ಕಾರವಾರ: ಸುಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗುತ್ತಿದ್ದ ಮೂರು ಜನ ಪ್ರವಾಸಿಗರನ್ನು (Tourists) ಜೀವ ರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಗೋಕರ್ಣದ (Gokarna) ಮುಖ್ಯ ಕಡಲತೀರದಲ್ಲಿ ಇಂದು ಸಂಜೆ ನಡೆದಿದೆ.
ಹಾವೇರಿ ಮೂಲದ ಹಾನಗಲ್ ತಾಲೂಕಿನ ಮಹಮದ್ ಅಪ್ಸನ್ ಅಲಿ (21), ಅಶ್ರಫ್ ಮೆಹಬೂಬ ಅಲಿ (22) ಮತ್ತು ಚಿಕ್ಕಬಳ್ಳಾಪುರ ಮೂಲದ ಶ್ರೀನಿವಾಸ ವೆಂಕಟ ಸ್ವಾಮಿ (35) ರಕ್ಷಣೆಗೆ ಒಳಗಾದ ಪ್ರವಾಸಿಗರು. ಇದನ್ನೂ ಓದಿ: ಶಿವಮೊಗ್ಗ ದಸರಾ ಆನೆ ಅವಘಡ – ಮುಂದಿನ ಜಂಬೂ ಸವಾರಿಗೂ ಮುನ್ನ ಆನೆಗಳಿಗೆ 20 – 30 ದಿನ ಕಡ್ಡಾಯ ತಾಲೀಮು: ರಾಮಲಿಂಗಾ ರೆಡ್ಡಿ
ಸಮುದ್ರದಲ್ಲಿ 6 ಜನ ಗೆಳೆಯರು ನೀರಿನಲ್ಲಿ ಈಜಾಡುತ್ತಿದ್ದಾಗ ಸುಳಿಗೆ ಸಿಲುಕಿ ದಡಕ್ಕೆ ಬರಲು ಆಗದೆ ಮುಳುಗುತ್ತಿದ್ದರು. ತಕ್ಷಣ ಜೀವ ರಕ್ಷಕ ಸಿಬ್ಬಂದಿ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ಮೋಹನ್ ಅಂಬಿಗ, ರೋಷನ್ ಖಾರ್ವಿ ಲೋಕೇಶ್ ಹರಿಕಂತ್ರ ಅವರನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ವೈಭವ್ ಸೂರ್ಯವಂಶಿ ಕಾಯಲೇಬೇಕು: ಶ್ರೇಯಸ್ ಅಯ್ಯರ್
ಇವರಿಗೆ ಲೈಫ್ ಗಾರ್ಡ್ ಮೇಲ್ವಿಚಾರಕರಾದ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ, ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ದೀಪಕ್ ಗೌಡ, ಮಹೇಶ್ ಹೊಸಕಟ್ಟೆ ಇವರು ಸಹಾಯ ಮಾಡಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾದಲ್ಲಿ ಜಂಬೂ ಸವಾರಿ ಸ್ಥಗಿತ – ಮುಂದುವರೆದ ಪೂಜೆ
