ನಗೋಯಾ: 2026ರ ಏಷ್ಯನ್ ಪ್ಯಾರಾ ಗೇಮ್ಸ್ (Asian Para Games) ಪುರುಷರ ಡಿಸ್ಕಸ್ ಥ್ರೋ (Discus Throw) ಸ್ಪರ್ಧೆಯಲ್ಲಿ ಭಾರತದ ಪ್ರಣವ್ ಸೂರ್ಮಾ ಚಿನ್ನದ ಪದಕ ಗೆದ್ದಿದ್ದಾರೆ.
ಐಚಿ ನಗೋಯಾದಲ್ಲಿ ನಡೆಯುತ್ತಿರುವ 5ನೇ ಏಷ್ಯನ್ ಪ್ಯಾರಾ ಗೇಮ್ಸ್ನ ಪುರುಷರ ಡಿಸ್ಕಸ್ ಥ್ರೋ 51/52/53 ವಿಭಾಗದಲ್ಲಿ ಭಾರತದ ಪ್ರಣವ್ ಸೂರ್ಮಾ (Pranav Soorma) ಚಿನ್ನದ ಪದಕ ತಂದುಕೊಟ್ಟಿದ್ದಾರೆ. 11.66 ಮೀಟರ್ ಎಸೆದು ದಾಖಲೆಯೊಂದಿಗೆ ಸೂರ್ಮಾ ಚಿನ್ನದ ಪದಕ ಗೆದ್ದರೆ, ಭಾರತದ ರಾಮ್ ರತನ್ ಸಿಂಗ್ ಬೆಳ್ಳಿ ಪದಕ ಪಡೆದಿದ್ದಾರೆ. ಇದನ್ನೂ ಓದಿ: Asian Para Games: 400 ಮೀಟರ್ ಟಿ20 ವಿಭಾಗದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ದೀಪ್ತಿ ಜೀವಂಜಿ
7TH GOLD MEDAL AGAYA HAI PRABHU 🏅 https://t.co/KaoQFv9ZQG
— The Khel India (@TheKhelIndia) October 20, 2026
16ನೇ ವಯಸ್ಸಿನಲ್ಲಿ ಉಂಟಾದ ಬೆನ್ನುಹುರಿಯ ಗಾಯದಿಂದಾಗಿ ಕೈಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ (ಕ್ವಾಡ್ರಿಪ್ಲೇಜಿಯಾ) ಈ ಭಾರತೀಯ ಪ್ಯಾರಾ-ಅಥ್ಲೀಟ್ 31 ವರ್ಷದ ಸೂರ್ಮಾ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮದೇ ದೇಶದ ರಾಮ್ ರತನ್ ಸಿಂಗ್ ಅವರನ್ನು ಸೋಲಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ನ ಎರಡನೇ ದಿನದಂದು ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ದೇಶದ ಒಟ್ಟು ಪದಕಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 9 ಚಿನ್ನ, 11 ಬೆಳ್ಳಿ ಹಾಗೂ 14 ಕಂಚಿನ ಪದಕ ಸೇರಿದೆ.ಇದನ್ನೂ ಓದಿ:Asian Para Games: 400 ಮೀಟರ್ ಟಿ20 ವಿಭಾಗದಲ್ಲಿ ಚಿನ್ನ ಗೆದ್ದು ದಾಖಲೆ ಬರೆದ ದೀಪ್ತಿ ಜೀವಂಜಿ
