ವಿಜಯಪುರ: ವಿಜಯೆಂದ್ರ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ. ವಿಜಯೇಂದ್ರ ಬದಲಾದ ಬಳಿಕವೇ ಉಳಿದಿದ್ದೆಲ್ಲ ಎಂದು ವಿಜಯೆಂದ್ರ ಹಾಗೂ ಯತ್ನಾಳ್ ಮುಖಾಮುಖಿ ಭೇಟಿ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ಖಾಸಗಿ ಕಾರ್ಯಕ್ರಮಕ್ಕೆ ಹೋದಾಗ ವಿಜಯೇಂದ್ರ (Vijayendra) ಭೇಟಿಯಾಗಿದ್ದಾರೆ. ಇದಕ್ಕೆ ಬೇರೆ ಯಾವುದೇ ರಾಜಕೀಯ ಕಾರಣ ಇಲ್ಲ. ನಾರಾಯಣ ಸಾ ಭಾಂಡಗೆ ಮನೆಯಲ್ಲಿ ದಸರಾ ಹಬ್ಬಕ್ಕೆ ಹೋದಾಗ ನಿರಾಣಿ ಭೇಟಿಯಾಗಿದ್ದಾರೆ. ಯಾರ ಜೊತೆಗೂ ನಾವೇನು ರಾಜಕೀಯ ಮಾತನಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ-ಯತ್ನಾಳ ಭೇಟಿ ವಿಚಾರದಲ್ಲಿ ವಿಶೇಷ ಏನೂ ಇಲ್ಲ: ಸತೀಶ್ ಜಾರಕಿಹೊಳಿ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಳಿಕವೇ ಮುಂದಿನ ಮಾತುಕತೆ. ವಿಜಯೇಂದ್ರ ನನಗೆ ವೈಯಕ್ತಿಕವಾಗಿ ಬಹಳ ಹಾನಿ ಮಾಡಿದ್ದಾರೆ. ಅವರಪ್ಪ ಸಿಎಂ ಆಗಿದ್ದಾಗ ನನ್ನ ಲೆಟರಗಳನ್ನ ಹರಿದು ಹಾಕಿದ್ದಾರೆ. ನನಗೆ ವೈಯಕ್ತಿಕವಾಗಿ ವಿಜಯೆಂದ್ರ ವಿರುದ್ಧ ದ್ವೇಷವಿದೆ ಎಂದರು.
ನಮ್ಮ ನಡುವೆ ಏನೂ ಇಲ್ಲ ಎಂದು ವಿಜಯೆಂದ್ರ ಎಷ್ಟೇ ಪ್ರಚಾರ ಮಾಡಿದರೂ ನನಗೇನು ಸಮಸ್ಯೆಯಿಲ್ಲ. ನಾಯಕತ್ವ ಬದಲಾವಣೆ ಬಳಿಕವೇ ಮುಂದಿನ ಮಾತು. ನಾನು ನಾಳೆ ದೆಹಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮಾಡಲು ಹೋಗುತ್ತಿದ್ದೇನೆ. ದೆಹಲಿಯಲ್ಲಿ ಯಾವುದೇ ರಾಷ್ಟ್ರೀಯ ನಾಯಕರನ್ನ ಭೇಟಿಯಾಗಲ್ಲ. ಕಬ್ಬು ಹೋರಾಟಗಾರರ ಬಗ್ಗೆ ಸಚಿವರ ಜೊತೆಗೆ ಮಾತನಾಡುತ್ತೇನೆ. ಬಿಜೆಪಿಗೆ ವಾಪಸ್ ಬಗ್ಗೆ ಯಾವುದೇ ನಾಯಕರ ಜೊತೆ ಭೇಟಿ ಮಾಡಲ್ಲ ಎಂದು ಖಡಕ್ ಉತ್ತರ ಕೊಟ್ಟರು.ಇದನ್ನೂ ಓದಿ: ಮೈಸೂರು ದಸರಾದಲ್ಲಿ ವಿದೇಶಿ ಗಣ್ಯರನ್ನು ಸ್ವಾಗತಿಸಿದ ಸಚಿವ ರಾಯರೆಡ್ಡಿ
