ನಗೋಯಾ: ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ (Asian Para Games) ಭಾರತ ಪದಕ ಗೆಲುವಿನ ಓಟವನ್ನು ಮುಂದುವರಿಸಿದೆ. ಸುವರ್ಣ ರಾಜ್ (Suvarna Raj) ಅವರು ಮಹಿಳೆಯರ ಡಿಸ್ಕಸ್ ಎಸೆತ (F54 ವಿಭಾಗ)ದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡರು.
ಪ್ಯಾರಾ-ಆರ್ಚರಿಯಲ್ಲಿ (ಬಿಲ್ಲುಗಾರಿಕೆ) ಮಹಿಳೆಯರ W1 ವಿಭಾಗದ ಫೈನಲ್ ಪಂದ್ಯದಲ್ಲಿ ಸ್ವಾತಿ ಚೌಧರಿ ಅವರು ಚೀನಾದ ಸೆನ್ ಮೆಂಗ್ಕಾನ್ ವಿರುದ್ಧ 4-6 ಅಂತರದಲ್ಲಿ ಸೋತರೂ, ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕವನ್ನು ತಂದುಕೊಟ್ಟರು. ಇದನ್ನೂ ಓದಿ: Asian Para Games: ಭಾರತಕ್ಕೆ 10ನೇ ಚಿನ್ನ ತಂದುಕೊಟ್ಟ ಆಯುಷ್ ವರ್ಮಾ – ಆರ್ಚರಿಯಲ್ಲಿ ಶೀತಲ್ & ಪಾಯಲ್ಗೆ ಬೆಳ್ಳಿ
ಇದೀಗ ಎಲ್ಲರ ಗಮನ ತಾರೆ ಬಿಲ್ಲುಗಾರ್ತಿ ಶೀತಲ್ ದೇವಿ ಅವರತ್ತ ನೆಟ್ಟಿದೆ. ಅವರು ಕಾಂಪೌಂಡ್ ಮಹಿಳಾ ವಿಭಾಗದ ಚಿನ್ನದ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಸಿಂಗಾಪುರದ ನೂರ್ ಅಲಿಮ್ ಅವರನ್ನು ಎದುರಿಸಲಿದ್ದಾರೆ. ಪ್ಯಾರಾ-ಅಥ್ಲೆಟಿಕ್ಸ್ನಲ್ಲಿ, ಪುರುಷರ ಹೈ ಜಂಪ್ (ಎತ್ತರ ಜಿಗಿತ – T63 ವಿಭಾಗ) ಫೈನಲ್ನಲ್ಲಿ ಶೈಲೇಶ್ ಕುಮಾರ್, ರಾಹುಲ್ ಮತ್ತು ವರುಣ್ ಭಾಟಿ ಸ್ಪರ್ಧಿಸಲಿದ್ದಾರೆ.
ಮಹಿಳೆಯರ 400 ಮೀಟರ್ ಓಟದ (T47 ವಿಭಾಗ) ಫೈನಲ್ನಲ್ಲಿ ಅಂಜನಬೆನ್ ಬುಂಬಡಿಯಾ ಮತ್ತು ಜಯಂತಿ ಬೆಹೆರಾ ಭಾಗವಹಿಸಲಿದ್ದಾರೆ. ಪುರುಷರ ಜಾವೆಲಿನ್ ಎಸೆತದ (F56/F57 ವಿಭಾಗ) ಫೈನಲ್ನಲ್ಲಿ ಪರ್ವೀನ್ ಕುಮಾರ್ ಹಾಗೂ ಲಾಂಗ್ ಜಂಪ್ (ಉದ್ದ ಜಿಗಿತ – T44/T62/T64 ವಿಭಾಗ) ಫೈನಲ್ನಲ್ಲಿ ಸೋಲೈರಾಜ್ ಧರ್ಮರಾಜ್ ಕಣಕ್ಕಿಳಿಯಲಿದ್ದಾರೆ. ಮೂರನೇ ದಿನದ ಅಂತ್ಯಕ್ಕೆ ಭಾರತದ ಒಟ್ಟು ಪದಕಗಳ ಸಂಖ್ಯೆ 62 ಆಗಿತ್ತು. ಇದನ್ನೂ ಓದಿ: ಪುರುಷರ ಡಿಸ್ಕಸ್ ಥ್ರೋದಲ್ಲಿ ಏಷ್ಯನ್ ದಾಖಲೆ ಮುರಿದು ಚಿನ್ನ ಗೆದ್ದ ಪ್ರಣವ್ ಸೂರ್ಮಾ
