ನವದೆಹಲಿ: ಅಕ್ಟೋಬರ್ 24-25ರಂದು ಪ್ರಧಾನಿ ಮೋದಿ (PM Modi) ವಾರಣಾಸಿ (Varanasi) ಹಾಗೂ ಕೇದಾರನಾಥಕ್ಕೆ (Kedarnath) ಭೇಟಿ ನೀಡಲಿದ್ದಾರೆ.
ಅ.25ರಂದು ತಮ್ಮ ಸ್ವ-ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದು, ನಮೋ ಘಾಟ್ನಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಸೇವಾಪುರಿಯಲ್ಲಿ ಕಾರ್ಖಾನೆಯೊಂದನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: Asian Para Games: ಮತ್ತೊಂದು ಚಿನ್ನ ಗೆದ್ದ ಸಿಮ್ರಾನ್ ಶರ್ಮಾ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಇತರ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಅವರು ಈ ವಾಯು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. `ಗಂಗೆಯ ಮೇಲೆ ರೆಕ್ಕೆಗಳು’ ಎಂಬ ಥೀಮ್ನಡಿ ಆಯೋಜಿಸಲಾಗಿರುವ `ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನ 2026′ ಎಂಬ ಈ ಕಾರ್ಯಕ್ರಮವು, ವಾಯುಪಡೆಯ ಯುದ್ಧ ಸಾಮರ್ಥ್ಯಗಳು, ಸುಧಾರಿತ ತಂತ್ರಜ್ಞಾನ ಮತ್ತು ಹಾರಾಟದ ಕೌಶಲ್ಯಗಳನ್ನು ಪ್ರದರ್ಶಿಸಲಿದೆ.
ವಾರಣಾಸಿಯಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿದ ನಂತರ, ಪ್ರಧಾನಿ ಮೋದಿ ಅವರು ಭಾನುವಾರ (ಅ.25) ಸಂಜೆ ಉತ್ತರಾಖಂಡದ ಕೇದಾರನಾಥಕ್ಕೆ ತೆರಳಲಿದ್ದು, ಕೇದಾರನಾಥ ಕಾರಿಡಾರ್ ಅಭಿವೃದ್ಧಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಬಳಿಕ ಹಿಮಾಲಯದ ಪ್ರಮುಖ ತೀರ್ಥಯಾತ್ರಾ ಕೇಂದ್ರವಾದ ಕೇದರನಾಥ ಮತ್ತು ಅದರ ಸುತ್ತಮುತ್ತ ನಡೆಯುತ್ತಿರುವ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಕೆಲಸಗಳ ಸ್ಥಿತಿಗತಿಗಳನ್ನು ಅವಲೋಕಿಸಲಿದ್ದಾರೆ.ಇದನ್ನೂ ಓದಿ: ಬೇರೆ ದೇಶಗಳಲ್ಲಿ ಬೆಂಕಿ ಹಚ್ಚೋದನ್ನು ನೋಡುತ್ತಿದ್ದೇವೆ, ನೀವು Gen Z ಅಲ್ಲ- ಸಿಜೆಪಿ ನಾಯಕರಿಗೆ ಹೈಕೋರ್ಟ್ ಕ್ಲಾಸ್
