಂತ ದುಡ್ಡಿನಲ್ಲಿ ರಿಪೇರಿ
ಈ ಘಟನೆಯಿಂದ ನಾಥಪೈ ವೃತ್ತದಲ್ಲಿ ಕೆಲಕಾಲ ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಬಳಿಕ, ಶಾಹಾಪುರ ಪೊಲೀಸ್ ಠಾಣೆಗೆ ಆಗಮಿಸಿದ ಅಧಿಕಾರಿಗಳು ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ. ಹಲ್ಲೆ ಮಾಡಿದವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪಾಲಿಕೆ ಆಯುಕ್ತ ಕಾರ್ತಿಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಶಿವಾಜಿನಗರದಲ್ಲಿ ಮತ್ತೆ ಫುಟ್ಪಾತ್ ತೆರವು ಕಾರ್ಯ – 100ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲು
